ಭಾನುವಾರ, ಸೆಪ್ಟೆಂಬರ್ 5, 2021

ಗುರು ನಮನ (ಕವಿತೆ) - ಶ್ರೀಮತಿ ಜ್ಯೋತಿ ಕೋಟಗಿ ಶಿಕ್ಷಕಿ ಸ ಮಾ ಪ್ರಾ ಶಾಲೆ ತಲ್ಲೂರ.

ಗುರು ನಮನ
ಆರಾಧನೆ ಗುರುವಿನ ಆರಾಧನೆ
ಆತ್ಮದ ದೇವರ ಆರಾಧನೆ
ಅಣುದಿನಾ ಅಣುಕ್ಷಣಾ ಹಾಡಿ ಭಜಿಸುವೆ//ಪ//

ಅಕ್ಷರವ ಕಲಿಸಿ ದಾರಿಯ ತೋರಿದ
ಗುರುವಿನ ಚರಣಕ್ಕೆ ಸಾಷ್ಟಾಂಗ ವಂದನೆ
ಅಣುದಿನಾ ಅಣುಕ್ಷಣಾ ಹಾಡಿ ನಮಿಸುವೆ//೧//

ಅಂಧಕಾರವ ಕಳೆದು ಬೆಳದಿಂಗಳ ನೀಡಿದ
ಜಗದಲ್ಲಿ ಬಾಳುವ ರೀತಿಯ ಕಲಿಸಿದ
ಗುರುವಿಗೆ ಶ್ರೀ ಗುರುವಿಗೆ ಕೈಯ ಮುಗಿಯುವೆ//೨//

ಹರಮುನಿದರೆ ಗುರು ಕಾಯುವ
ಗುರು ಮುನಿದರೆ ಹರ ಕೈ ಬಿಡುವ
ಅಂತಗುರುವಿಗೆ ಮಹಾಗುರುವಿಗೆ ಶಿರಬಾಗಿ ನಮಿಸುವೆ//೩//

ಜಗದ ಬೆಳಕು ನೀ ಜಗಕೆ ದಾರಿ ನೀ
ನೀನಿಲ್ಲದ ಈ ಜಗ ಅಜ್ಞಾನದ ಬೀಡು
ನೀನಿರಿಲು ಜೊತೆಯಲ್ಲಿ ಜಗವೆಲ್ಲ ಹೊಂಬೆಳಕು
ಗುರುವಿಗೆ ಜಗದ್ಗುರುವಿಗೆ ಆದರದಿ ನಮಿಸುವೆ//೪//


- ಶ್ರೀಮತಿ ಜ್ಯೋತಿ ಕೋಟಗಿ ಶಿಕ್ಷಕಿ ಸ ಮಾ ಪ್ರಾ ಶಾಲೆ ತಲ್ಲೂರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...