ಗುರುವಾರ, ಆಗಸ್ಟ್ 5, 2021

ಬಿನ್ನಹ ( ಕವಿತೆ) - ಶ್ರೀಧರ ಗಸ್ತಿ, ಧಾರವಾಡ.

ಬಿನ್ನಹ

ಸಂಗಾತಿಯಾಗೋದು ಬೇಡವೇssss?
ಬರೀ ಮಾತಲ್ಲೇ ಮಹಲು ಕಟ್ಟಬೇಡವೇ
ಓಲೆಗಳ ಮಾತಲಿ ಮುಗಿಸಬೇಡವೆss
ಓ ಗೆಳತಿ sssss ನೀ ನನ್ನೊಡತಿ

ತಿರು ತಿರುಗಿ ತಿರುಗಿದೆವು 
ಊರು ಕೇರಿ ಬಿಡದಂತೆ
ಊರಿಗೂರೇ ಹೇಳುತಿದೆ ನಾವೇ 
ಜೊತೆ ಜೊತೆ ಯೆಂದು
ಸಂಗಾತಿಯೆನಬಾರದೇ 
ನೀ  ಬಾಂಧವ್ಯ ಬೆಸೆಯಬಾರದೆ
ಓ ಗೆಳತಿssssss ನೀ ನನ್ನೊಡತಿ

ನಮ್ಮೂರ ಹೊಳೆ ದಂಡೆಯಲಿ
ಮರಳು ಗೂಡು ಕಟ್ಟಿ ಆಡುವಾಗ
ಗೂಡು ಕೊಚ್ಚಿ ಹೋದ ನೆನಪ
ಹುಸಿಯಾಗುವ ಮುನ್ನ 
ಸಂಗಾತಿಯಾಗಬಾರದೇ
ನೀ  ಪ್ರೇಮರಾಗ ಹಾಡಬಾರದೇ
ಓ ಗೆಳತಿsssssನೀ ನನ್ನೊಡತಿ

ಅಪ್ಪ ಅವ್ವ ಒಪ್ಪಿದಂತ 
ಪ್ರೀತಿ ಒಲುಮೆಯು ನೀನು
ಶುಭ ಸೂಚನೆ ನೀಡಬಾರದೇ
ಬಾಳಬಂಧ ಬೆಸೆಯಬಾರದೇ
ನೆಂಟತನ ಕದಿಯಬಾರದೇ
ನೀ ಸಪ್ತಪದಿ ತುಳಿಯಬಾರದೇ
ಓ ಗೆಳತಿsssssನೀ ನನ್ನೊಡತಿ.

          ✍  ಶ್ರೀಧರ ಗಸ್ತಿ ಧಾರವಾಡ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...