ಭಾನುವಾರ, ಆಗಸ್ಟ್ 22, 2021

ಒಲುಮೆಯ ಸಹೋದರನೇ (ಕವಿತೆ) - ದಾನೇಶ್ವರಿ ಬಸವರಾಜ ಶಿಗ್ಗಾoವಿ.

ಒಲುಮೆಯ ಸಹೋದರನೇ

ಕರುಳ ಕುಡಿಯ ಕಂದಮ್ಮಗಳಾಗಿ
ಜನಿಸಿದ ಸ್ನೇಹಿಗಳ ನಾವು
ನೆತ್ತರ ಹಂಚಿಕೊಂಡು ಬೆಳೆದ ಬಂಧನವು ನಮ್ಮದು

ನೋವಿನ ನನ್ನ ಮೊಗವ
ನಗಿಸಿದ ಮುದ್ದು ಅಣ್ಣನೇ
ನಲಿವಿನ ಸಿರಿಯು ಬದುಕಿಗೆ ದೊರೆಯಲೆಂದು ಹಾರೈಸಿದ ದೊರೆಯೇ

ತಾರೆಗಳ ತಂದು ನನ್ನ ಮಡಿಲಿಗೆ ಸುರಿವೆ ಎಂದ ಸಿರಿಯೇ
ಚಂದಿರನ ಮೊಗವ ನನಗೂಲಿಸಿದ
ಪ್ರೀತಿಯ ಅಣ್ಣನೇ

ಮುದ್ದು ಪೆದ್ದಾಗಿ ನನ್ನೊಡನೆ ಜಗಳವಾಡಿ ರೇಗಿಸಿ
ಮತ್ತೆ ನನ್ನ ಮುಖದ ನಗು ತರಿಸಿದ ಸಹೋದರನೇ

ನಿನ್ನ ಪ್ರೀತಿ, ವಾತ್ಸಲ್ಯದಿಂದ ಸೋತ ನಾನು ಒಲುಮೆಯಿಂದ ಏನು ಹೇಳಿದರು ಆಗಸದಲ್ಲಿ ಒಂದು ನಕ್ಷತ್ರ ತೋರಿದಂತೆ

ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು
- ದಾನೇಶ್ವರಿ ಬಸವರಾಜ ಶಿಗ್ಗಾoವಿ
ಜಲ್ಲಾಪುರ ಗ್ರಾಮ
ಸವಣೂರು ತಾಲೂಕ್
ಹಾವೇರಿ ಜಿಲ್ಲಾ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...