ಭಾನುವಾರ, ಸೆಪ್ಟೆಂಬರ್ 12, 2021

ಕಾರ್ಯಕ್ರಮದ ವರದಿ : ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ, ಮಂಗಳೂರು.

ಕಾರ್ಯಕ್ರಮದ ವರದಿ : ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ, ಮಂಗಳೂರು.
 ಸಿದ್ಧೇಶ್ವರ ಸಾಹಿತ್ಯ ವೇದಿಕೆ, ಮಂಗಳೂರು ,ದ.ಕ ಇದರ ಆಶ್ರಯದಲ್ಲಿ 11.9.21ರಂದು ಅಂತರ್ಜಾಲ ಕವಿಗೋಷ್ಠಿ ಹಾಗೂ ಬಳಗದ ಪ್ರಚಲಿತ ವರ್ಷದ ಕಾರ್ಯಕ್ರಮಗಳ ಉದ್ಫಾಟನೆ ನಡೆಯಿತು. ಮಂಗಳೂರಿನ ಉದ್ಯಮಿ (ಚಾರ್ಟೆಡ್ ಅಕೌಂಟೆಂಟ್) ಎಸ್.ಎಸ್.ನಾಯಕ್ ಕಾರ್ಯಕ್ರಮಗಳನ್ನು ಉದ್ಫಾಟಿಸಿ ಮಾತನಾಡಿ ಸಾಹಿತ್ಯ ಎನ್ನುವುದು ಮನಸ್ಸಿಗೆ ಮುದ ನೀಡುವ ಒಂದು ಉತ್ತಮ ಹವ್ಯಾಸ ಅದರಲ್ಲೂ ನಮ್ಮಂತಹ ಬಿಸ್ ನೆಸ್ ಮ್ಯಾನ್ ಗಳಿಗೆ ಸಾಹಿತ್ಯ ಖಂಡಿತಾ ಮನಸ್ಸಿಗೆ ಶಾಂತಿ ನೀಡಿ ಬದುಕಿಗೆ ಉಲ್ಲಾಸ ನೀಡುತ್ತದೆ ಎಂದರು. ವೇದಿಕೆಯ ಮಂಗಳೂರು ತಾಲೂಕಿನ ಅಧ್ಯಕ್ಷೆ  ಶ್ರೀಮತಿ ರೇಖಾ ಸುದೇಶ್ ರಾವ್ ಪ್ರಾಸ್ತಾವಿಕವಾಗಿ ಮಾತಾನಾಡಿ ಸ್ವಾಗತಿಸಿದರು. ಅರುಂಧತಿ ರಾವ್ ಪ್ರಾರ್ಥಿಸಿದರು.
  ಮುಖ್ಯ ಅತಿಥಿ ಕವಿ ಡಾ.ಸುರೇಶ್ ನೆಗಳ ಗುಳಿಯವರು ಗೌರೀ ಗಣೇಶ ಹಬ್ಬವು ಯುಗಳ ಹಬ್ಬಗಳಲ್ಲಿ ಮುಕುಟಪ್ರಾಯವಾದುದು, ಸರ್ವರೂ ಜಾತಿ ಮತ ಭೇದವಿಲ್ಲದೆ ಉತ್ಸಾಹದಿಂದ ಭಾಗವಹಿಸುವ ಹಬ್ಬವಾಗಿದೆ. ಸ್ವಾತಂತ್ರ್ಯ ಹೋರಾಟದ ವೇಳೆ ಜನರನ್ನು ಸಂಘಟಿಸಲು ಬಾಲ ಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವ ಆರಂಭಿಸಲು ಕಾರಣ ಪುರುಷರು. ಈಗಲೂ ಜನರು ಬೆರೆಯಲು ಒಂದು ಸದವಕಾಶ, ಇದರಲ್ಲಿ ಆಡಂಬರ ಸಲ್ಲದೆಂದರು. ವೇದಿಕೆಯ ಜಿಲ್ಲಾಧ್ಯಕ್ಷ ಗುಣಾಜೆ ರಾಮ ಚಂದ್ರ ಭಟ್ಟರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಎಲ್ಲಾ ಕವಿಗಳ ಕವಿತ್ವದ ಸಾರವನ್ನು ತುಂಬಾ ಚೆನ್ನಾಗಿ ವಿಶ್ಲೇಷಿಸುತ್ತಾ ಪಧ್ಯ ಸಾಹಿತ್ಯ ಅದು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು. ಮೃಧು ಮತ್ತು ಮಧುರ ಶೈಲಿಯದಾಗಿರುತ್ತದೆ.ನಿರಂತರವಾಗಿ ಕವಿಗೋಷ್ಠಿ ನಡೆಯುತ್ತಿರುವುದರಿಂದ ಎಲ್ಲಾ ಕವಿಗಳೂ ತಮ್ಮ ಬರವಣಿಗೆಯಲ್ಲಿ ದಿನದಿಂದ ದಿನಕ್ಕೆ ಪಳಗುತ್ತಿದ್ದಾರೆ ಎಂದು ನುಡಿದರು. ೨೫ ಕ್ಕೂ ಹೆಚ್ಚು ಕವಿಗಳು ಗೌರೀ ಗಣೇಶರ ಬಗ್ಗೆ ಬರೆದ ಸ್ವರಚಿತ ಕವನಗಳನ್ನು ವಾಚಿಸಿದರು. ಕರ್ನಾಟಕ ರಾಜ್ಯದ ಹಾಗೂ ಕಾಸರಗೋಡಿನ ಕವಿಗಳು ಈ ಗೋಷ್ಠಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಜಯಾನಂದ ಪೆರಾಜೆಯವರು ಕವನ ವಾಚಿಸಿದ ಬಗ್ಗೆ ತಮ್ಮ ನಿರ್ಣಾಯಕ ನುಡಿಯಲ್ಲಿ ಕವಿತೆಗಳ ಕುರಿತಾಗಿ ಮಾತನಾಡಿ ಪ್ರಶಂಸೆ ವ್ಯಕ್ತಪಡಿಸಿದರು. ಹಾಗೂ ಸರಳ ಭಕ್ತಿ ಪೂರ್ವಕವಾದ ಹಬ್ಬದ ಆಚರಣೆಗೆ ಕರೆ ನೀಡಿದರು. 
  ಈ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಜಾ ಮಾಲೀ ಪಾಟೀಲ ಅವರು ಮಾತನಾಡಿ ಗಣಪತಿ ಹಬ್ಬ ಬೆಳೆದುಬಂದಿರುವ ರೀತಿ ಹಾಗೂ ಅದನ್ನು ಮುಂದಿನ ಪೀಳಿಗೆಗೆ ನಾವು ಕೊಂಡೊಯ್ಯುವ ಬಗೆಯನ್ನು ಹಾಗೂ ನಮ್ಮ ದೇಶದ ಉನ್ನತ ಸಂಸ್ಕೃತಿಯನ್ನು ಪ್ರಪಂಚ ಕೊಂಡಾಡುವ ಹಾಗೆ ಮಾಡಬೇಕೆನ್ನುವ ಆಶಯ ವ್ಯಕ್ತಪಡಿಸಿದರು. ಹಾಗೂ ನಾನಾ ಗೌಡ ಪಾಟೀಲ್ ಇವರು ಸಂದರ್ಭೋಚಿತವಾಗಿ ಮಾತಾಡಿ ಆಯೋಜಕರಿಗೆ ಅಭಿನಂದನೆಗಳನ್ನು ತಿಳಿಸಿದರು. ಹಾಗೆಯೆ ದೇವತೆಗಳಲ್ಲೆ ಗಣೇಶ ತುಂಬಾ ಬುದ್ಧಿವಂತ ದೇವರು ಅವನು ಎಲ್ಲರಿಗೂ ವಿದ್ಯೆ ಬುದ್ಧಿ ಕರುಣಿಸಿ ಕಾಪಾಡಲಿ ಎಂದು ಹಾರೈಸಿದರು. ಹಾಗೂ ಪರಿಸರಕ್ಕೆ ಪೂರಕವಾಗಿ ಹಬ್ಬಗಳ ಆಚರಣೆ ಇರಲಿ ಮಾರಕವಾಗಿ ಬೇಡವೆಂದು ನುಡಿದರು. ಅತಿಥಿಗಳಾದ ಕಾ.ವಿ ಕೃಷ್ಣ ದಾಸ್ ಮಾತನಾಡಿದರು. ರಶ್ಮೀ ಸನಿಲ್ ತಮ್ಮ ಸುಂದರ ಮಾತಿನ ಶೈಲಿಯ ಮೂಲಕ  ನಿರೂಪಿಸಿದರು. ಹಿತೇಶ್ ಕುಮಾರ್ ಎ. ವಂದಿಸಿದರು.

ವರದಿ : ಗುಣಾಜೆ ರಾಮಚಂದ್ರ ಭಟ್.
೧೧.೯.೨೧.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...