ನನ್ನ ಹೊಲಕ್ಕೆ ಬನ್ನಿ ಹಕ್ಕಿಗಳೆ
ಎಲ್ಲಿ ಹೋಗದಿರಿ ಬನ್ನಿ ಹಕ್ಕಿಗಳೆ
ನಿಮಗಾಗಿ ಕಾಳು ಚೆಲ್ಲಿ
ಹಗಲಿರುಳು ತಿರುಗಿ ನೋವಿಂದ ಬೆಂದೆ
ಸಾಯದಿರಿ ನೀವು ಕೊರಗಿನಲ್ಲಿ .
ನಾ ಬಿತ್ತಿ ಬೆಳೆವ ಹಸಿರೊಲವು ನಿಮಗೆ
ಬರುತ್ತಿಲ್ಲ ನಿಮ್ಮ ಬಳಗ
ನಿಮಗಾಗಿ ನಾನು ಹೊಲಗದ್ದೆಯಲ್ಲಿ
ಬೆಳೆ ಬೆಳೆಯುತ್ತಿರುವೆ ಹಕ್ಕಿ ಬಳಗ
ನಿಮ್ಮಯ ಕೊರಗು ನನ್ನ ಮನಕೆ ತಿಳಿದು
ಅರಿತಿದೆ ನನ್ನ ಕರುಣೆ ಕಡಲ
ಬಂದೋಗಿ ನೀವು ಆಗಾಗ ಒಮ್ಮೆ
ರೆಕ್ಕೆಯ ಕೆದರಿ ತಿನ್ನಿರಿ ಕಾಳು ಕಡ್ಡಿನೆಲ್ಲ
ಭಗವಂತ ಕೊಟ್ಟಿಹನು ಶಕ್ತಿ ಬಲವನ್ನ
ನಿಮಗಾಗಿ ದುಡುದು ಬೆಳಸುವೆ ಹಸಿರನ್ನು
ಕರುಣಿಸಿರಿ ನನ್ನ ಸೇವೆ ಸ್ವೀಕರಿಸಿ ನೀವು
ಭಯಪಡದೆ ಬಾಳಿರಿ ನಿಮಗಿರಲಿ ಬಾಳು ಚಿನ್ನ
ನಿಮಗಿರುವ ಮಮಕಾರ ನಮಗಿಲ್ಲ ಕೇಳು
ಸ್ವಾರ್ಥಕ್ಕೆ ಬದುಕುವೆವು ನಾವೆಲ್ಲರು
ನೊಂದ ಜೀವಿಗಳಿಗೆ ಸಂತಸಪಡಿಸುವೆನು
ಅದೆ ನನ್ನ ಸೌಭಾಗ್ಯ ಓ... ಹಕ್ಕಿಗಳೆ ಕೇಳು
- ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ