ಗುರುವಿನ ಮಾತು ಅರಿವಿನ ಗುರುತು ಸ್ವಲ್ಪ ಕೇಳು ನೀ ಕೂತು....
ಗುರು ಎಂಬುದು ಮೂಲತಃ ಸಂಸ್ಕ್ರತ ಪದ. 'ಗು' ಎಂದರೆ ಕತ್ತಲು ಅಥವಾ ಅಜ್ಞಾನ , 'ರು' ಎಂದರೆ ಕತ್ತಲನ್ನು ಹೋಗಳಾಡಿಸುವವನು ಎಂದರ್ಥ. ಗುರುವಿನ ಮೌಲ್ಯ ಮತ್ತು ತ್ಯಾಗವನ್ನು ಸಮಾಜದ ಮೇಲೆ ದೊಡ್ಡದಾದ ಪ್ರಭಾವವನ್ನು ಬೀರುತ್ತದೆ
ಗುರು ಬ್ರಹ್ಮ
ಗುರು ವಿಷ್ಣು
ಗುರು ದೇವೋ ಮಹೇಶ್ವರ
ಗುರು ಸಾಕ್ಷಾತ್ ಪರ ಬ್ರಹ್ಮ
ತಸ್ಮೈ ಶ್ರೀ ಗುರವೇ ನಮ:
ಗುರುವೇ ದೇವರಾಗಿ ಗುರುವೇ ಎಲ್ಲಾ ಆಗಿ ವಿದ್ಯಾರ್ಥಿಗೆ ಬೇಕಾಗುವ ಜ್ಞಾನವನ್ನು, ಮಾನಸಿಕ ಸಾಮರ್ಥ್ಯವನ್ನು, ದೈಹಿಕ ಸದೃಢತೆಯನ್ನು ಒದಗಿಸಲು ಸದಾ ಸಿದ್ಧನಿರುತ್ತಾನೆ ಆದ್ದರಿಂದ ಗುರುವಿನ ಜ್ಞಾನವನ್ನು ಪಡೆದ ವಿದ್ಯಾರ್ಥಿ ಗುರುವಿನೆಡೆಗೆ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ.ಇದೊಂದು ಗುರು - ಶಿಷ್ಯರ ಪರಂಪರೆಯ ತಿಳಿಸುವದು.ಅಕ್ಷರ ಕಲಿಸುವುದನ್ನು ಅಲ್ಲದೆ ಬದುಕಿನ ದಾರಿಯನ್ನು ತೋರಿದ ಗುರುಗಳು ವಿದ್ಯಾರ್ಥಿಯ ಸಾಧನೆ ಹಾದಿಗೆ ಸ್ಫೂರ್ತಿಯಾಗಿದ್ದಾರೆ.ರವೀಂದ್ರನಾಥ್ ಠಾಗೋರ್ ಎಂಬ ಗುರು ಶಾಂತಿನಿಕೇತನ ಎಂಬ ಶಾಲೆಯಿಂದ ಅಪಾರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದರೂ, ರಾಮಕೃಷ್ಣ ಪರಮಹಂಸ ಎಂಬ ಗುರು ವಿವೇಕಾನಂದ ರಂಭ ಶಿಷ್ಯರನ್ನು ಜಗತ್ತಿಗೆ ಬೆಳಕಾಗುವಂತೆ ಬೆಳೆಸಿದರು,ಅಪಾರ ಜ್ಞಾನವನ್ನು ಹೊಂದಿದ್ದರೂ ಸರಳತೆಯ ಸಾಕಾರಮೂರ್ತಿ ಅಂತಿದ್ದ ಎಪಿಜೆ ಅಬ್ದುಲ್ ಕಲಾಂ ಅವರು ಸಮಾಜಕ್ಕೆ ಗುರುವಾಗಿದ್ದರು.
ನಚೋರ ಹಾರ್ಯಂ ನಚರಾಜ ಹಾರ್ಯಂ, ನಭಾತ್ರಬಾಜ್ಯಂ ನಚ ಭಾರಕಾರಿ,
ವ್ಯಯೇಕ್ರತೆ ವರ್ದತಿ ಏವ ನಿತ್ಯಂ ,
ವಿದ್ಯಾಧನಂ ಸರ್ವ ಧನಃ ಪ್ರಧಾನಂ.
ಅಂದರೆ ವಿದ್ಯೆಯನ್ನು ಯಾವ ಕಳ್ಳಕಾಕರಿಂದಲೂ ಮೋಸಮಾಡಿ ಕದ್ದೊಯ್ಯಲು ಸಾಧ್ಯವಿಲ್ಲ , ಯಾವ ರಾಜನೂ ಕೂಡ ತನ್ನ ಸಾಮರ್ಥ್ಯ ಮತ್ತು ಧರ್ಪದಿಂದ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಹೊತ್ತು ತಿರುಗಾಡಲು ಇದು ಭಾರವೂ ಅಲ್ಲ.ಹೇಗೆ ಖರ್ಚು ಮಾಡುತ್ತೇವೋ ಹಾಗೆ ವರ್ಧಿಸುವಂತಹ , ಎಲ್ಲ ಸಂಪತ್ತಿಗಿಂತಲೂ ಶ್ರೇಷ್ಟವಾದುದು ಎಂದರ್ಥ. ಇಂತಹ ಅತ್ಯಮೂಲ್ಯ ಸಂಪತ್ತನ್ನು ಧಾರೆ ಎರೆದ ಗುರುವ್ರಂದಕ್ಕೆ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ.
ಕತ್ತಲೆಯಿಂದ ಬೆಳಕಿನೆಡೆಗೆ,
ಅಜ್ಞಾನದಿಂದ ಸುಜ್ಞಾನದೆಡೆಗೆ,
ಗುರುವಿನಿಂದ ಅರಿವಿನೆಡೆಗೆ,
ಅರಿವಿನಿಂದ ಮುಕ್ತಿಯೆಡೆಗೆ
ಅಂತರಂಗದ ಅಜ್ಞಾನ ಕಳೆದು
ಜ್ಞಾನ ದೀವಿಗೆ ಇಟ್ಟು ಸನ್ಮಾರ್ಗ ತೋರಿದ ಗುರುವಿಗಿದೋ ಸಾಷ್ಟಾಂಗ ನಮನ...
ಗುರುಗಳೆಂದರೆ ಅರುಣೋದಯದಷ್ಟೇ ಉಜ್ವಲ ವರ್ಣಿಸಲು ಪದಗಳೇ ಸಿಗದ ಕಣ್ಣಿಗೆ ಕಾಣುವ ನೊಂದವರಿಗೆ ಸ್ಪಂದಿಸುವ ನ್ಯಾಯ ನೀತಿ ಧರ್ಮ ಹಾಗು ಬದುಕಿನ ಮಹತ್ವ ತಿಳಿಸಿ ಬೆಳೆಸುವ ಗುರುಗಳಿಗೆ ಅನಂತ ಅನಂತ ವಂದನೆಗಳು ಗುರುವೇ ಸದ್ಗತಿಯ ಸನ್ಮಾರ್ಗದ ಆಗರ
ಗುರುವಿಲ್ಲದೆ ಗುರಿ ಮುಟ್ಟಿದವರ ಚರಿತ್ರೆ ಇತಿಹಾಸದಲ್ಲೇ ಇಲ್ಲ.
ನನ್ನ ಗುರುವೇ ನನ್ನ ಆತ್ಮಬಲ ಜೈ ಗುರುದೇವ .
ಒಬ್ಬ ಗುರು ವಿದ್ಯಾರ್ಥಿಯಲ್ಲಿ ಈ ಎಲ್ಲಾ ಗುಣಗಳನ್ನು ಬೆಳೆಸುತ್ತಾನೆ.
" VIDYARTHI "
V- vision ಗುರಿ- ದೃಷ್ಟಿ. ವಿದ್ಯಾರ್ಥಿ ಜೀವನಕ್ಕೆ ಬೇಕಾಗುವ ಸ್ಪಷ್ಟವಾದ ಗುರಿಯನ್ನು ತೋರಿ ಅಗ್ರಿ ತಲುಪುವಂತೆ ಮಾರ್ಗದರ್ಶನ ಮಾಡುತ್ತಾರೆ
I- interest ಆಸಕ್ತಿ. ಪ್ರತಿಯೊಂದು ವಿಷಯದ ಬಗ್ಗೆ ಆಸಕ್ತಿಯನ್ನು ಬೆಳಸಿ, ಆಲಸ್ಯವನ್ನು ಹೋಗಲಾಡಿಸಿ ಕ್ರಿಯಾಶೀಲತೆ ಬರುವಂತೆ ಗುರುಗಳು ಮಾಡುತ್ತಾರೆ
D- Discipline ಶಿಸ್ತು. ಪ್ರತಿಯೊಂದು ಕೆಲಸಕ್ಕೂ ಅದರದೇ ಆಗಿರುವಂತೆ ನಿಯಮಗಳು ಇರುವಂತೆ ವಿದ್ಯೆಗೆ ವಿನಯವೇ ಭೂಷಣ ಎಂಬಂತೆ ಶಿಸ್ತು ಜ್ಞಾನದ ಮೆಟ್ಟಿಲು ಎಂಬುದನ್ನು ಕಲಿಸುತ್ತಾರೆ
Y- yearning. ಬಲವಾದ ಹಂಬಲ. ಕಲಿಯುವ ಹಂಬಲವು ವ್ಯಕ್ತಿಯ ಒಳಗಿದ್ದರೆ ಯಾವುದನ್ನು ಸಾಧಿಸಬಹುದು ಎಂಬುದನ್ನು ಮನವರಿಕೆ ಮಾಡುತ್ತಾರೆ
A- academic skill
ಶೈಕ್ಷಣಿಕ ಕೌಶಲ್ಯ. ಎಲ್ಲರೂ ಎಲ್ಲಾ ಕೆಲಸವನ್ನು ಮಾಡಬಹುದು ಆದರೆ ಮಾಡುವ ಕೆಲಸದಲ್ಲಿ ಕೌಶಲ್ಯತೆ ಶ್ರದ್ಧೆ ಭಕ್ತಿ ಇರುವಂತೆ ನೋಡಿಕೊಳ್ಳುತ್ತಾರೆ
R- right attitude
ಸರಿಯಾದ ಮನೋಭಾವ. ವಿದ್ಯಾರ್ಥಿಗಳಲ್ಲಿ ಅವರ ಮನೋಭಾವನೆಗೆ ತಕ್ಕಂತೆ ಜ್ಞಾನವನ್ನು ವಿತರಿಸುವ ಮೂಲಕವಾಗಿ ಆ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಪ್ರೇರೇಪಿಸುತ್ತಾರೆ
T- time management ಸಮಯದ ಸದುಪಯೋಗ. ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ ಆ ಸಮಯವನ್ನು ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುತ್ತಾರೆ.
H- humility ವಿನಯ. ಜ್ಞಾನವೆಂಬುದು ಒಂದು ಸಾಗರವಿದ್ದಂತೆ ಆ ಸಾಗರದಿಂದ ಎಲ್ಲವನ್ನು ಪಡೆಯಲು ಸಾಧ್ಯವಿಲ್ಲ ನಾವು ಪಡೆದಿರುವ ಜ್ಞಾನವು ಸಾಗರದ ಒಂದು ಅಣು ಮಾತ್ರ ಎಂಬುದನ್ನು ಹೇಳಿ ವಿದ್ಯಾರ್ಥಿಗಳಲ್ಲಿ ವಿನಯತೆಯಿಂದ ಬೆಳೆಸುತ್ತಾರೆ
I- industriousness ನಿರಂತರ ಶ್ರಮ. ಕಠಿಣ ಪರಿಶ್ರಮದಿಂದ ಏನನ್ನೂ ಸಾಧಿಸಬಹುದು ಎಂಬುದನ್ನು ಮತ್ತೆ ಮತ್ತೆ ವಿವರಿಸುತ್ತಾರೆ
ತನ್ನ ಗುರಿಯನ್ನು ಮುಟ್ಟಲು ಈ ಕೇಳಗಿನ ಸಿದ್ದತೆಗಳನ್ನು ಮಾನವರಿಕೆ ಮಾಡುತ್ತಾನೆ
" SWOT "
S-strengh
ಸ್ವ ಸಾಮರ್ಥ್ಯವನ್ನು ಅರಿಯುವದು
W- weakness
ತನ್ನ ದೌರ್ಬಲ್ಯ ತಿಳಿಯುವದು
O- opportunities ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವದು
T-threats
ಇರುವ ಅಪಾಯದ ಬಗ್ಗೆ ಗಮನ ಹರಿಸುವದು.
ಇಂತಹವುಗಳನ್ನು ಅರಿತುಕೊಂಡು SMART ಹೇಗೆ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸುತ್ತಾನೆ
S- specific, skillful. ನಿರ್ದಿಷ್ಟವಾಗಿರಲಿ.ಕೌಶಲ್ಯ ಪೂರ್ಣವಾಗಿರಲಿ.
M- measurable
ಮಾಪನಕ್ಕೆ ಅಳವಡಿಸುವಂತಿರಬೇಕು
A- attainable
ತಲುಪುವಂತೆ ಇರಲಿ
R- realistic
ವಾಸ್ತವಕ್ಕೆ ಹತ್ತಿರವಿರಲಿ
T- time bound ,truthful. ನಿಗದಿತವೇಳೆ.ಸತ್ಯವಾಗಿರಬೇಕು
ಗುರಿ ಸಾದನೆಯ ಅವದಿಯಲ್ಲಿ ಕೆಲವೊಂದು ತೊಂದರೆಯ ತೊಡಕುಗಳು ಉದ್ಭವಿಸುತ್ತವೆ ಅವುಗಳನ್ನು ನಿವಾರಿಸಿಕೊಂಡಲ್ಲಿ ಮುಂದೆ ಸಾಗಲು ಸಾದ್ಯ ಎಂಬುದನ್ನು ಪ್ಲೇಟ ." PLATE " ನಿಯಮದ ಮೂಲಕ ವಿವರಿಸುತ್ತಾನೆ
P- procrastination' ಮುಂದೂಡುವಿಕೆ
L- lethargy
ಸೋಮಾರಿತನ
A- attraction ಆಕರ್ಷಣೆಗಳು.
T- timidity ಅಂಜುಬುರುಕತನ
E- evasion
ಹೊಣೆಗಾರಿಕೆ
ತಪ್ಪಿಕೊಳ್ಳುವದು.
ಇವುಗಳಿಂದ ಹೊರಬಂದಲ್ಲಿ ಗುರಿಯನ್ನು ಸರಿಯಾದ ಕ್ರಮದಲ್ಲಿ ಮುಟ್ಟಲು ಸಾಧ್ಯವಾಗುತ್ತದೆ.
ಇದಕ್ಕಾಗಿ ಬದಲಾವಣೆ ಅಳವಡಿಕೊಳ್ಳಬೇಕು " CHANGE " ಎಂಬುದನ್ನು ಸಂಪೂರ್ಣವಾಗಿ ವಿವರಿಸಿದ್ದಾನೆ
C- commitment
ವಚನ ಬದ್ದತೆ
H- honesty ಪ್ರಮಾಣಿಕತೆ
A- alignment of mind ಮಾನಸಿಕ ಸ್ತಿಮಿತ.
N- never give up attitude ಬಿಗಿಪಟ್ಟು ಸಡಲಿಸಿ
G- gol reaching ಗುರಿಯಡೆಗೆ ಗಮನ
E- excellence ಉತ್ಕೃಷ್ಟತೆ ,ಆತ್ಮವಿಶ್ವಾಸ.
ಇವುಗಳನ್ನು ಪಾಲಿಸಿದರೆ
ವಿದ್ಯಾರ್ಥಿಗಳ ಜೀವನ ಸಾರ್ಥಕತೆಯ ಕಡೆಗೆ, ಜ್ಞಾನ ದೀವಿಗೆ ಕಡೆಗೆ, ಬದಲಾವಣೆಗೆ ಜ್ಞಾನವ ಹರಿಸಲು ಸಾದ್ಯವಾಗುವದು ಎಂಬುದನ್ನು ತಿಳಿಸಿದ್ದಾನೆ
Winners don't do different things they do things differently.
- ಶಿವನಗೌಡ ಪೋಲಿಸ್ ಪಾಟೀಲ
ಉಪನ್ಯಾಸಕರು ಕೊಪ್ಪಳ
9845646370
sdnmsw@gmail.com.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಅಧ್ಬುತ ಲೇಖನ....
ಪ್ರತ್ಯುತ್ತರಅಳಿಸಿಇನ್ನೂ ಹೆಚ್ಚಿನ ಬರಹಗಳು ತಮ್ಮ ಲೇಖನಿಯಿಂದ ಹೊರಹೊಮ್ಮಲಿ ಎಂದು ಆಶಿಸುತ್ತಾ...
ತಮಗೆ ನನ್ನ ಪ್ರೀತಿಯ ಅಭಿನಂದನೆಗಳು.