ಗುರುವಾರ, ಆಗಸ್ಟ್ 5, 2021

ಕೌದಿ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್.

 ಕೌದಿ 

ಬಲಿಯದೆಮ್ಮೆದೆಗೆ ಭಾವೈಕ್ಯೆತೆಯ ಕೈಗನ್ನಡಿ 
ಬಿರುಕು ಮೂಡಿದ ಮನಕೆ ಹೊಲೆದ ಅದರದೆ ಪಾಠ  ದಾರ, ಸೂಜಿಗೆ ಬಟ್ಟೆ 
ಕೌದಿಯಾದಂತೆ ಹಳೆ ಎಳೆಯ ಮನಗಳಿಗೆ ಮಾನವೀಯತೆಯ ಬೆಸುಗೆ ಬೇಕು
ನಾಲ್ಕು ಯುಗಗಳ ಇತಿಹಾಸವಿರುವ ಇದರ ಮೇಲೆ ಕುಳಿತು  
ಬರೆದಿಟ್ಟ ದಾಖಲೆಗೆ ಲೆಕ್ಕವಿಲ್ಲ 
ಇಂದು ಉಳಿದಿದ್ದೆಷ್ಟೊ ನಾವು ತಿಳಿದಿದ್ದೆಷ್ಟೊ

ಇದು  ಇತಿಹಾಸದ ಕುರುಹು ಮಕ್ಕಳಿಗೆ ಬೆಚ್ಚನೆಯ ಜೀವ ರಕ್ಷಕ
ಅವ್ವನಿಗೆ ತನ್ನ ಉತ್ಪಾದನೆಯ ಸರಕು
ಕಾಮ ತಣಿವಿಗೆ ಜೀವದುಟ್ಟಿಗೆ ಕಲ್ಪತರು ನಮಗೆ ಬಾಲ್ಯದಾನಂದದ ಬೆರಗು,!

ಇದರಡಿಯಲಿ ಮನಸುಗಳು ಹಗುರಾದವು ಭಾವನೆಗಳು ಬಲಿತು 
ಕನಸಿಗೆ ರೆಕ್ಕೆ ಮೂಡಿದವು  ರಾತ್ರಿ ಮನಸಾರೆ ಆಕಾಶ,ತಾರೆ, 
ಚಂದ್ರರನು ಕಂಡು ಸುಖಿಸಿದೆವು 
ಮನದ ವಿಕಾಸ, ವಾಸ್ತವ ಅರಿತು ಜಗದ ದುಃಖಕೆ ಮರುಗಿದೆವು 
ಬಡತನವ ಮರೆಸುವ ಹಿರಿಯರ ಕಥೆಗೆ 
ಎಂತಹ ತಾಕತ್ತು ಇದರಡಿಯಲಿ! 
ಎಲ್ಲರ ಮನೆಯಲ್ಲೂ ಇರುವ ಇದು 
ಜಡದ ಹೊದಿಕೆ, ಹಾಸಿಗೆಯಂತೂ ಅಲ್ಲವೇ ಅಲ್ಲ 
ಹೌದು ಇದು 

ಬರೀ ಕೌದಿಯಲ್ಲ ನಮ್ಮೊಳಗಿನ ಒಡನಾಟದ ಮೂಕ ಧ್ವನಿ
ಕಾಲ ಚಕ್ರದಿ
ಮರೆಯಾಗದೆ ಉಳಿದ ನಾಡಿನ ಜನರ ಸಂಸ್ಕೃತಿಯ ಪ್ರತಿಬಿಂಬ
 - ಶ್ರೀ ತುಳಸಿದಾಸ ಬಿ ಎಸ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...