ಕಸುಬಿನ ಗೋಳು
ಉದ್ದ ಕಟ್ಟಿಗೆಗೆ ಕಟ್ಟಿದ್ದು ಬಲೂನು
ಕಾದು ತಿರುಗಿದ್ದು ಗಿರಾಕಿ ಹುಡುಕಿ
ಊದಿ ಇದ್ದುದೆಲ್ಲವ ಮಾರಿದರೂ
ನೆಲೆ ಕಂಡೀತೆ ಬದುಕು?
ಹೊತ್ತಾರೆ ಎದ್ದು ಬಂಡಿ ಬಾಡಿಗೆ ಪಡೆದು
ಸುತ್ತುತ ಉರಿದು ಶೇಂಗವ ಮಾರಿದರೂ
ಹೊತ್ತಿಗಿಂತಲೂ ಮುನ್ನ ಕೊಂಡವರಾರೊ
ಗುರಿ ಮುಟ್ಟದ ಬದುಕು
ಉಣದೆ ಓಡಿದ್ದು ಉಗ್ರಾಣದ ಕಡೆಗೆ
ಮಣ ಭಾರಕೆ ಬೆನ್ನು ಬಾಗಿದೆ ನಡಿಗೆ
ದಣಿವಾರದ ಗಾಣದೆತ್ತಿನಂತೆ ಕೆಲಸ
ಹೊಟ್ಟೆ ತಂಬದ ದುಡಿಮೆ
ಬಿಗಿದು ಕಟ್ಟಿದ್ದು ಊರ ಮೈಲಿಗೆ ಬಟ್ಟೆ
ಹೊಗೆದ ಸುಸ್ತಿಗೆ ಬಟ್ಟೆಗಳು ಮಡಿ
ಹೆಗಲ ಮೇಲೆ ಸಾಕ್ಷಿ ಗುರುತಿನ ಗಾಯ
ನಲಿವು ಕಾಣದ ಬದುಕು
ಕಬ್ಬಿಣವನು ಕಾಯಿಸಿ ಬಡಿದೆ
ಬೊಬ್ಬೆ ಏಳುತ ಉರಿದಿದೆ ಕೈ
ಹಬೆಗೆ ಹೊಡೆತಕ್ಕೆ ಆಯುಧ ಸಿದ್ಧ
ಹಬ್ಬ ಕಾಣದ ಬದುಕು
- ಶ್ರೀ ತುಳಸಿದಾಸ ಬಿ ಎಸ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ