ಜೀವನಕ್ಕಾಗಿ ಶಿಕ್ಷಣ
ಬದುಕಿನ ಜಟಕಾ ಬಂಡಿಯ ಎಳೆಯಲು
ಜೀವನ ಶಿಕ್ಷಣವ ಕಲಿಯಬೇಕು ಮನುಜ
ಕಲಿಯಬೇಕು ಕಲಿತು ಜೀವಿಸಬೇಕು ಧರೆಯಲ್ಲಿ
ಜೀವನಕ್ಕಾಗಿ ಶಿಕ್ಷಣ ಕಲಿಕೆಯ ಮೂಲಮಂತ್ರವ...
ಶಿಕ್ಷಣವಿರದ ಜೀವನ ಮರುಭೂಮಿಯ ಬರಡಂತೆ
ಬೆಳೆಯದು ಉಳಿಯದು ತಲೆಯ ಮೂಲವೆ ಖಾಲಿ
ಶಿಕ್ಷಣದಿ ದೊರೆವುದು ಬದುಕಿನ ಕಾರ್ಯಸಿದ್ದಿ
ಅದರಿಂದಲೇ ಸಾಧ್ಯವಾಗುವುದು ಬದುಕ ಸಿದ್ದಿ...
ತಿಳಿಯುಬೇಕು ನಿರಂತರ ಜೀವನ ನಿಂತ ನೀರಲ್ಲ
ಜ್ಞಾನ ಪಡೆದು ಸಾಧಿಸಿದರೆ ಬಾಳೇ ಸಿಹಿಯ ಬೆಲ್ಲ
ಜ್ಞಾನಕ್ಕಿಂತ ಮಿಗಿಲಹುದು ಯಾವುದಿದೆ ಇಲ್ಲಿ
ತಿಳಿದು ನುಡಿದರೆ ಮಾತಾಗುವುದು ಬೆಳ್ಳಿ...
ಜೀವನಕ್ಕೆ ಶಿಕ್ಷಣವ ತಿಳಿಯುತ ನಡೆ ಅನುದಿನ
ಹರಡುವುದು ಬಾಳಿಗೆ ಸಮೃದ್ಧಿಯ ಬೆಳಕನ್ನ
ನೀ ಕಲಿತದ್ಜು ಕೇವಲ ನಿನಗಾಗಿ ಮಾತ್ರವಲ್ಲ
ಹಂಚು ನಿನ್ನ ಬುದ್ದಿಯ ಗಂಟು ಜಗವೆಲ್ಲ...
ಜೀವದ ಬದುಕಿನ ನಡೆನುಡಿಗೆ ಶಿಕ್ಷಣವೇ ಆಧಾರ
ಅರಿತು ನಡೆದರೆ ಮಾತ್ರ ಸಾದ್ಯ ನಮ್ಮ ಉದ್ದಾರ....
- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ
ದೂ.೯೬೩೨೨೯೬೮೦೯.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ