ಆತ್ಮವಿಶ್ವಾಸ.
ಸಮಾಜದಲ್ಲಿ ಮೇಲೆ ಏರಲು ಅನ್ಯರು ನಮಗೆ ಸಹಾಯ ಮಾಡಲಿ ಎಂದು ಅಪೇಕ್ಷಿಸುತ್ತೇವೆ. ಆದರೆ ನಾವು ಉನ್ನತಿಗೆ ಏರಬೇಕಾದರೆ ನಾವೇ ಸ್ವತಹ ಪ್ರಯತ್ನಿಸಬೇಕು. ಶ್ರಮಪಡಬೇಕಾಗುತ್ತದೆ. ಪ್ರತಿಯೊಬ್ಬನೂ ತನ್ನ ದಾರಿಯನ್ನು ತಾನೇ ಹುಡುಕಿ ನಿರ್ಧರಿಸಬೇಕಾಗುತ್ತದೆ. ನಿರಂತರ ಪ್ರಯತ್ನ ಮಾಡಬೇಕಾಗುವುದು. ಯಾವುದೇ ಒಂದು ಗುರಿ ತಲುಪಬೇಕಾದರೆ ಮಾನಸಿಕ ಮತ್ತು ಶಾರೀರಿಕ ನೆಮ್ಮದಿ ಅತಿ ಅವಶ್ಯಕ. ಮನಸ್ಸು ಸಮತೋಲನ ಸ್ಥಿತಿಯಲ್ಲಿದ್ದು ಧ್ಯಾನ ಪ್ರಾಣಾಯಾಮ ಅತ್ಯವಶ್ಯಕ. ಇದರಿಂದ ಶರೀರವು ಗುಣಮುಖವಾಗುವುದು ಮಾನಸಿಕವಾಗಿ ಪ್ರಬಲ ವಾಗುವುದು. ಇದರಿಂದ ಮಾನಸಿಕ ಸಂಘರ್ಷದಿಂದ ಗುರಿತಲುಪಲು ಸಾಧ್ಯವಾಗುವುದು. ಜೀವನದ ಪಥವು ಎಂದು ಸರಿ ಸಮನಾಗಿರುವುದಿಲ್ಲ. ಎತ್ತರವಾದ ಗುಡ್ಡಗಳು. ಬೆಟ್ಟಗಳು ಏರಿಳಿತಗಳು ಕಠಿಣವಾದ ತಿರುವುಗಳು. ಕಡಿದಾದ ಏರಿಳಿತಗಳು. ಜಡಿಮಳೆ. ಉರಿಯುವ ಬಿಸಿಲು. ಬಿರುಗಾಳಿ. ಅಂಧಕಾರದ ರಾತ್ರಿಗಳು. ಜನರ ಚುಚ್ಚು ಮಾತುಗಳು. ಇದೆಲ್ಲವನ್ನೂ ದಾಟಿ ನಾವು ಆ ದಾರಿಯಲ್ಲಿ ಸಾಗಲು ಬೇಕಾಗುವುದು. ಇವೆಲ್ಲ ನಮ್ಮ ದೇಹ ಪರೀಕ್ಷೆಯ ಮೊದಲುಗಳು. ನಡೆಯುವವನು ಎಡವುತ್ತಾನೆ ಮತ್ತೆ ಎದ್ದು ಮುಂದಕ್ಕೆ ಹೋಗುತ್ತಾನೆ. ಎಷ್ಟು ಬಾರಿ ಹೇಳಿದರೂ ಮುಂದಕ್ಕೆ ಸಾಗುವನು. ಬಾರಿ ಬಾರಿ ಎಡವಿದರೂ ಬಾರೆ ಬಾರೆ ಸೋತರೂ ಯಾರು ಪ್ರಯತ್ನಶೀಲ ನಾಗಿ ಆತ್ಮವಿಶ್ವಾಸದಿಂದ ಮುಂದುವರೆಯುತ್ತಾನೆಯೋ ಅವನು ನೇತೃತ್ವ ಶಕ್ತಿಗೆ ಮನಸೋತು ಸಫಲತೆ ಅವನನ್ನು ಆವರಿಸುವುದು,. ಜೀವನದ ಸವಾಲುಗಳನ್ನು ಎದುರಿಸಿದಾಗ ನಮ್ಮ ಆತ್ಮವಿಶ್ವಾಸ ಶಕ್ತಿ ಸಾಮರ್ಥ್ಯ ವೃಧಿಸುವದು. ಪ್ರಪಂಚದಲ್ಲಿ ಪ್ರತಿಯೊಂದಕ್ಕೂ ಬೆಲೆ ತರಬೇಕಾಗುತ್ತದೆ. ನಮಗೇನಾದರೂ ಬೇಕೆಂದರೆ ನಾವು ಕೊಡಬೇಕಾದದ್ದು ಪ್ರಕೃತಿ ನಿಯಮ. ಯಾವುದೇ ಕ್ರಿಯೆಗೂ ಪ್ರತಿಕ್ರಿಯೆ ಸಫಲತೆ
.ಆಲಸ್ಯದ ಕ್ರಿಯೆಗೆ ಪ್ರತಿಕ್ರಿಯೆ ವಿಫಲತೆ. ಅಧಿಕ ಕೆಲಸ ಮಾಡುವುದರಿಂದ ಆಯಾಸವಾಗುತ್ತದೆ ಎಂಬುದು ಸಾಮಾನ್ಯ ಪ್ರಚಲಿತ ನಂಬಿಕೆ. ಆದರೆ ಆಯಾಸವಾಗುವುದು ಅಧಿಕ ಕಾರ್ಯದಿಂದಲ್ಲ. ಆಕಾರದಲ್ಲಿ ನಮಗೆ ಆಸಕ್ತಿ ಇಲ್ಲದಿರುವುದರಿಂದ ನಮಗೆ ಪ್ರಿಯವಾದ ಕಾರ್ಯವನ್ನು ನಾವು ಬಹಳ ಸಮಯದವರೆಗೆ ಮಾಡಿದರೂ ಆಯಾಸವಾಗುವುದಿಲ್ಲ. ಕಲಾವಿದರು ಸಂಗೀತಗಾರರು ವಿಜ್ಞಾನಿಗಳು ಗಂಟೆಗಟ್ಟಲೆ ಕೆಲಸ ಮಾಡುತ್ತಾರೆ. ನಾವು ಮಾಡುವ ಕಾರ್ಯದಲ್ಲಿ ಸಫಲತೆ ದೊರೆತರೆ ನಮಗೆ ಆಯಾಸದ ಅರಿವು ಆಗುವುದಿಲ್ಲ. ಬದಲಿಗೆ ಮನಸ್ಸು ಇನ್ನಷ್ಟು ಉತ್ಸುಕ ವಾಗಿರುತ್ತವೆ ಹೆಚ್ಚಿನ ಸಂದರ್ಭಗಳಲ್ಲಿ ಎಂಬುದು ಶಾರೀರಿಕ ಸ್ಥಿತಿಗಿಂತ ಹೆಚ್ಚಾಗಿ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಬುದ್ಧಿಗೆ ಕೆಲಸ ಕೊಟ್ಟಷ್ಟು ಹೆಚ್ಚು ಬುದ್ಧಿ ಪ್ರಕಟವಾಗುತ್ತದೆ ಶರೀರಕ್ಕೆ ಕಷ್ಟ ಕೊಟ್ಟಷ್ಟು ಅದು ಬಲಶಾಲಿಯಾಗುತ್ತದೆ. ಮನಸೇ ದುಃಖ ಕೊಟ್ಟಷ್ಟು ಅದು ವಿಶಾಲವಾಗುತ್ತದೆ ನಾವು ಸಂದರ್ಶ ಶೀಲರಾಗಿ ಇರುವವರಿಗೆ ಶಕ್ತಿಶಾಲಿಯಾಗಿ ವಿಕಾಸದತ್ತ ಸಾಗುತ್ತಿರುತ್ತೇವೆ. ಸಂಘರ್ಷದಿಂದ ಹಿಂಜರಿದಾಗ ಸವಾಲುಗಳನ್ನು ಎದುರಿಸಲು ಭಯಬೀತರಾದ ಜೀವನದಲ್ಲಿ ಬಹಬೇಗ ಅವನತಿ ಯತ್ತ ಸಾಗುತ್ತೇವೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸಹ ಸಾಹಸದಿಂದ ಮುನ್ನಡೆಯುವವವರ ಮುಂದೆ ಪರಿಸ್ಥಿತಿ ತಲೆಬಾಗ ಬೇಕಾಗುವದು. ಅವರೊಂದಿಗೆ ಜೊತೆಗಾರರು ಬಂದು ಸೇರಿಕೊಳ್ಳುತ್ತಾರೆ. ಸಾಹಸದಿಂದ ಆತ್ಮವಿಶ್ವಾಸ ಸಂಗ್ರಹಗೊಳ್ಳುತ್ತದೆ. ಆತ್ಮವಿಶ್ವಾಸವಿದ್ದರೆ ಗೆ ಯಾವುದು ಅಸಂಭವ ಇಲ್ಲವೆಂಬುದು ಮರೆಯಬಾರದು. ಸಂಘರ್ಷವೇ ಸಫಲತೆ. ಆಲಸ್ಯವು ಅವನತಿ ಎಂಬ ಸತ್ಯ ಜೀವನದ ದಾರಿದೀಪವಾದಾಗ ಶ್ರಮವು ಆನಂದದಾಯಕವಾಗಿದೆ ಪರಿಣಮಿಸಿ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ.
✍️ ಸವಿತಾ ಆರ್ ಅಂಗಡಿ. ಮುಧೋಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ