ಬುಧವಾರ, ಆಗಸ್ಟ್ 4, 2021

ಕ್ಷಮಯಾಧರಿತ್ರಿ (ಕಿರು ಲೇಖನ) - ಆನಂದಜಲ, ಶಿಕ್ಷಕಿ.


ಕ್ಷಮಯಾಧರಿತ್ರಿ

    ಜೀವಸಂಕುಲ ವಾಸಿಸಲು ಯೋಗ್ಯವಾದ ವಾತಾವರಣ ಹೊಂದಿರುವ ಸೌರವ್ಯೂಹದ ಏಕೈಕ ಗ್ರಹ ಭೂಮಿ.ಈ ನಮ್ಮ ಭೂಮಿಯನ್ನು ನಾವು ಅನಾದಿ ಕಾಲದಿಂದಲೂ ಭೂಮಿತಾಯಿಯೆಂದೇ ಪೂಜಿಸುತ್ತಾ ಬದುಕುತ್ತಿದ್ದೆವೆ.ನಮ್ಮ ಉಳಿವಿಗೆ ಆಶ್ರಯದಾತೆಯಾದ ಭೂಮಿತಾಯಿಯ ಮಹತ್ವ ಎಣಿಕೆಗೆ ನಿಲುಕದಂತಹದು.ಭೂಮಿಯ ಮೇಲಿನ ವಾತಾವರಣ,ಗಾಳಿ,ನೀರು,ಜೀವಿಗಳ ಉಗಮಕ್ಕೆ ಹಾಗೂ ಉದಯಿಸಿದ ಜೀವಿ ಬದುಕಲು ಪೂರಕವಾದ ವ್ಯವಸ್ಥೆ ಹೊಂದಿದೆ.ವನರಾಶಿ,ಸಾಗರ,ನದಿ,ಬೆಟ್ಟ ಗುಡ್ಡ,ಪರ್ವತಬಯಲು ಹೀಗೆ ವಿವಿಧ ರೀತಿಯ ಮೇಲ್ಮೈ ಲಕ್ಷಣ ಹೊಂದಿರುವ ಭೂಮಿ,ತನ್ನ ಗರ್ಭದೊಳಗೆ ಅಂತರ್ಜಲ,ಖನಿಜ ಸಂಪತ್ತಿನ ಆಗರವನ್ನು ತುಂಬಿಕೊಂಡಿದೆ.ಇದೆಲ್ಲದುದರ ಬಳಕೆಯನ್ನ ಮಾಡುತ್ತಾ ಮಾನವ ಇಂದು ಬದುಕುತ್ತಿದ್ದಾನೆ.ಸುಖಪಡುತ್ತಿದ್ದಾನೆ.ಇನ್ನು ಮುಂದುವರೆದು ಹೇಳಬೇಕೆಂದರೆ ಭೂಮಿತಾಯಿಯ ಮಹತ್ವವನ್ನ ಅರಿಯದಾಗಿ ಭೂ ಒಡಲ ಬಗೆದು ದೋಚುವ ಕೆಟ್ಟ ಸಾಹಸಕ್ಕೂ ಕೈ ಹಾಕುತ್ತಿದ್ದಾನೆ,ಭೂಮಿಯನ್ನು ಅನೈರ್ಮಲ್ಯೀಕರಿಸುತ್ತಿದ್ದಾನೆ.ಆದರೂ ಕ್ಷಮಯಾಧರಿತ್ರಿ ಭೂಮಿತಾಯಿ ಕೋಪಗೊಳ್ಳದೇ ನಮ್ಮನ್ನೆಲ್ಲಾ ಹೊತ್ತು ಕಾಪಾಡುತ್ತಿದ್ದಾಳೆ.ಭೂಮಿಯು ತನ್ನೊಬ್ಬನ ಸ್ವತ್ತೆಂದು ಮೆರೆಯುವ ಓ ಮಾನವ,ನಿನ್ನಂತೆ ಇತರೆ ಜೀವಿಗಳಿಗೂ ಇಲ್ಲಿ ಬದುಕಲು ಹಕ್ಕಿದೆ.ಭೂಮಿ ಆ ಪ್ರಾಣಿ,ಪಕ್ಷಿ,ಕೀಟ,ಇತರೆ ಎಲ್ಲಾ ಜೀವಿಗಳಿಗೂ ಆಶ್ರಯದಾತಳು,ಇದ ಮರೆತು ಕಾಡಿನ ನಾಶ,ನೀರಿನ ಮಲಿನ ಮಾಡುತ್ತಿದ್ದೀಯಾ,,ಜೋಕೆ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ.ಈಗಲೂ ನೀನು ನಿನ್ನ ದುರ್ಬುದ್ಧಿಯ ತಿದ್ದಿಕೋ,,ಭೂಮಿಯ ಮಹತ್ವ ಅರಿತುಕೋ,,ನಿನ್ನ ದುರಾಸೆ,ಸ್ವಾರ್ಥದ ಗುಣದಿಂದ ಭೂಮಿಯನ್ನು ಹೇಗೆಂದರ ಹಾಗೆ ಕಾಲ ಕಸದಂತೆ ನೋಡುವುದ ಬಿಡು.ಸಕಲ ಸೌಕರ್ಯ ನೀಡಿ ಮಗುವಂತೆ ನಿನ್ನ ಪೊರೆಯುತಿರುವ ಭೂಮಿತಾಯಿಯ ಮಹತ್ವ ತಿಳಿದು ವರ್ತಿಸು.
ನೀನು ಬದುಕು,ಇತರರನ್ನು ಬದುಕಲು ಬಿಟ್ಟು,ಭೂಮಿಯ ರಕ್ಷಣೆಯ ಹೊಣೆ ಹೊತ್ತು ಬದುಕು.

ಆನಂದಜಲ,ಶಿಕ್ಷಕಿ
    ತುರುವೇಕೆರೆ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...