ಶನಿವಾರ, ಸೆಪ್ಟೆಂಬರ್ 18, 2021

ಪ್ರಣಯ ಗೀತೆ (ಕವಿತೆ) - ಪುರುಷೋತ್ತಮ ಪೆಮ್ನಳ್ಳಿ.

ಪ್ರಣಯ ಗೀತೆ 

ಗಂ-ನೀನಿರದೆ ನಾ ಇರಲಾರೆನು ಚೆಲುವೆ 
ನಿನ್ನಯ ಸವಿ ಪ್ರೀತಿಯಲಿ  ನನ್ನ ಸೆಳೆದೆ.

ಹೆ- ಬೆಳಕಾಗಿ ನೀ ಬಂದೆ ನನ್ನೊಲವೆ
ನನ್ನ ಬಾಳ ಪುಟಕೆ ಪ್ರೀತಿಯ ಸುರಿದೆ.||೧||

ಗಂ -ಇರುಳ ಚಂದಿರನ ಕಾಂತಿಯ ಚೆಲುವೆ
ನಿನಗಾಗಿಯೇ ಮೀಸಲು ನನ್ನೆಲ್ಲಾ ಬಲವೇ

ಹೆ-ಮುಂಜಾನೆಯ ರವಿಯ ಹೊಂಗಿರಣದ ಚೆಲುವ
ತೋರುವೆನು ನಿನಗಾಗಿ ನನ್ನಯ ಒಲವ||೨ ||

ಗಂ-ನನ್ನಾಸೆಯೆಲ್ಲ ನಿನಗಾಗಿಯೇ ಮೀಸಲಾಗಿಡುವೆನು
ಹೃದಯದೊಳಗೆ ಕಚಗುಳಿಯಿಟ್ಟು ನರ್ತಿಸು ಬಾ

ಹೆ-ನನ್ನಾಸೆಯೇ ನೀ ನಿನೀರದೇ ನಾ ಇರಲಾರೆನು
ಮನದೊಳಗೆ ಪ್ರೀತಿ ಸವಿ ಜೇನಾ ಸವಿಯ ಬಾ.||೩||

||ನಿನೀರದೆ,||

ಗಂ-ನನ್ನಂತರಂಗವ ಬಲ್ಲ ನನ್ನ ರಾಣಿಯು ನೀನೇ
ನಿನ್ನ ನಗುವಿರದೆ ಹಸಿರ ಸಿರಿ ಧರೆಯಲಿ ಕಾಣೆ

ಹೆ-ನನ್ನಂತರಂಗಕೆ ಪ್ರೀತಿಯ ಪಾಶವ ಹೆಣೆದವನೇ
ನನ್ನುಸಿರಲಿ ಬೆರೆತ ನಿನ್ನಂತ ಚೆಲುವನ ನಾ ಕಾಣೇ.||೪||

ಗಂ-ಪ್ರೇಮಕಾಶಿಯಲಿ ತೇಲುತ ಸಾಗಲಿ ನಮ್ಮ ಜೋಡಿ
ಪ್ರೇಮಲೋಕವ ಕಟ್ಟೋಣ ಮಾಡುತ ಮೋಡಿ

ಹೆ-ಕಾಂಚನಗಂಗಾದವರೆಗೆ ಹರಡಲಿ ನಮ್ಮ ಪ್ರೀತಿ
ಪ್ರೇಮ ಪಾಠದಿ ಸಾರೋಣ ಜಗಕೆ ನೀತಿ.||೫||

ಗಂ-ಸಂಗೀತದ ಸ್ವರವಾಗಿ ಕವಿತೆಯ ಪದವಾಗಿ ಬಂದು ನೆಲಸಿ
ಪ್ರೇಮದ ಹೊನಲ ಹರಿಸಿದೆ ಹೃದಯದರಸಿ

ಹೆ-ನೀ ಮೀಟಿದ ವೀಣೆಯ ತಂತಿಯ ನಾದದಿ ಝೇಂಕರಿಸಿ
ಇರುವೆನು ಜೊತೆಯಲಿ ಉಸಿರಿಗೆ ಉಸಿರ ಬೆರಸಿ.||೬||

|| ನಿನೀರದೆ||
- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ
ದೂ.9632296809.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...