"ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿಗೆ" ಸುರೇಶ ಕಲಾಪ್ರಿಯಾ ಆಯ್ಕೆ
ಗಂಗಾವತಿ : ರಾಜ್ಯದ ವಿವಿಧ ಮೂಲೆಗಳಲ್ಲಿ ಅಡಗಿರುವ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿರುವ ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನ ತನ್ನ ಮೊದಲನೇ ವರ್ಷದ ವರ್ಷಾಚರಣೆ ಸಂದರ್ಭದಲ್ಲಿ ಪ್ರಕಟಿತ ಕೃತಿಗಳಿಗೆ ಕೊಡಮಾಡುತ್ತಿರುವ
"ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿಗೆ" ಶಿಕ್ಷಕ ಹಾಗೂ ಸಾಹಿತಿ ಸುರೇಶ ಕಲಾಪ್ರಿಯಾ ಆಯ್ಕೆಯಾಗಿದ್ದಾರೆ. ಇವರ ಚೊಚ್ಚಲ ಕವನ ಸಂಕಲನ
ಮೂಕ ಮನದ ಮಾತು ಕೃತಿಯು ಪ್ರಶಸ್ತಿಗೆ ಆಯ್ಕೆ ಆಗಿದ್ದು ತುಮಕೂರಿನಲ್ಲಿ ನಡೆಯುವ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನ - ೧ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಜ್ಯ ಘಟಕದ ಅಧ್ಯಕ್ಷರಾದ ಹುಲಿಯೂರುದುರ್ಗ ಲಕ್ಷ್ಮಿನಾರಾಯಣ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
ಸುರೇಶ್ ಕಲಾಪ್ರಿಯಾ ಇವರು ಸದ್ಯ ಗಂಗಾವತಿ ತಾಲ್ಲೂಕಿನ ಮರಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ಭಟ್ಟರ ನರಸಾಪುರ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯದ ಪ್ರಕಾರಗಳಾದ ಕವಿತೆ, ಲೇಖನ, ಹಾಯ್ಕು, ಗಜಲ್, ಮಕ್ಕಳ ಕಥೆಗಳು ಮುಂತಾದ ಬರಹ, ಶೈಕ್ಷಣಿಕ ಅಭಿವೃದ್ಧಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಇವರಿಗೆ ಈ ರಾಜ್ಯಮಟ್ಟದ ಪ್ರಶಸ್ತಿ ದೊರೆತಿದ್ದು ಈ ಹಿಂದೆ ಮೂಕ ಮನದ ಮಾತು ಕವನ ಸಂಕಲನವು 2020 ನೇ ಸಾಲಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದ ಕೃತಿಯಾಗಿದೆ. ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕಾವ್ಯಲೋಕ, ಕ. ರಾ. ಪ್ರಾ. ಶಾ. ಶಿ.ಸಂಘ, ರಾ. ಸ. ನೌ. ಸಂಘ ಅಭಿನಂದಿಸಿದೆ.
ಮಾನ್ಯರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ವತಿಯಿಂದ ಅಭಿನಂದನೆಗಳು 💐
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ತಮ್ಮ ಪ್ರೋತ್ಸಾಹಕ್ಕಾಗಿ ಮನಪೂರ್ವಕ ಧನ್ಯವಾದಗಳು
ಪ್ರತ್ಯುತ್ತರಅಳಿಸಿ