ಭಾನುವಾರ, ಸೆಪ್ಟೆಂಬರ್ 12, 2021

ಮುರುಕು ಮನೆ (ಕವಿತೆ) - ಶ್ರೀಧರ ಗಸ್ತಿ, ಧಾರವಾಡ.

ಮುರುಕು ಮನೆ

ಮುರುಕು ಮನೆಯಲಿ ಹರಕು ಸೀರೆಯ
ಚಿಂದಿ ತೇಪೆಯ ಮಾಡಿದರೋ ಓಓಓ ಹೊಯ್

ತುತ್ತಿನ ಚೀಲಕೆ ಹಿಟ್ಟಿನ ಗಂಜಿಗೆ
ಹರಕು ಸೀರೆಯಲಿ ತೆಪೆಯ ತೂತಿಗೆ
ಬೆವರ ಹನಿಗಳ ಸುರಿಸಿದರೋ ಓಓಓ ಹೊಯ್

ದುಡಿವ ಕೈಗಳು ದುಡಿಯುತ ಹೋದ್ವು
ದೊರೆಗಳ ಅರಮನೆ ಬೆಳೆಯುತ ಹೋದ್ವು
ಪ್ರಜೆ ಪ್ರಭುವಾಗವ ಕಾಲ ಬಾರದೇ ಹೋಯ್ತಲ್ಲೋ

ಬೀದಿ ಭಿಕ್ಷುಕರು ಜಾಸ್ತಿಯಾದ್ರು
ದೇವಸ್ಥಾನಗಳ ತುಂಬಿ ಹೋದ್ರು
ದೇಶದ ಖಜಾನೆ ಮಾತ್ರ ಖಾಲಿ ಆಯ್ತಲ್ಲೋ ಓಓಓ

ಅಲೆಮಾರಿಗಳು ಅಲೆ ಅಲೆಯಾದ್ರು
ಗೊಲ್ಲರ ಗುಡಿಸಲು ಬೆಳೆಯುತ ಹೋದ್ವು
ನೆಲೆಇಲ್ಲದವ್ರ ಆಸರೆ ಮನೆಗಳು ತೇಲಿ ಹೋದ್ವಲ್ಲೋ

ಕನಸಿನ ಬಣದಲಿ ಕವಡೆಯ ಆಟದಿ
ತೇಪೆಯ ಮುಚ್ಚಿದ ನಿದ್ದೆಯ ಬೇಲಿಯ
ಕೋಟೆಗೆ ಕೌದಿಯ ಹೊದಿಸಿದರೋ ಓಓಓಹೊಯ್

✍ ಶ್ರೀಧರ ಗಸ್ತಿ ಧಾರವಾಡ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...