ಜೀವನ ಇದು ಹುಟ್ಟು-ಸಾವಿನ ಆಟ
ಸೃಷ್ಠಿಕರ್ತ ಮನುಕುಲವನ್ನು ಸೃಷ್ಠಿಸಿ ಅಟವಾಡುತ್ತಿರುವ ಪರಿ ಇದು. ಆಸೆಗಳನ್ನು ತುಂಬಿ ಜೀವಕುಲವನ್ನು ಹರಿಬಿಟ್ಟಿದ್ದಾನೆ. ಕತ್ತಲು ಬೆಳಕಿನ ಆಟ- ಸುಖ ದುಃಖಗಳ ಆಟ - ಇದುವೇ ಹುಟ್ಟು ಸಾವಿನ ಆಟ. ಹುಟ್ಟಿದ ಮಗುವಿಗೆ ನಾಮಕರಣ ಇದು ಅರಂಭದ ಸಂಭ್ರಮವಾದರೆ -ಸಾವು ಎನ್ನುವದು ಕೊನೆಯ ಸಂಭ್ರಮ. ಕಲಿಯುಗದಲ್ಲಿ ಸೃಷ್ಠಿ ಕರ್ತನನ್ನು ಮರೆತು ನಾನು ನನ್ನದು ಎಂಬ ಹುಚ್ಚು ಗುಂಗಿನಲ್ಲಿ ಜನರು ಜೀವನ ಸಾಗಿಸುತ್ತಿದ್ದಾರೆ. ಧರ್ಮದ ದಾರಿ ಬಿಟ್ಟು ಅಧರ್ಮದ ಹಾದಿಯಲ್ಲಿ ಸಾಗಿ ಧರ್ಮಕ್ಕೆ ಅವಮಾನಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಧರ್ಮದ ಅಂಶ ಹೆಚ್ಚಾಗಿದ್ದರಿಂದ ಸುಖಿಗಳಾಗಿದ್ದರು ಆದರೆ ಇಂದು ಕರ್ಮದ ಅಂಶವೇ ತಾಂಡವವಾಡುತ್ತಿದೆ ವಿಧಿಯು ತಕ್ಕ ಉತ್ತರ ನೀಡುತ್ತದೆ ಈ ಎರಡಕ್ಕೂ ಶಿವನು ಕಾರಣನು ಪ್ರಪಂಚದಲ್ಲಿ ಎಲ್ಲದಕ್ಕೂ ಅರಂಭ, ಕೊನೆ ಇದೆ. ಮಮಕಾರವನ್ನು ಬಿಡುವತನಕ ಶಿವನೋಲುಮೆ ದೊರೆಯುವದಿಲ್ಲ. ಸತ್ಯ -ಪ್ರಾಮಾಣಿಕತೆ ಎಲ್ಲಿ ಇರುವುದೋ ಅಲ್ಲಿ ಶಿವನು ಬಂದು ನಿಲ್ಲುತ್ತಾನೆ.ಸತ್ಯ ಹರಿಶ್ಚಂದ್ರನಿಗೆ ಸತ್ಯ ಒಂದು ಕಡೆ, ರಾಜ್ಯ ಒಂದು ಕಡೆ ನಿಂತಾಗ ಸತ್ಯವನ್ನೇ ಅರಿಸಿಕೊಂಡರು. ಮಗನ ಸಾವು ಒಂದು ಕಡೆ,ಯಜಮಾನನ ಆಜ್ಞೆ ಒಂದು ಕಡೆ ನಿಂತಾಗ ಅಲ್ಲಿಯೂ ಸತ್ಯವನ್ನೇ ಅರಿಸಿಕೊಂಡರು, ಮುಂದೆ ಪ್ರೇಮದ ಸತಿ ಒಂದು ಕಡೆ -ಸತ್ಯ ಒಂದು ಕಡೆ ನಿಂತಾಗ ಅಲ್ಲಿಯೂ ಸತ್ಯವನ್ನೇ ಹಿಡಿದು ಸತೀಯ ಮೋಹವನ್ನು ಬಿಟ್ಟರು ಹೀಗೆ ಮೂರು ಸಮಯದಲ್ಲೂ ಸತ್ಯವನ್ನೇ ಹಿಡಿದು ಶಿವನೋಲುಮೆ ಪಡೆದರು ಇಲ್ಲಿ ತಾನು, ತನ್ನದು, ತನ್ನವರೆಂಬ ಮಮಕಾರ ಬಿಟ್ಟಿದ್ದಕ್ಕೆ ಶಿವನ ಕೃಪೆ ದೊರೆಯಿತು. ಮೋಹಕ್ಕೆ ಬಲಿಯಾದರೆ ನರಕ ಖಂಡಿತ ಇದು ಶಿವನಿಚ್ಚೆ. ಧರ್ಮವನ್ನು ಮರೆತು ಬರಿ ಸಂಸಾರವೇ ಜೀವನವೆಂದು ನಂಬಿದವರು ಮೂರ್ಖರು,ನೀವು ಸಾಯುವಾಗ ಯಾರು ನಿಮ್ಮಜೊತೆ ಬರುವುದಿಲ್ಲ ಎಂಬುದು ನೆನಪಿಡಬೇಕಾದ ಅಂಶ.ಗುರಿಯು ಘನವಾಗಿರಬೇಕು ನಮ್ಮ ಜೀವನ ಯಾತ್ರೆಯು ಧರ್ಮದ ಜೊತೆಯಲ್ಲಿ ಸಾಗಬೇಕು ಇದುವೇ ಜೀವನ ಹುಟ್ಟು ಸಾವಿನ ಆಟದಲ್ಲಿ ನೀವು ಏನು ಸಂಪಾದಿಸಿದಿರಿ ಎಂಬುದು ಜೀವನ,ಸಂಪಾದನೆ ಎಂದರೆ ಹಣವಲ್ಲ ಇಲ್ಲಿ ಧರ್ಮದ ಸಂಪಾದನೆ.. ಅಧರ್ಮದ ಹಾದಿ ನರಕಕ್ಕೆ -ಧರ್ಮದ ಹಾದಿ ಸ್ವರ್ಗಕ್ಕೆ ಇದರಲ್ಲಿ ಯಾವ ಹಾದಿ ಬೇಕು ಎಂಬುದು ಅರಿತುಕೊಂಡು ಸಾಗುವದೇ ಜೀವನ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ