ತವರು ಮನೆ ದಾರಿಯಾಗ (ಜಾನಪದ ಶೈಲಿ ಗೀತೆ)
ತವರಿನ ಹೆಸರಲ್ಲೆ ಆನಂದ ಉಕ್ಕಿದಾಂಗಾ
ದಾರಿಯಲಿ ತೇರು ಕಂಡಿತ್ತು /ನೋಡೆ ತಂಗಿ/
ಹಡೆದವ್ವ ನನ್ನ ಕನವರಿಸಿದಾಂಗಾ
ಅಡಿಕೆ ತೆಂಗು ಬಾನಾಡಿ ತುಗ್ಯಾವಾ
ಹಳ್ಳ ಕೊಳ್ಳ ತುಂಬಿ ಉಕ್ಯವಾ /ಗೆಳತಿ/
ಹೂ ದಾರಿಗೆ ಹಾಸಿದಾಂಗ
ಎಲ್ಲೆಲ್ಲು ಹಸಿರಿನ ಕಾನಾನವೇ ಇಲ್ಲಿ
ದನಕರುಗಳಿಗೆ ಸಿಂಗಾರದ ಹಬ್ಬವೇ /ಗೆಳತಿ/
ಮೂಡ ಬಾಗಿಲಿಗೆ ಕರೆದಾಂಗ
ಬಾರಣ್ಣ ಬಾಳೆಗಾರ ಹೂವಿನ ಮಾಲೆಗಾರ
ಅವ್ವಾ ಕಲಿಸಾಳ ಕರೆತರಲು / ಗೆಣೆಗಾರ/
ಅಣ್ಣಾನಾ ಮನೆಯಾಗಾ ಸಿರಿಯೇ ತುಂಬಿದಾಂಗ
ಮಾವಿನ ಹಲಸಿನ ತೋರಣದ ಬೀಸಣಿಕೆ
ಊರ ತುಂಬೆಲ್ಲ ದಿಬ್ಬಣದ ಮೆರವಣಿಗೆ / ತಂಗಿ/
ತವರು ಮನೆಯಾಗ ಸಂಪತ್ತು ಉಕ್ಕಿದಾಂಗ
- ಸಹನಾ ಯಶವಂತ್ ಗೌಡ.
ಕ ರಾ ಮು ವಿ. ಮೈಸೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ತುಂಬಾ ಚೆನ್ನಾಗಿದೆ ����������
ಪ್ರತ್ಯುತ್ತರಅಳಿಸಿ