ಶುಕ್ರವಾರ, ಸೆಪ್ಟೆಂಬರ್ 3, 2021

ಗುರುವಿನ ಸ್ಥಾನ ಗುರುತರ ಹೊಣೆ (ಕವಿತೆ) - ಧ್ಯಾಮ್ ರಾಜ್ ವಾಯ್ಹ್ ಸಿಂಧೋಗಿ!ಭೈರಾಪೂರ ತಾ!ಜಿ! ಕೊಪ್ಪಳ.

 ಗುರುವಿನ ಸ್ಥಾನ ಗುರುತರ ಹೊಣೆ

ಒಂದ ಎರಡ ಗುರು ಕಲಿಸಿದ ಪಾಠ
ನನ್ನ ಸುಂದರ ಶಿಲ್ಪಿ ಮಾಡುವದೆ ಆತನ ಹಠ
ಆತನಿಂದ ಇಗ ಈ ಜೀವನಕೆ ಇಲ್ಲ ಯಾವ ಕಾಟ
ನನ್ನ ಬಾಳು ಅವರಿಂದ ಆಯ್ತು ಹೂದೊಟ//೧

ನನಗು ನಿನಗು ಗುರಿಯೊಂದು ಇರಬೇಕು
ಆದರೆ ಗುರಿ ಸಾಧಿಸಲು ಒಬ್ಬ ಗುರು ಬೇಕೆಬೇಕು
ನಮ್ಮಗೆ ಆ ದೇವ ಕಷ್ಟ ನಷ್ಟ ಕೊಡಬೇಕು
ಕಾರಣ ನಾವು ನಗಲು ಗರು ವಿದ್ಯ ಉಪಯೋಗಿಸಬೇಕು//೨

ಅಪ್ಪ ಅಮ್ಮನ ಪ್ರೀತಿ ಮರೆತೆ ಗುರುವಿಂದ
ನ್ಯಾಯ ನೀತಿ ನಡೆ ನುಡಿ ಅರಿತೆ ಗುರುವಿಂದ
ಮೇಲು ಕೀಳು ಜಾತಿ ಬೇದ ಮರೆತೆ ಗುರುವಿಂದ
ನಾನು ಅಳಿದು ನಾವು ಉಳಿದು ನಕ್ಕೆ ಗುರುವಿಂದ//೩

ನೋವು ನೀಡಿದವರಿಗೆ ನಲಿವು ನೀಡು
ಮೊದಲು ದೂರಿದವರ ದಾರಿ ಸರಿ ಮಾಡು
ನೆರೆ ಹೊರೆ ನಿನದೆ ಪರಿವಾರ ಕೂಡು
ಇದು ಗುರು ಕಲಿಸಿದ ಮರೆಯದ ಪಾಠ ನೋಡು//೪

ಅರಿತೆ ಗುರುವಿನ ಸ್ಥಾನ ಗುರುತರ ಹೊಣೆ
ಕಂದ ಲಾಲಿ ಹಾಡಿದ ತಾಯಿ ಜಾಣೆ
ಮರೆಯದೆ ಇವರ ಪೂಜಿಸು ನೆನೆಯದೆ ದೇವರ ಕೋಣೆ
ಗುರು ತಾಯಿ ಇಬ್ಬರೂ ಪ್ರತಿಯೊಬ್ಬರಿಗೂ ಪ್ರೇರಣೆ//೫
- ಧ್ಯಾಮ್ ರಾಜ್ ವಾಯ್ಹ್ ಸಿಂಧೋಗಿ!ಭೈರಾಪೂರ ತಾ!ಜಿ! ಕೊಪ್ಪಳ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...