ಗುರುವಾರ, ಆಗಸ್ಟ್ 5, 2021

ನಳಿದಂತೆ (ಕವಿತೆ) - ಶ್ರೀ ಕಟ್ಟೆ ಎಂ ಎಸ್ ಕೃಷ್ಣ ಸ್ವಾಮಿ, ಮಂಡ್ಯ.

ನಳಿದಂತೆ.

ನಾನು ನೀನಾಗಿರುವೆ ಓ ಗೆಳತಿ
ಅಂದ ಭಾವನೆಯ ನೇಹ  ಮುಕುರದಂತೆ,,
ನನ್ನ ಮನವು ಪ್ರೀತಿ ತುಂಬಿದ
ವಿಶಾಲ ನೀಲಕಾಯ  ಮೋಡದಂತೆ,,//೧//

ಚೆಂದ ಬನದಲಿ ಅರಳಿದ ಕುಸುಮ
ಕಿರಣಕೇತು ಕದಿರ ಹೊನ್ನ ರಶ್ಮಿಯಂತೆ,,
 ಚೆಲುವ ಲತೆಯಲಿ ನಗುತ  ಪ್ರಜ್ವಲಿಸುವ
ರಜನೀಕರನ ಬೆಳದಿಂಗಳ ರಜತದಂತೆ,,//೨//

ಗಿರಿ ಬೆಟ್ಟದಿಂದ ಧುಮ್ಮುಕುವ
ಕಣ್ಮನ ಸೆಳೆಯುವ ಜಲವೇಣಿಯಂತೆ,,
ಚಿತ್ತದಲ್ಲಿ ಹರಿವ ಉತ್ಕರ್ಷ ನವ ಲಹರಿ
ಚೆಲುವಿನಲಿ ಜಿಗಿಯುವ  ಚಿಗರೆಯಂತೆ,,//೩//

ಹೃದಯ ವೀಣೆ ಸಪ್ತನಾದ ಮೀಟಿದಂತೆ
ಮಯೂರಿ ನರ್ತಿಸುವುದು  ಸೊಬಗಿನಂತೆ,,
ವಸಂತ ಕೋಕಿಲ ಮರೆಸಿ  ಹಾಡುತಿರೆ
ಕಾಮನಬಿಲ್ಲೆ ರಂಗಲಿ   ನಳಿದಂತೆ,,//೪//

- ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಅಂಚೆ ಜೀವ ವಿಮೆ ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...