ಕರುಣೆ ಇಲ್ಲದ ಕರೋನ
ಕರೆಯದೆಯೇ ಬಂದೇ ನೀ ನನ್ನೂರಿಗೆ.. ನಾ ಹೆಂಗ ಗುರುತಿಸಲಿ ನಿನ್ನ.
ಕಣ್ಣು ಮೂಗು ಬಾಯಿಸುತ್ತ ತೀರಗತಿಯಾಂದರ ನಾ ನಂಬಂಗಿಲ್ಲ.
ಮಾಸ್ಕ್ ಧರಿಸಿಕೊಂಡು ಮೂಕನಂಗಾ ನಡೆದಾತು..
ವಿದೇಶದ ವ್ಯಮೋಹ ಕಳಚಿದಂಗಾಯಿತು..
ತುತ್ತು ಕೂಳಿಗೂ ರೈತನ ನಂಬಿ ಬದುಕುವಂಗಾಯಿತು..
ದುಡಿಯುವ ಕೈ ಕಟ್ಟಿ ಕುಂತಂಗಾತು
ಸ್ಯಾನಿಟೈಜರ್ ಹಾಕಿ ಕೈ ತೋಳದಂಗಾಯಿತು..
ಮಾಸ್ಕ್ ಧರಿಸಿ ಓಡಾಡಿದ್ದೆ ಬಂತು
ಆದರೂ ಕರುಣೆ ಇಲ್ಲದ ಕರೋನ ಒಕ್ಕರಿಸಿದಂಗಾತು..
ಗಳಿಸಿದ್ದೆಲ್ಲ ಮಣ್ಣಾಗ ಮಣ್ಣಾಗಿ ಹೋಯಿತು..
ಸತ್ತರು ಸಹ ನಮ್ಮನ್ನ ಹೂಳಲು ಯಾರು ಬರದಂಗಾಯಿತು..
ಹಾಳು -ಮೂಳು ತಿಂದು ಕೊರೊನ ಬರುವಂಗಾಯಿತು..
ನಮ್ಮ ಗೋರಿಗೆ ನಾವೇ ಸಾಕ್ಷಿಯಾಯಿತು..
ಸಾವಿಗೆ ಜಾತಿ ಮತದ ಅಂತರವಿಲ್ಲವೆಂಬುದು..
ಸಾರಿ -ಸಾರಿ ಹೇಳಿದಂಗಾತು ಕೊರೋನಾ..
ವಿಶ್ವವೇ ನಡುಗುತಲಿವುದು ನಿನ್ನಿಂದ.. ಧೈರ್ಯಗೆಡದೆ ಒಗ್ಗಟ್ಟಿನಿಂದ ಹೋರಾಡಿ..
ಮನೆಯಲಿದ್ದು ಆರೋಗ್ಯ ಕಾಪಾಡಿ.ಮಾಸ್ಕ್ ಧರಿಸಿ...
- ಗಂಗಜ್ಜಿ. ನಾಗರಾಜ್ .
ಸಾಸ್ವಿಹಳ್ಳಿ -8548985753.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Super
ಪ್ರತ್ಯುತ್ತರಅಳಿಸಿసూపర్ బ్రో
ಪ್ರತ್ಯುತ್ತರಅಳಿಸಿ