ಬದುಕಿನ ಪಯಣ
ನವ ಜೋಡಿಯಾಗಿ ಬದುಕ ನೆಟ್ಟರು,
ಒಂದೇರಡು ವರುಷ ಕನಸ ಕಟ್ಟಿದರು //೨//
ಪ್ರೀತಿ ವಾತ್ಸಲ್ಯ ಲೆಕ್ಕವಿಲ್ಲದೆ ಹರಿ ಬಿಟ್ಟರು,
ಬಾಳ ಬಂಡಿಯ ಆಲೋಚನೆಯಲ್ಲಿ ಮುಳುಗಿದರು
//೨//
ಅಂದ ಚೆಂದದ ಸೂರು ಕಟ್ಟಿದರು,
ಭವಿಷ್ಯದ ಕನಸಿಗೆ ಬದುಕಿದರು//೨//
ಆಸೆ ಆಕಾಂಕ್ಷೆಗಳಿಗೆ ಮೂಟೆ ಕಟ್ಟಿದರು,
ಜೀವನ ಹೋರಾಟಕ್ಕೆ ಬಿಸಿ ರಕ್ತ ಸೂಸಿದರು//೨//
ಮಕ್ಕಳನ್ನು ಸ್ವಚ್ಛಂದವಾಗಿ ಹಾರಲು ಬಿಟ್ಟರು,
ಎಲ್ಲೊ ಅವಿತ್ತಿದ್ದ ಕನಸ್ಸುಗಳ ಮೆಲುಕು ಹಾಕಿದರು//೨//
ತನ್ನ ಬಿಂಬವ ನೋಡಿ ತಾವೆ ಹೆಮ್ಮೆ ಪಟ್ಟರು,
ತಾನು ಪಟ್ಟ ಕಷ್ಟ ವನ್ನೆಲ್ಲ ಮರೆತು ಸಂತಸದಿನಲಿದರು/೨/
ಮಕ್ಕಳು ಮಾತ್ರ ವೃದ್ಧಾಶ್ರಮವನ್ನೆ ಮೀಸಲಿಟ್ಟರು,
ಕಿಟಕಿಯ ಕಿಂಡಿಯಲ್ಲಿ ನೋಡುತ ಕಣ್ಣಂಚಲಿ ನೀರು ಹರಿಸಿದರು//೨//
ಕಂಡ ಕನಸು ಜೊತೆಗೆ ಬಾಳ ಪಯಣ ಮುಗಿಸಿ ಮಸಣ ಸೇರಿದರು,
ಒಮ್ಮೆ ಹಿಂತಿರುಗಿ ಬರುಡು ಬಾಳು ಮುಗಿಸಿದರು//೨//
ಇನ್ನಾದರೂ ಜಾಗೃತರಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು,
ಮಕ್ಕಳಿಗೆ ಬೇಕಿರುವುದು ಮೌಲ್ಯ ಶಿಕ್ಷಣದ ದರಬಾರು//೨//
ಬಾಳ ಪಯಣದಲಿ ಪ್ರೀತಿ ವಾತ್ಸಲ್ಯವೇ ತೇರು,
ಸರ್ವ ಸಂಪನ್ಮೂಲ ದೀಕ್ಕರಿಸಿದರೆ ಹೆಚ್ಚು ಕಾಲ ಬಡಿಕಿರುವರು ನಮ್ಮ ಹಿರಿಯರು//೨//
- ಸಹನಾ ಯಶವಂತ್ ಗೌಡ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
ಮೈಸೂರು .
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ