ಭಾನುವಾರ, ಸೆಪ್ಟೆಂಬರ್ 5, 2021

ಜೀವನದಲ್ಲಿ_ಸ್ಪೂರ್ತಿ_ನೀಡಿದ_ನನ್ನ ಮೆಚ್ಚಿನ_ಗುರುಗಳು (ಲೇಖನ) - ವೀರಂತರೆಡ್ಡಿ_ಜಂಪಾ.

ಜೀವನದಲ್ಲಿ_ಸ್ಪೂರ್ತಿ_ನೀಡಿದ_ನನ್ನ ಮೆಚ್ಚಿನ_ಗುರುಗಳು

ನಾನು ಪಿ.ಯು.ಸಿ ಓದುವಾಗ ರಾಜ್ಯಶಾಸ್ತ್ರ ಉಪನ್ಯಾಸಕರು ಕೆ.ಎಂ. ಮುಗಳಿ ಸರ್ ನನಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು..
ಕಾಲೇಜಿನಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ನಿರೂಪಣೆ ಮಾಡುವ ಕೆಲಸ ನನಗೆ ಒಪ್ಪಿಸುತ್ತಿದ್ದರು.ಎಲ್ಲ ಉಪನ್ಯಾಸಕರ ಮೆಚ್ಚುಗೆಗೆ ಪಾತ್ರನಾಗಿದ್ದ ನನ್ನನ್ನು ಬೆಂಗಳೂರಿನ ಪದ್ಮನಾಭ ನಗರದಲ್ಲಿ ಭಾಷಣ ಸ್ಪರ್ಧೆ ಸಹಕಾರ ಇಲಾಖೆಯವರು ಏರ್ಪಡಿಸಿದ್ದರು.(೧೯೮೭ರಲ್ಲಿ) *ಮಾನವನ ಏಳಿಗೆಗೆ ಸಹಕಾರ ಒಂದೇ ಮಾರ್ಗ* ಎನ್ನುವ ವಿಷಯ ಜಿಲ್ಲೆಗಿಬ್ಬರು ಒಬ್ಬರು *ಪರವಾಗಿ* ಇನ್ನೊಬ್ಬರು  *ವಿರೋಧವಾಗಿ* ಮಾತನಾಡಬೇಕು.ಬೆಂಗಳೂರು ನೋಡಿರಲಾರದ ನನಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕೆ.ಎಂ.ಮುಗಳಿ ಸರಜೀ ಯವರು ಗೆದ್ದೆ ಗೆಲ್ತಿಯಾ ಹೋಗಿ ಬಾ..ಹೆದರಬೇಡ ಎಂದು ಹುರಿದುಂಬಿಸಿ ಹಾರೈಸಿದ ಹಾಗೂ ರಾಜ್ಯ ಮಟ್ಟದಲ್ಲಿ ಪರವಾಗಿ ವಾದಿಸಿ ೩ ನೆಯ ಬಹುಮಾನ ಪಡೆದ ನನ್ನನ್ನು ಕಾಲೇಜ್ ನಲ್ಲಿ ಸನ್ಮಾನಿಸಿದ ಕ್ಷಣಗಳನ್ನು ಮರೆಯಲು ಸಾಧ್ಯವೇ ಇಲ್ಲ.
ನಾನು ಮುಂದೆ ನಮ್ಮೂರಲ್ಲೆ  ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಆಗ ಉಪನ್ಯಾಸಕರಾಗಿದ್ದ ಕೆ.ಎಂ.ಮುಗಳಿ ಸರಜೀ ಯವರು ಸರಕಾರಿ ಕನ್ಯಾ ಪ.ಪೂ.ಕಾಲೇಜ್ ನ ಪ್ರಾಚಾರ್ಯರಾಗಿದ್ದರು.ಅವರ ಕಾಲೇಜಿನಲ್ಲಿ *ಇತಿಹಾಸ* ದ ಉಪನ್ಯಾಸಕರಿರಲಿಲ್ಲ.ನಾನು ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದುಕೊಂಡೇ..ಮುಕ್ತ ವಿಶ್ವವಿದ್ಯಾಲಯ ಧಾರವಾಡ(KUD) ಎಂ.ಎ ಇತಿಹಾಸ ಮುಗಿಸಿದ್ದು  ಅವರಿಗೂ ಗೊತ್ತಿತ್ತು. ಸ್ಥಳೀಯವಾಗಿ ಅವರಿಗೆ free hand ಯಾರೂ ಸಿಗಲಿಲ್ಲ. ಸರಕಾರಿ ನಿಯಮದ ಪ್ರಕಾರ ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ನಿಯೋಜನೆ ಮೇಲೆ ಹೋಗಬಹುದು ಅಥವಾ ಹೈಸ್ಕೂಲ್ ನಲ್ಲಿರುವವರನ್ನು ಡಿ.ಡಿ.ಪಿ.ಆಯ್ ನಿಯೋಜಿಸಿ ಆದೇಶ ಹಾಕಬಹುದು.. ಆ ಹುದ್ದೆಗೆ ನಿಯಮದ ಪ್ರಕಾರ ನನಗೆ ಬರಲ್ಲ.ಅದು ಅವರಿಗೂ ಗೊತ್ತು..but ಅವರಿಗೆ ನಾನು ಉತ್ತಮ ಉಪನ್ಯಾಸ ನೀಡುವಲ್ಲಿ ಯಾವುದರಲ್ಲಿ ಕಮ್ಮಿ ಇಲ್ಲವೆಂದು ಅವರಿಗೆ ತಿಳಿದಿತ್ತು. ಇದು ೨೦೦೪ ರ ಮಾತು *ದಳ* ಸರ್ಕಾರ ರಾಜ್ಯದಲ್ಲಿತ್ತು. ಇತಿಹಾಸ ಉಪನ್ಯಾಸಕರು ಬೇಕೇ ಬೇಕು..ಎಂದು ವಿದ್ಯಾರ್ಥಿನಿಯರು ಕಾಲೇಜಿನ ಮುಂದೆ ಸತ್ಯಾಗ್ರಹ ಮಾಡಿದ ಸುದ್ದಿ ಎಲ್ಲ ದಿನಪತ್ರಿಕೆಗಳಲ್ಲಿ ಸದ್ದು ಮಾಡಿತ್ತು.ಪ್ರಾಚಾರ್ಯರಿಗೆ ಮಂತ್ರಿಗಳಿಂದ ಕರೆ ಬಂತು.ಮಂತ್ರಿಗಳೊಂದಿಗೆ ಚರ್ಚೆ ಮಾಡಿದರು.ಅದಕ್ಕೆ ಸೂಕ್ತ ವ್ಯಕ್ತಿ  ನಾನೆಂದು ನನ್ನ ಹೆಸರು ಬರೆಸಿದರು.ಮಂತ್ರಿಗಳು pu Ddpi ಮತ್ತು primary & high school Ddpi ಜೊತೆ ಮಾತಾಡಿ ತಕ್ಷಣವೇ ನಿಯೋಜನೆ ಆದೇಶ ಜಾರಿ ಮಾಡಲು ತಿಳಿಸಿದರು.
ಅವರ ಶಿಷ್ಯನಾಗಿದ್ದ ನಾನು ಸುಮಾರು 5 ವರ್ಷ ಉತ್ತಮ ಉಪನ್ಯಾಸಕನಾಗಿ ಅವರೊಂದಿಗೆ ಕೆಲಸ ಮಾಡಿದ ಹೆಮ್ಮೆ ನನಗಿದೆ..ಸರಜೀ ಯವರು ಅಲ್ಲಲ್ಲಿ ಇಲಾಖಾ ಸಭೆಯಲ್ಲಿ ಚರ್ಚೆಮಾಡುವಾಗ ನಾನು ಪಾಠ ಮಾಡುವ ರೀತಿ ಸೂಪರ್ ಅಂದು *ಪ್ರತಿಭೆ ಯಾರ ಅಪ್ಪನ ಆಸ್ತಿಯಲ್ಲ* ವೆಂದು ಹೇಳಿದ ಸ್ಪೂರ್ತಿದಾತರು.
ಕಾಲೇಜ್ ನ ಸಮಯ ಮುಂಜಾನೆ ೭:೩೦ ರಿಂದ ೧೨:೩೦ ಆಗಿತ್ತು.. ನಾನು M.ed ಮುಗಿಸಿದ್ದರಿಂದ ನಮ್ಮೂರಲ್ಲೆ ಇರುವ D.ed ಮತ್ತು B.ed ಕಾಲೇಜಲ್ಲಿ ಪಾಠ ಮಾಡುವ ಅವಕಾಶ ಒದಗಿಬಂತು..
ಇದಕ್ಕೆಲ್ಲ ಕಾರಣಿಕರ್ತರಾದ ನನ್ನ ಗುರುಗಳು ನಮ್ಮೂರಲ್ಲೆ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ..

ಇಂದು ಬರೆದ ಈ ಲೇಖನ ಅವರು ಓದಿದರೆ ಖುಷಿ ಪಟ್ಟಾರು ಎನ್ನುವ ಮನದ ಬಯಕೆ ನನ್ನದು.
#ವೀರಂತರೆಡ್ಡಿ_ಜಂಪಾ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...