ಭಾನುವಾರ, ಸೆಪ್ಟೆಂಬರ್ 5, 2021

ಕ್ರೌರ್ಯ (ಕವಿತೆ) - ಪ್ರಮೋದ.

ಕ್ರೌರ್ಯ

ಕತ್ತಲೆ ಜಗವದು ಬೆತ್ತಲೆಯಾಗಿದೆ
ಒಂಟಿ ಮನವದು ನಡುಗುತಲಿ 
ಬಿಕ್ಕುತ ಅಳುತಲಿ ನಡೆದಿದೆ ಹಾದಿಲಿ
ಕಾಮುಕ ಮನುಜನ ಭೀತಿಯಲಿ...

ಸಹಾಯ ಕೋರುತ ಕೂಗಿದ ಬಾಲೆಯು
ಸುತ್ತಲೂ ಎತ್ತಲೂ ನೋಡುತಿದೆ
ಭಯದಲಿ ಮೂಡುತ ಬಾಡಿದ ಭಾವವು
ಹೃನ್ಮನ ತಲ್ಲಣ ಮಾಡುತಿದೆ...

ಕ್ರೌರ್ಯದಿ ಮೆರೆದಿದೆ ಭೀಭತ್ಸ ಮನವದು
ಮೋಸದಿ ಮೋಹದ ಜಾಲದಲಿ 
ರೌದ್ರತೆ ತೋರುತ ವ್ಯಾಘ್ರತೆ ಮೆರೆದಿದೆ
ಹೆಣ್ಣಿನ ಮನಸದು ದಣಿವಿನಲಿ..

ಅರಳಿದ ಹೂವದು ಮುದುಡುತ ಸಾಗಿದೆ
ಕುಸಿಯುತ ಒಣಗಿದ ಹೆಣ್ಮನವು
ದುರುಳರ ಹಿಡಿತದಿ ಸಿಲುಕುತ ನೊಂದಿದೆ
ದುಷ್ಟರ ಕೈಯಲಿ ತನುಮನವು...

ದುರಂತ ಕಥೆಯಲಿ ನಾಯಕಿಯಾದಳು
ನಿರ್ಭಯ ನಾಡಿನ ವಂಚಿತಳು
ಮೌನದ ಗೀತೆಯ ಸಾಹಿತ್ಯವಾಗುತ
ಜನಮನ ಮುಟ್ಟುತ ನಿಂತಿಹಳು...

           - ಪ್ರಮೋದ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...