ಸೋಮವಾರ, ಆಗಸ್ಟ್ 23, 2021

ನಿನ್ನ ನೆನೆದಾಗಲೆಲ್ಲಾ ( ವಿರಹಗೀತೆ) - ಭವ್ಯ ಟಿ.ಎಸ್, ಶಿವಮೊಗ್ಗ.

ನಿನ್ನ ನೆನೆದಾಗಲೆಲ್ಲಾ ( ವಿರಹಗೀತೆ)

ಎನಿತು ಮಧುರವದು ನಿನ್ನ ಸನಿಹ
ನೀನೇ ಕಲಿಸಿದೆ ನನಗೆ ನಿಜ ಪ್ರೀತಿಯ
ನಿನ್ನ ಮಾತುಗಳು ಸವಿದಷ್ಟೂ ರಸಮಯ
ನೆನೆದಾಗಲೆಲ್ಲಾ ನಾ ನಿನ್ನಲೇ ತನ್ಮಯ.....

ದೂರಾಗಿ ನಿನ್ನಿಂದ ಬದುಕಲಾರೆ ಇನಿಯ
ಬಂದು ಸೇರೆನ್ನ ಕೇಳು ನನ್ನ ಮನವಿಯ
ನೀನಿಲ್ಲದಿರುವ ಕ್ಷಣಗಳು ವಿರಹಮಯ
ಬಳಿಬಂದು ತೋಳಿನಲಿ ಬಂಧಿಸುವೆಯ...

ಕನಸಲ್ಲಿ ಬಂದು ಕಾಡಿ ಹಗಲೆಲ್ಲಾ ನೆನೆವೆ
ವಿರಹದುರಿಗೆ ತನುಮನಗಳು ಬೆಂದಿವೆ
ತಣಿಸಲು ಬಾ ಸಿಹಿಮುತ್ತಿನ ಮಳೆಗರೆವೆ
ಹೃದಯ ಮಂದಿರದಲಿ ನಿತ್ಯ ಆರಾಧಿಸುವೆ....

ಅಲೆಮಾರಿ ಮನಸ್ಸು ಪ್ರೀತಿಗಾಗಿ ಹಂಬಲಿಸಿತೇ
ದೂರಾದರೂ ಕಂಗಳಲಿ ನಿನ್ನ ಬಿಂಬ ಕಂಡಿತೇ
ಕತ್ತಲಾದ ಹೃದಯದಲ್ಲಿ ಬೆಳಗು ಪ್ರೀತಿ ಹಣತೆ
ಬಾಳೆಲ್ಲಾ ಒಂದಾಗಿ ಸಾಗೋಣ ಜೊತೆಜೊತೆ....
ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ
ಶಿವಮೊಗ್ಗ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...