ಶನಿವಾರ, ಸೆಪ್ಟೆಂಬರ್ 11, 2021

ಗೊರೂರು ಅನಂತರಾಜು ರವರ ರಂಗಸಿರಿ - ಕಥಾ ಐಸಿರಿ ಹೊತ್ತಿಗೆಯ ಕೃತಿ ವಿಮರ್ಶೆ. - ಶ್ರೀ ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ, ಮಂಡ್ಯ.

ಗೊರೂರು ಅನಂತರಾಜು ರವರ ರಂಗಸಿರಿ - ಕಥಾ ಐಸಿರಿ ಹೊತ್ತಿಗೆಯ ಕೃತಿ ವಿಮರ್ಶೆ..!

ಕಳೆದ ಮೂರು ದಶಕಗಳಿಂದ ಬರವಣಿಗೆ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇ ಶೈಲಿಯ ಮೂಲಕ ಛಾಪು ಮೂಡಿಸಿರುವ ಹವ್ಯಾಸಿ ಕಲಾವಿದರಾಗಿ ಪ್ರತಿದಿನ ಪ್ರಾದೇಶಿಕ ಪತ್ರಿಕೆಯಲ್ಲಿ ತಮ್ಮದೇಯಾದ ಅನೇಕ ಬರಹಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಹಾಸನ ಜಿಲ್ಲೆಯಾದ್ಯಂತ ಗೊರೂರು ಅನಂತರಾಜು ರವರ ಹೆಸರು ಪ್ರಸಿದ್ದಿಯಾಗಿದೆ , ಇವರು ಸರ್ಕಾರಿ ಉದ್ಯೋಗಿಯಾಗಿ ಸೇವೆಯಲ್ಲಿ ಇದ್ದಾಗನಿಂದ ನಿವೃತ್ತಿಯಾದ ನಂತರವು , ತಾವು ಹಲವಾರು ನಾಟಕಗಳಲ್ಲಿ ಅಭಿನಯಿಸಿ ,ಪ್ರಸ್ತುತ  ಹಲವು ಬಳಗಗಳನ್ನ ಪೋಷಿಸುವ ಮೂಲಕ ಕಲೆ ಸಾಹಿತ್ಯಕ್ಕೆ ಕಲಾ ಪೋಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ , ಹಾಗು ಹಲವು ಕಲಾವಿದರಿಗೆ ರಂಗ ಸಜ್ಜಿತ ವೇದಿಕೆಗಳನ್ನು ಕಲ್ಪಿಸಿಕೊಡುವುದರ ಜೊತೆಜೊತೆಗೆ  ರಂಗಗೀತೆ , ನಾಟಕಗಳ ಸ್ಪರ್ಧೆ  ನಡೆಸುವ ಮೂಲಕ ಕಲಾ ಪೋಷಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ  , ಇವರು ಹಲವಾರು ಸಾಹಿತ್ಯ ಹೊತ್ತಿಗೆಗಳನ್ನು ಹೊರ ತಂದಿದ್ದಾರೆ ಹಾಗು  ಎಲೆಮರೆಕಾಯಿಯಂತೆಯಿರುವ ಹಲವಾರಿಗೆ  ಹಿರಿಯರು  ಕಿರಿಯರೆಂಬ ಭೇದ ಭಾವ ತೋರದೆ ಎಲ್ಲರೊಟ್ಟಿಗೆ ಜೊತೆಗೂಡಿ ಕಲಾವಿದರು  ಕವಿಗಳನ್ನು ಜಿಲ್ಲೆಯ ಪ್ರಾದೇಶಿಕ ಪತ್ರಿಕೆಗಳಲ್ಲಿ  ಕವನ ಲೇಖನ ಪರಿಚಯವನ್ನೂ ಮಾಡುವುದರ ಮೂಲಕ ಅವರನ್ನು ಬೆಳಕಿಗೆ ತಂದ ಕೀರ್ತಿ ಸಲ್ಲುತ್ತದೆ , ಇವರು ತುಂಬ ಸರಳ ಸಜ್ಜನ ಉತ್ತಮ ಸಂಘಟಕರಾಗಿ,  ಸಾಮಾಜಿಕ ಕಳಕಳಿಯಿಂದ ತಮ್ಮನ್ನೇ ಸಾಮಾಜಿಕ ಚಟುವಟಿಕೆಗಳಲ್ಲಿ  ತೊಡಗಿಸಿಕೊಂಡಿದ್ದಾರೆ , ಇವರನ್ನ ನೋಡಿದ್ದರೆ ಒಂದು ಗಾದೆ ನುಡಿ ನೆನಪಾಗುತ್ತದೆ , "ಆಡು ಮುಟ್ಟದ ಸೊಪ್ಪಿಲ್ಲ " ಎಂಬ ಗಾದೆ, ಇವರಿಗೆ ಅನ್ವಯಿಸುತ್ತೆ, ಈಗಾಗಲೇ ಕನ್ನಡ ಸಾರಸ್ವತ ಲೋಕಕ್ಕೆ ಮೂವತ್ತಕ್ಕು ಹೆಚ್ಚು ಕೃತಿಗಳನ್ನು ನೀಡಿರುವ ಶ್ರೀಯುತರು , ಒಂದು ಸುಂದರ ಕೃತಿ ನನ್ನ ಕೈ ಸೇರಿದೆ , ಅದು  " ರಂಗಸಿರಿ ಕಥಾ ಐಸಿರಿ "  ಹೆಸರಿನಂತೆ ಒಳಗಿನ ಕಥಾ ಲೇಖನವು ಅಷ್ಟೇ ಸ್ವಾರಸ್ಯಕರವಾಗಿ ಮೂಡಿಬಂದಿದೆ, ಇಲ್ಲಿ ರಂಗ ಪ್ರಯೋಗಗಳ ವಿಮರ್ಶೆಗಳ ಸೊಬಗಿನ ಐಸಿರಿಯಿಂದ ಕೂಡಿದ ಗಟ್ಟಿತನದ ಬರವಣಿಗೆಯ ಮೂಲಕ ರಾರಾಜಿಸುತ್ತದೆ , ಇಲ್ಲಿ ಒಟ್ಟು ಐವತ್ತುಕ್ಕೂ ಹೆಚ್ಚು ರಂಗ ಪ್ರಯೋಗಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ , ಪ್ರಸ್ತುತ ದಿನಗಳಲ್ಲಿ ರಂಗಭೂಮಿ ಕಲೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ , ರಂಗಭೂಮಿಯ ಕುರಿತು ಸಾಹಿತ್ಯ ಬರವಣಿಗೆಯ ಮೂಲಕ  ಎಲ್ಲರನ್ನು ಉತ್ತೇಜಿಸುತ್ತ , ಸಮಾಜದಲ್ಲಿ ಯುವ ಪೀಳಿಗೆಗಳಿಗೆ ಪರಿಚಯಿಸುವ , ಇವರ ಲೇಖನ ತುಂಬ  ಸಹಕಾರಿಯಾಗಲಿದೆ , ಇವರು ಹೊರ ತಂದಿರುವ ವಿಶಿಷ್ಟ ಕೃತಿಯಲ್ಲಿ , ಕನ್ನಡದ ಪ್ರಸಿದ್ದ ಕಥೆಗಾರರು ನಾಟಕಗಾರರಾದ ಡಾ.ಪೂರ್ಣ ಚಂದ್ರ ತೇಜಸ್ವಿ ರವರ ಕರ್ವಾಲೋ, ಡಾ. ಶಿವರಾಮಕಾರಂತ ರವರ ಮೂಕಜ್ಜಿಯ ಕನಸುಗಳು , ಪಿ .ಲಂಕೇಶ್ ರವರ ಚಂದ್ರ ಮಂಡಲ , ನಿವೃತ್ತರು, ಡಾ.ಸಿದ್ದಲಿಂಗಯ್ಯ ರವರ ಊರುಕೇರಿ , ಎಂ ಎಸ್ ರಾಮಸ್ವಾಮಿ ರವರ ದಾನಶೂರ ಕರ್ಣ, ಹೀಗೆ ಡಾ. ಚಂಪಾ ರವರ ಕಾದಂಬರಿ , ಚಂದ್ರಕಾಂತ ಕುಸನೂರು ರವರ ದಿಂಡಿ , ವಿವೇಕ್ ಶಾನ್ ಭಾಗ್ ರವರ ಕಂತು , ಡಾ. ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿ , ಎನ್ ಎಸ್ ರಾವ್ ರವರ ವಿಷಜ್ವಾಲೆ,ಬೆಳ್ಳಾವೆ ನರಹರಿಶಾಸ್ತ್ರಿ ರವರ ಶ್ರೀ ಕೃಷ್ಣ ಗಾರುಡಿ , ಸಂಪೂರ್ಣ ರಾಮಾಯಣ , ಬಿ ಪುಟ್ಟಸ್ವಾಮಯ್ಯ ರವರ ಕುರುಕ್ಷೇತ್ರ ,  ಹೊಂಡರಬಾಳು ಎಸ್ ಲಿಂಗರಾಜೇಅರಸ್ ರವರ ದಕ್ಷ ಯಜ್ಞ , ರಾಜಕವಿ ಪಂಡಿತ ತಿರುಮಲೆ ಶ್ರೀನಿವಾಸ ಅಯ್ಯಂಗಾರ್ ರವರ ಭಕ್ತ ಪ್ರಹ್ಲಾದ , ಹೆಚ್ ಬಿ ರಮೇಶ್ ರವರ ನಾಟ್ಯರಾಣಿ ಶಾಂತಲಾ , ಡಾ.ಮಳಲಿ ವಸಂತಕುಮಾರ್ ರವರ ಲಂಕೇಶ್ವರಿ , ಮೊಗಳ್ಳಿ ಗಣೇಶ್ ರವರ ಬುಗುರಿ ,  ಎಂ ಎಸ್ ರಾಮಸ್ವಾಮಿ ರವರ ಕಥೆ , ತೋರಣಗಲ್ ರಾಜಾರಾವ್ ರವರ ಸುಭದ್ರ ಕಲ್ಯಾಣ , ಅಗ್ರಹಾರ ಕೃಷ್ಣಮೂರ್ತಿ ರವರ ದಾಶ ಶೂಕೊ,, ಹೀಗೆ ಮುಂತಾದವರ ಪ್ರಸಿದ್ದ ಕಥೆಗಳು ಕಾದಂಬರಿಗಳು ನಾಟಕಗಳು , ಬಿ ವಿ ರಾಜಾರಾಂ , ಕೆ ಸಣ್ಣೇಗೌಡ , ಆರ್ ನಾಗೇಶ್ , ಮಂಜುನಾಥ್, ಚನ್ನಕೇಶವ , ರಾಜೀವ್ , ಜಯಶಂಕರ್ ಬೆಳಗುಂಬ , ಚಿದಂಬರ ರಾವ್ , ಎ ಸಿ ರಾಜು, ಎಚ್ ಎಲ್ ಪಾಲಾಕ್ಷ ಚಾರ್,,  ಹೀಗೆ ಹಲವು ನಿರ್ದೇಶಕರುಗಳಿಂದ ಯಶಸ್ವಿ ಪ್ರದರ್ಶನವಾಗಿ ರಂಗ ಪ್ರಯೋಗಗಳ ಕಂಡಿವೆ. 
ಈ ಎಲ್ಲ ನಾಟಕಗಳಲ್ಲಿ ಅಭಿನಯಿಸಿರುವ ನಟ ನಟಿ ಮಣಿಗಳ ಮೂಲಕ ಆಯಾ ಪಾತ್ರಗಳಿಗೆ ಹೃದಯಸ್ಪರ್ಶ ನೀಡಿರುತ್ತಾರೆ , ಅಷ್ಟು ಸೊಗಸಾಗಿ ಸ್ವಾರಸ್ಯಕರವಾಗಿ ಕಣ್ಣು ಮುಂದೆ ಬರುವಂತೆ ವರ್ಣ ರಂಜಿತವಾಗಿ ಲೇಖಕರು ಅಷ್ಟು ಸವಿವರವಾಗಿ ಅರ್ಥೈಸಿದ್ದಾರೆ  , ಒಂದು ನಾಟಕ ಗೆಲ್ಲಬೇಕಾದರೆ ಅಭಿನಯ , ಶೃಂಗಾರ ಸಿಂಗಾರ ,  ನವರಸಗಳು ತುಂಬಿದ ಹಾಡುಗಾರಿಕೆ ನೃತ್ಯ , ಉತ್ತಮ ಸಂಗೀತ, ವಾದ್ಯ ವೃಂದ, ಸೀನರಿ,ದೀಪಾಲಂಕಾರ, ಕಥೆ ನಿರ್ದೇಶನ , ಎಲ್ಲವನ್ನು ತುಂಬ ಸೊಗಸಾಗಿ ಬರವಣಿಗೆಯ ಮೂಲಕ ಎಲ್ಲರ ಮನಸ್ಸನ್ನು ಸೆರೆಹಿಡಿಯುತ್ತ ,  ಕಣ್ಣು ಮುಂದೆ ತಂದಿದ್ದಾರೆ , ಶ್ರೀಯುತರು ತುಂಬ ಬಹುಮುಖ ಪ್ರತಿಭವಂತರು , ಈ ರಂಗಸಿರಿ - ಕಥಾ  ಐಸಿರಿ ಮೂಲಕ  ಸಾಬೀತುಪಡಿಸಿದ್ದಾರೆ , ಒಬ್ಬ ಕಲಾವಿದನಾಗಬಹುದು , ಆದರೆ, ಅದೇ ನೊಂದ ಬಡ ಕಲಾವಿದರ ಪರಿಸ್ಥಿತಿಯನ್ನು ಅವಲೋಕಿಸುವ ಪೋಷಿಸುವ ಕಲೆ ಎಲ್ಲರಿಗು ಅಸಾಧ್ಯ , ಶ್ರೀಯುತರಾದ ಗೊರೂರು ಅನಂತರಾಜು ರವರಿಗೆ ಆದು ಬಂದಿದೆ , ಅವರ ನಿಸ್ವಾರ್ಥ ಸೇವೆಗೊಂದು ನನ್ನ ಪ್ರಣಾಮ , ಸದಾ ಹೀಗೆ ಹಸನ್ಮುಖಿಗಳಾಗಿ ನಾಡು ನುಡಿ  ಕಲೆ ಸಾಹಿತ್ಯ ಸೇವೆ ನಿರಂತರವಾಗಿ ಮಾಡಲು ಶಕ್ತಿ ನೀಡಿ , ಅವರಿಗೆ  ಯಶಸ್ಸು ತಂದು ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಸದಾ ರಾರಾಜಿಸುತಿರಲಿ , ಇವರಿಂದ ಇನ್ನೊಂದಷ್ಟು ಕಲಾವಿದರು ಕವಿಗಳು ಬೆಳಕಿಗೆ ಬರುವಂತಾಗಲೆಂದು ಆಶಿಸುತ್ತೇನೆ , ಇವರ ಮೂಸೆಯಿಂದ ಇನ್ನೊಂದಷ್ಟು ಸಾಹಿತ್ಯ ಪ್ರಕಾರದ ಹೊತ್ತಿಗೆಗಳು ಸಾಹಿತ್ಯ ಜಗತ್ತಿಗೆ ಮೂಡಿ ಬಂದು , ಓದುಗರಿಗೆ ರಸದೂಟ ನೀಡುವುದರ ಮೂಲಕ  ಸಾಹಿತ್ಯ ಲೋಕದಲ್ಲಿ ಇನ್ನು ಪ್ರಜ್ವಲಿಸಲೆಂದು ಆಶಿಸುವೆ. 
- ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ 
ಸಾಹಿತಿ ಕಲಾವಿದ ನಟ ಸಂಘಟಕ 
ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...