ಭಾನುವಾರ, ಆಗಸ್ಟ್ 1, 2021

ದೇಶಕ್ಕಾಗಿ ದುಡಿದು,ಮಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಅಕ್ಷರ ನಮನ (ಕಿರು ಲೇಖನ) - ಆನಂದಜಲ, ಶಿಕ್ಷಕಿ.

ದೇಶಕ್ಕಾಗಿ ದುಡಿದು,ಮಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಅಕ್ಷರ ನಮನ

     ಭಾರತಾಂಭೆಯ ಬಂಧಮುಕ್ತಿಗಾಗಿ ಅಂದು ನಡೆಯಿತು ಸ್ವಾತಂತ್ರ್ಯ ಸಂಗ್ರಾಮ.ದಾಸ್ಯದ ಸಂಕೋಲೆಯಲ್ಲಿ ಬಂಧಿತಳಾದ ತಾಯಿ ಭಾರತಿಯ ರಕ್ಷಣೆಗೆ ನಿಂತರು ಈ ನೆಲದ ವೀರಪುತ್ರರು,ಪುತ್ರಿಯರು.ನಾವು ಇಂದು ಆಚರಿಸುವ ವೈಭವೋಪೂರಿತವಾದ ಉತ್ಸವವು ನಮ್ಮ ನಾಡಿಗಾಗಿ ಪ್ರಾಣತೆತ್ತ ಮಹಾತ್ಮರ ಹೋರಾಟದ ಫಲವಿದು.ಇಂತಹ ಪುಣ್ಯಾತ್ಮರು ಜನಿಸಿದ ನಾಡಿನಲ್ಲಿ ನಾವೆಲ್ಲ ಜನಿಸಿರುವುದು ಸುಕೃತ.ಅಂತಹ ಮಹಾತ್ಮರ ಸ್ಮರಣೆಯ ನಾವು ಪ್ರತಿಘಳಿಗೆಯಲ್ಲೂ ಮಾಡಿಕೊಳ್ಳಬೇಕಿದೆ.ಆಗ ಮಾತ್ರ ನಾವು ಆಚರಿಸುವ ರಾಷ್ಟ್ರೀಯಹಬ್ಬಗಳಿಗೆ ಮಾನ್ಯತೆ ಬರುವುದು.ಭಗತ್ ಸಿಂಗ್,ಸುಭಾಷ್ ಚಂದ್ರ ಬೋಸ್,ತಿಲಕ್ ರ ತ್ಯಾಗ,ಬಲಿದಾನ.ಮಹಾತ್ಮ ಗಾಂಧೀಜಿಯವರ ಅಹಿಂಸಾ ಹೋರಾಟ,ಬ್ರಿಟಿಷರ ವಿರುದ್ಧ ಬಂಡೆದ್ದ ಸಂಸ್ಥಾನಗಳ ರಾಜರು,ರಾಣಿಯರ ತ್ಯಾಗ.ಶ್ರೀ ಸಾಮಾನ್ಯರ ಹೋರಾಟ,ಬಾಲಕ,ಬಾಲಕಿಯರಾದಿಯಾಗಿ ದೇಶದ ಸ್ವತಂತ್ರತೆಗೆ ಪ್ರಾಣ ಬಿಟ್ಟಿದ್ದಾರೆ.ಇಂತಹ ಮಹಾನುಭಾವರುಗಳ ಹೋರಾಟದ ಫಲವಾಗಿ ನಮ್ಮ ದೇಶ ಆಗಸ್ಟ್ 14 ರ ಮಧ್ಯರಾತ್ರಿ ಸ್ವತಂತ್ರವಾಯಿತು.ತಾಯಿ ಭಾರತಿಯ ಒಡಲು ಬಗೆದ ಬ್ರಿಟೀಷರನ್ನು ಈ ನೆಲದಿಂದ ಓಡಿಸಲಾಯಿತು.ಅಂದು ಇಡೀ ದೇಶದಲ್ಲಿ ಸಂಭ್ರಮ ಮನೆಮಾಡಿತು.ಸಂಭ್ರಮದ ಹಿಂದೆ ಅದೆಷ್ಟು ಬಲಿದಾನದ ರಕ್ತದ ಕಲೆಯಿತ್ತೋ... ಸ್ವತಂತ್ರ ದೇಶದ ಪ್ರಜೆಗಳಾಗಿ ನಾವಿಂದು ಬದುಕುತ್ತಿದ್ದೇವೆ.ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ಸ್ಮರಿಸೋಣ. *ಜೈ ಹಿಂದ್*

ಆನಂದಜಲ,ಶಿಕ್ಷಕಿ
    ತುರುವೇಕೆರೆ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...