ಭರವಸೆ
ಮುಖವೆಲ್ಲ ನಗುತಿತ್ತು
ಸಖಿಯರ ಸಂಗದಲಿ
ಅಖಿಲ ಜಗವೆಂತು ಮಧುರ!
ಸುಖದಲ್ಲಿ ಮಿಂದಿತ್ತು ಆಗ ನನ ಮನವು
ಮಮತೆಯನು ಮೀರಿಸಿತು
ಹಿತವೆನಿಸಿದಾ ಗಳಿಗೆ
ಅತಿಯಾಗಿ ಕಾಡಲು ಬಾಗಿ ಮತಿಗೆಟ್ಟು
ಅಪವಾದ ಹೊತ್ತು ಬಂದೆ
ಎಲ್ಲ ಎಲ್ಲೆಗಳ ಮೀರಿ
ಬಳ್ಳಿ ಹಬ್ಬಿಸ ಹೊರಟೆ
ಒಳ ಸುಳಿಗೆ ಮೈ ಬೆವರಿ
ಕಾಲನ ಉತ್ತರಕೆ ಕಾಯುತಿರುವೆ
ಯಾರಿಹರು ನನಗಿಲ್ಲಿ
ಬೇರು ಕಳಚಿದ ಬಳ್ಳಿ
ಅಕ್ಕರೆಯ ತೋರುವರಿಲ್ಲ
ಭಾರವಾಗಿದೆ ಬದುಕು
ಭಾವನೆಗೆ ಬರುಡಿಲ್ಲ ಕಾಲ ನಿಲ್ಲುವುದಿಲ್ಲ
ಕಳೆದು ಕೊಂಡಿದ್ದೆಲ್ಲ,ಮತ್ತೆ ಸಿಗದೆ ಇರದು
ನೀನಿರುವೆ ಜೊತೆಗೆಂಬ ನಂಬಿಕೆಯೊಂದೆ ಸಾಕು
ಭರವಸೆಯ ಬೆಳಕೊಂದು ಬಡಿದೆಬ್ಬಿಸಲಿ ನಮ್ಮ
ಪುಟಿದೆದ್ದು ಮೇಲೇರಿ ಗೆದ್ದು ಬೀಗೋಣ
- ತುಳಸಿದಾಸ ಬಿ ಎಸ್
ಶಿಕ್ಷಕರು, ರಾಯಚೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ