ತಾಯಿಯ ಅಪ್ಪುಗೆ
ತಾಯಿ ತಾಯಿ ತಾಯಿ
ಮೊಗದಲ್ಲೆ ಜಗವನ್ನು
ತೋರಿಸುವ ಮಹಾತಾಯಿ
ಕನ್ನಡಿಯೇತಕೆ?ನೀನಿರಲು!
ಎನಗೆ ನೀನೆ ಸ್ಪೂರ್ತಿಶಿಲೇ
ಕೈ ತುತ್ತು ಮೊಗಮುತ್ತುನ್ನು
ಸಿಹಿಯಾಗಿ ನೀಡಿದವಳೆ!
ಮನಕ್ಕೊಪುವ ಆಸೆಯನು
ಇಡೇರಿಸಿದ ಮಹಾತ್ಯಾಗಿಯು
ನಿನ್ನ ನೀ ಭತ್ತಿ ಬೆಳಕಾದವಳು!
ಕುವರನು ಆಗಲಿ ಪುರದೊಳು
ಹೆಸರಾಗಿ ತಾನು ಭವದೊಳು
ತಾಯಿ ಕಂದನ ನಗುವೊಳು!
ಖುಷಿಯ ಕಾಣುವಳೆ ನೋಡು
ಸಂತಸದಿ ಇರಲೆನ್ನ ತಾಯಿಯು
ತಾಯಿ ನಿನ್ನಂತರಂಗವಯು!
ನಾ ಬರೆಯಲು ಅಕ್ಷರ ಬಡವಾದವು
ಇದು ಕಂದನ ಅಕ್ಷರದರ್ಪಣೆಯು
ನಿನಗೆ ಶತಕೋಟಿ ನಮನಗಳು!
- ಶ್ರೀ ಸೋಮಶೇಖರ.ಹ.ರಾಂಪೂರ
ಸಹ ಶಿಕ್ಷಕರು ಎಚ್.ಎಸ್.ಗುಂದಗಿ ವಿಜಯಪೂರ ಜಿಲ್ಲೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ