ಬುಧವಾರ, ಆಗಸ್ಟ್ 4, 2021

ತಿಮ್ಮಳನಾಯಕನ ಬೆಟ್ಟದ (ಪೆಮ್ಮನಹಳ್ಳಿ ) ತಿಮ್ಮಪ್ಪ ದೇವಾಲಯ. (ಲೇಖನ) - ಶ್ರೀ ಪುರುಷೋತ್ತಮ ಪೆಮ್ನಳ್ಳಿ.

ತಿಮ್ಮಳನಾಯಕನ ಬೆಟ್ಟದ (ಪೆಮ್ಮನಹಳ್ಳಿ ) ತಿಮ್ಮಪ್ಪ ದೇವಾಲಯ.

ಆತ್ಮೀಯರೇ ಪಾವಗಡ ತಾಲ್ಲೂಕಿನಿಂದ ೧೭ ಕಿ.ಮೀ. ಸಿರಾ ಮಾರ್ಗವಾಗಿ ಚಲಿಸಿದಾಗ ತಿಮ್ಮಳನಾಯಕನ ಬೆಟ್ಟ(ಪೆಮ್ಮನಹಳ್ಳಿ) ಗ್ರಾಮವು ಸಿಗುವುದು ಇದು ನಿಡಗಲ್ ಹೋಬಳಿ ಗುಜ್ಜನಡು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತದೆ.

ತಿರುಪತಿ ತಿಮ್ಮಪ್ಪನ ಅವತಾರವೆಂದೇ ಹೇಳಲಾಗುವ ದೇವಾಲಯಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ ವಿಶೇಷವಾಗಿ ಶ್ರಾವಣಮಾಸದಲ್ಲಿ ಜಾತ್ರೆ ನಡೆಯಲಿದ್ದು ಸುತ್ತಮುತ್ತಲ ಗ್ರಾಮದವರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮಗಳನ್ನ ಯಶಸ್ವಿಯಾಗಿ ನಿರ್ವಹಿಸುವರು.

ದೇವಾಲಯದ ಇನ್ನೊಂದು ವಿಶೇಷವೆಂದರೆ ತಿಮ್ಮಪ್ಪ ದೇವರನ್ನು ಹೂ ಪ್ರಸಾದ ಕೇಳುವ ಪದ್ದತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ ಹೂ ಪ್ರಸಾದದಲ್ಲಿ ಬಲಭಾಗಕ್ಕೆ ನೀಡಿದರೆ ತಾವು ಅಂದುಕೊಂಡ ಕಾರ್ಯಗಳು ಸುಸೂತ್ರವಾಗಿ ನಡೆಯುವುದು ದೇವರ ಹೆಗ್ಗಳಿಕೆಗೆ ಪ್ರಮುಖ ಕಾರಣವಾಗಿದೆ.ತಿಮ್ಮಳನಾಯಕನ ಬೆಟ್ಟ (ಪೆಮ್ಮನಹಳ್ಳಿ )ಅರ್ಚಕರಿಂದ ಪ್ರತಿ  ಶನಿವಾರ ಪೂಜಾ ಕಾರ್ಯಕ್ರಗಳು ನೆರವೇರುತ್ತಿದ್ದು ಭಕ್ತಾದಿಗಳು ಆಗಮಿಸಿ ಅಭಿಷೇಕ ಎಲೆಪೂಜೆ ಸೇವೆಗಳನ್ನ ನೆರವೇರಿಸುವರು.
ದೇವಾಲಯದ ಇತಿಹಾಸಕ್ಕೆ ಎರಡು ದಂತಕಥೆಗಳಿವೆ ಮೊದಲನೆಯದಾಗಿ ತಿಮ್ಮಣ್ಣನಾಯಕನೆಂಬ  ಪಾಳೇಗಾರನಿಗೆ ಮಕ್ಕಳಿಲ್ಲದ ಕಾರಣ ಪುತ್ರಸಂತಾನದ ಅಭಿಲಾಷೆಯಿಂದ ತಿಮ್ಮಪ್ಪ ದೇವರನ್ನು ಪ್ರತಿಷ್ಠಾಪಿಸಿದನೆಂದು ತಿಳಿಸಲಾಗಿದೆ.
ಎರಡನೆಯದಾಗಿ ತಿಮ್ಮಪ್ಪ ದೇವರು ಬೆಟ್ಟದ ಮೇಲೆ ವಾಸವಿದ್ದು ತಾಯಿಯು ದಿನಲೂ ಊಟ ತೆಗೆದುಕೊಂಡು ಹೋಗಿ ಕೊಟ್ಟು ಬರುತ್ತಿದ್ದು ಕೆಳಗಡೆ ಬರುವಂತೆ ತಾಯಿಯು ತಿಮ್ಮಪ್ಪನಲ್ಲಿ ಕೇಳಿದ್ದರಿಂದ ತಿಮ್ಮಪ್ಪ ತಾಯಿಗೆ ಮುಂದೆ ಹೋಗಲು ತಿಳಿಸಿ ಯಾವುದೇ ಕಾರಣಕ್ಕೂ ಹಿಂದೆ ತಿರುಗಿ ನೋಡದಂತೆ ಹೇಳಿಕಳಿಸಲಾಗಿ ತಾಯಿ ಮುಂದೆ ಸಾಗುವಾಗ ಏನೋ ಶಬ್ದ ಉಂಟಾಗಿ ತಿರುಗಿ ನೋಡಲು ತಿಮ್ಮಪ್ಪ ಶಿಲೆಯಾಗಿ ಬೆಟ್ಟದ ಮಧ್ಯದಲ್ಲೇ ನೆಲೆಗೊಂಡನೆಂದು ಜಾನಪದ ಸಾಹಿತ್ಯ ಮೂಲಕ ಹಿರಿಯರು ತಿಳಿಸಿರುತ್ತಾರೆ.

ಕಳೆದ ವರ್ಷ ಕೋರೋನ ಸಂದರ್ಭದಲ್ಲಿ ತಿಮ್ಮಳನಾಯಕನ ಬೆಟ್ಟದ( ಪೆಮ್ಮನಹಳ್ಳಿ) ಗ್ರಾಮದ ಹಿರಿಯರು ಹಾಗೂ ಯುವಕ ಮಂಡಳಿಯವರು ದೇವಾಲಯದ ಕೆಳಭಾಗದಲ್ಲಿರುವ ಕಲ್ಯಾಣಿ ಸ್ವಚ್ಚತಾಗೊಳಿಸುವಾಗ ಹಲವಾರು ತಾಮ್ರದ ನಾಣ್ಯಗಳು ದೊರೆತ್ತಿದ್ದು ಅವುಗಳು ವಿಜಯನಗರ ಅರಸರ ಕಾಲಕ್ಕೆ ಸೇರಿದ ನಾಣ್ಯಗಳೆಂದು ಸ್ಥಳೀಯ ಇತಿಹಾಸಕಾರರು ತಿಳಿಸಿರುತ್ತಾರೆ ತಾಮ್ರದ ನಾಣ್ಯಗಳನ್ನ  ಪುರಾತತ್ತ್ವ ಇಲಾಖೆಯವರ ವಶಕ್ಕೆ ನೀಡಲಾಗಿರುತ್ತದೆ.

ಮಂಟಪಗಳು ಹಾಗೂ ರಸ್ತೆಯ ಸಮಸ್ಯೆಗಳಿದ್ದು ಬಹುಬೇಗ ಅವೆಲ್ಲ ಭಕ್ತಮಹಾಶಯರ ಸಹಕಾರದೊಂದಿಗೆ ನೆರವೇರಲೆಂದು ಎಲ್ಲರ ಬಯಕೆಯಾಗಿದೆ.
ಮಾರ್ಗ:-
    ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಸ್ಥಳವಾಗಿದ್ದು ಪಾವಗಡದಿಂದ ಸಿರಾ ಮಾರ್ಗವಾಗಿ  ೧೭ ಕಿ.ಮೀ ಚಲಿಸಿದಾಗ ತಿಮ್ಮಳನಾಯಕನ ಬೆಟ್ಟ (ಪೆಮ್ಮನಹಳ್ಳಿ) ಬಸ್ಸ್ ನಿಲ್ದಾಣದಿಂದ ಗ್ರಾಮಕ್ಕೆ ತೆರಳಿ ಬೆಟ್ಟದ ದೇವಾಲಯಕ್ಕೆ ಸಾಗಬಹುದು ಕರೆಕ್ಯಾತನಹಳ್ಳಿ ಮಂಗಳವಾಡ ಚಿನ್ನಮ್ಮನಹಳ್ಳಿ ಮಾರ್ಗದಿಂದಲೂ ಬೆಟ್ಟಕ್ಕೆ ತಲುಪಬಹುದು.

🌹ಪುರುಷೋತ್ತಮ ಪೆಮ್ನಳ್ಳಿ🌹
ಪಾವಗಡ ತಾ ತುಮಕೂರು ಜಿ
ದೂ. ೯೬೩೨೨೯೬೮೦೯.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...