ಜೀತಪದ್ಧಿತಿಯ ಮಾತ್ತೊಂದು ರೂಪ "ಬಿಟ್ಟಿ ಚಾಕರಿ
*ಬಿಟ್ಟಿಚಾಕರಿಎಂದರೇನು?. *
ಕೆಲವು ಸಮುದಾಯಗಳು ಸಾಮಾಜಿಕ ಸಂಪ್ರದಾಯದ ನಿಭಂ೯ಧಗಳ ಕಾರಣಗಳಿಂದ ಯಾವುದೇ ವೇತನವಿಲ್ಲದೇ ವಷಾಂ೯ತ್ಯದಲ್ಲಿ ಹಿಡಿಗೂಳು ಜೋಳ/ಧಾನ್ಯಕ್ಕೆ ಇಡೀ ವರ್ಷ ದಿನದ ಕೆಲವು ಗಂಟೆಗಳ ಕಾಲ ಯಜಮಾನರ ಮನೆಯ ದನದ ಕೊಟ್ಟಿಗೆ ಸ್ವಚ್ಛಗೊಳಿಸುವ ಕೆಲಸ,ಮನೆಯ ಪ್ರಾಂಗಣವನ್ನು ಶುಚಿ ಮಾಡುವ ಕೆಲಸ,ಹಾಗೂ ಸಮಾರಂಭಗಳಲ್ಲಿ ಅವರು ಸೂಚಿಸುವ ರೂಢಿಗತ ಕೆಲಸ ಮಾಡುವುದನ್ನು ""ಬಿಟ್ಟಿಚಾಕರಿ"" ಎಂದು ಗುರುತಿಸಲಾಗಿದೆ.
*ಬಿಟ್ಟಿ ಚಾಕರಿಯಲ್ಲಿ ಕಂಡುಬರುವ ಕೆಲಸದ ವಿಧಾನಗಳು ಮತ್ತು ಲಕ್ಷಣಗಳು*
ಬಿಟ್ಟಿ ಚಾಕರಿಯಲ್ಲಿ ಸ್ವಚ್ಛತೆಯ ಕೆಲಸಗಳ ಜೊತೆಗೆ ಹಲೆಗೆ ಬಡಿಯುವುದು, ಹಿಲಾಲ್( ಪಂಜು) ಹಿಡಿಯುವುದು, ದಾನದ ಬುಟ್ಟಿ ಹೊರುವುದು, ಶವ ಎತ್ತಿ ಕೊಂಡು ಹೋದ ಮೇಲೆ ಶವ ಇಟ್ಟ ಜಾಗವನ್ನು ತೊಳೆದು ಸಗಣಿಯಿಂದ ಸಾರಿಸಿ, ಅಲ್ಲಿ ಬಿದ್ದಿರುವ ಕಸ ಕಡ್ಡಿ, ಹೂ ಎಲೆ, ಮುಂತಾದವುಗಳನ್ನು ಗುಡಿಸಿ ಸುಟ್ಟು ಹಾಕುವುದು ಹಕ್ಕೆ(ಕೊಟ್ಟಿಗೆ),ಹುಸಿ( ಮನೆ ಒಳಗೆ ಹೋಗುವ ದಾರಿ), ಅಂಗಳ ಬಾಗಿಲನ್ನು ತೊಳೆದು ಶುಚಿಗೊಳಿಸುವುದು, ಸಿದಗಿ (ಶವ ಕೊಂಡೊಯ್ಯಲಿಕ್ಕೆ ಬಳಸುವ ಮರದ ಅಥವಾ ಕಬ್ಬಿಣದ ಒಂದು ಸಾಧನ) ಹೊರುವುದು ಅಂದರೆ ಶವ ಸಂಸ್ಕಾರ ಆದ ಮೇಲೆ ಊರ ಮಠದಲ್ಲಿ ಇಡುವುದು, ಸತ್ತ ಪ್ರಾಣಿಗಳ ಶವ ಹೊರುವುದು, ಇತ್ಯಾದಿ ಕೆಲವು ವಿಶಿಷ್ಟ ಸೇವೆಗಳು ಸೇರಿವೆ. ನಂತರ 15 ದಿನಗಳ ತನಕ ಸಾಂತ್ವನ ನೀಡಲು ಬಂದವರಿಗೆ ಊಟ-ಉಪಚಾರವಾದ ಮೇಲೆ ತಿಂಡಿ ತಿನಿಸುಗಳನ್ನು ತಿಂದ ಮೇಲೆ ಎಲೆ, ಟೀ ಕಪ್ಪುಗಳನ್ನು ಎತ್ತಿ ಹಾಕಲು ಒಬ್ಬರು ಇಡೀ ದಿವಸ ಇರಲೇ ಬೇಕು. ಅವರು ಆ ದಿನಗಳಂದು ಬೇರೆ ದಿನಗೂಲಿಗೆ ಹೋಗುವ ಹಾಗಿಲ್ಲ. ಯಜಮಾನರ ಹೊಲ ಕಾಯುವುದಕ್ಕೆ ರಾತ್ರಿ ಹೊಗುವುದು ಮುಂತಾದವುಗಳು.
*ಬಿಟ್ಟಿ ಚಾಕರಿಯಲ್ಲಿ ತೊಡಗಿರುವವರಿಗೆ ಸಿಗುವಸೌಲಭ್ಯಗಳು*
ದಿನ ನಿತ್ಯದ ಬಿಟ್ಟಿ ಚಾಕರಿ ಮಾಡುವವರಿಗೆ ನಿದಿ೯ಷ್ಠವಾಗಿ ಹಣವಾಗಲಿ ಮತ್ತು ಇತರೆ ಯಾವುದೇ ಸೌಲಭ್ಯ ನೀಡುವುದು ಕಂಡು ಬರುವುದಿಲ್ಲ (ನಿಗದಿತ ದರ ಇರುವುದಿಲ್ಲ) ಯಜಮಾನರು ಅಥವಾ ಧಣಿಗಳು ಬಿಟ್ಟಿ ಚಾಕರಿಗೆ ಒಪಿಕೊಂಡಂತೆ ವರ್ಷ ಕ್ಕೆ ಒಂದು ಚೀಲದಂತೆ ಜೋಳ/ರಾಗಿ/ಭತ್ತವನ್ನು ಹಾಗೂ ಹೊಲ ಗದ್ದೆಗಳಲ್ಲಿ ಬೆಳೆದ ಬೇರೆ ಬೇರೆ ಕಾಳುಗಳನ್ನು (ಗೋಧಿ, ಶೇಂಗಾ, ಬೇಳೆ, ಬೆಲ್ಲ, ಹೆಸರು ಇತ್ಯಾದಿ ಕಾಳುಕಡ್ಡಿ) 2ರಿಂದ 10 ಕಿಲೋ ವರೆಗೆ ನೀಡುವುದು, ಮದ್ಯಪಾನ ಚಟದವರಿಗೆ ದಿನ ನಿತ್ಯ ಅಷ್ಟೊ ಇಷ್ಟೋ ಹಣ ನೀಡುವುದು.
ದಿನ ನಿತ್ಯದ ಬಿಟ್ಟಿ ಚಾಕರಿಯಲ್ಲಿ ತೊಡಗಿರುವವರಿಗೆ ನೀಡುವ ದವಸ ಧಾನ್ಯವು ಮತ್ತು ಅಲ್ಪ ಮೊತ್ತ ಹಣ ಅವರ ಕೆಲಸಕ್ಕೆ ಸರಿಸಮವಾಗಿರುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ ಬಿಟ್ಟಿ ಚಾಕರಿ ಮಾಡುವ ವ್ಯಕ್ತಿಗೆ ಹಾಗೂ ಅವರ ಕುಟುಂಬಕ್ಕೆ ಊಟಕ್ಕಂತೂ ಕೊರತೆಯಿರುವುದಿಲ್ಲ. ಜೊತೆಗೆ ಒಂದಿಷ್ಟು ಹಣವನ್ನು ಕಾಣಿಕೆಯಾಗಿ ನೀಡುತ್ತಾರೆ. ಕೆಲವೊಮ್ಮೆ ಮಾನವಿಯತೆವುಳ್ಳ ಯಜಮಾನರು ದನ ಕರವನ್ನು ಬಳುವಳಿಯಾಗಿ . ತುಂಡು ಭೂಮಿ ನೀಡುವುದು ಅಥವಾ ಅವಶ್ಯಕತೆಯಿರುವ ಕಾರ್ಯ ಕ್ರಮಗಳಿಗೆ ( ಮದುವೆ ಇತರೆ ಶುಭ ಸಮಾರಂಭಗಳಿಗೆ) ಧನ ಸಹಾಯವನ್ನು ನೀಡುತ್ತಾರೆ.
ಸಾಮಾನ್ಯವಾಗಿ ಸಂಬಂಧಗಳಲ್ಲಿ ಯಾರು ಕೆಳ ಸ್ತರದಲ್ಲಿರುವ ವ್ಯಕ್ತಿಯು ಅಣ್ಣನ ಅಥವಾ ತಮ್ಮ ಮನೆ ಅಥವಾ ಹೊಲಗಳಲ್ಲಿ ಬಿಟ್ಟಿ ಚಾಕರಿಯಲ್ಲಿ ತೊಡಗಿವುದು ಹಳ್ಳಿಗಳಲ್ಲಿ ಕಂಡು ಬರುವುದು.
ಬಿಟ್ಟಿ ಚಾಕರಿಯಲ್ಲಿ ಕೆಲಸ ಮಾಡುವವರಿಗೆ ಕಾಲ ಕಾಲಕ್ಕೆ ಅವರು ನಿವ೯ಹಿಸುವ ಕೆಲಸಗಳಿಗೆ ಯಜಮಾನರು ಸಾಧ್ಯವಾದಷ್ಟು ಸಹಾಯ ಮಾಡುತ್ತಾರೆ . ಆದರೆ ಬಿಟ್ಟಿ ಚಾಕರಿ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಬೇರೆ ಕೆಲಸಗಳಿಗೆ ಹಾಜರಾಗಬೇಕೆಂದು ಅಲಿಖಿತ ಒಪ್ಪಂದವಾಗಿರುತ್ತದೆ.
ಈ ರೀತಿಯ ಬಿಟ್ಟಿ ಚಾಕರಿ ಮಾಡುವವರು ಬಹುತೇಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹಾಗೂ ಸ್ವ ಕುಟುಂಬದವರು ಇರುವರು. ಮೇಲುಜಾತಿಯವರ ಮನೆ, ಹೊಲ -ಗದ್ದೆಗಳಲ್ಲಿ ಬಿಟ್ಟಿ ಚಾಕರಿ ಕೆಲಸ ನಿರ್ವಹಿಸುವರು ಇವರು ತಮ್ಮ ಹಿಡಿ ಜೀವನವು ಈ ಕಾರ್ಯ ದಲ್ಲಿ ಸವೆದು ಒಂದು ದಿನ ಮರಣಿಸುವರು.ಈ ಜನರಿಗೆ ಸಾಮಾಜಿಕವಾಗಿ ಸರಿಯಾದ ಸ್ಥಾನ ಮಾನ ದೊರೆಯದ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಈ ಪದ್ಧತಿ ನಿಷೇಧಿಸಬೇಕಾಗಿದೆ. ಇದಕ್ಕೆ ಸರ್ಕಾರ ಸರಿಯಾದ ಕಾನೂನು ರಚಿಸಬೇಕಿದೆ. ಹಾಗೂ ನಿಮೂ೯ಲನೆಗೊಳಿಸಬೇಕು.
- ಮೋಹನ್ ಪ್ರಸಾದ ಎಸ್. (ವಿದ್ಯಾರ್ಥಿ)
ಸ್ನಾತಕೋತ್ತರ ಅಧ್ಯಾಯ ಕೇಂದ್ರ .ಜಿ .ಆರ್ ಹಳ್ಳಿಯ ಚಿತ್ರದುರ್ಗ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ನಮ್ಮ ಸಮಾಜದಲ್ಲಿ ಸುಧಾರಣೆ ತರುವಂತಹ ಇಂತಹ ಸಾಮಾಜಿಕ ಕಳಕಳಿಯ ಹಾಗೂ ಮನುಕುಲವನ್ನು ತಿದ್ದುವ ಇನ್ನು ಹತ್ತು ಹಲವಾರು ಕಾರ್ಯಗಳು ನಿಮ್ಮಿಂದಾಗಲಿ ಮೋಹನ್ ಪ್ರಸಾದ್.
ಪ್ರತ್ಯುತ್ತರಅಳಿಸಿಶುಭವಾಗಲಿ 💐