ಸಾಕಪ್ಪಾ ಸಾಕು ಜೀವನ
ಜೀವನ ದಿನೆದಿನೆ ಮೇಲಕ್ಕೆ ಏರುತ್ತಿದೆ
ಬಾಗಿ ಬಾಗಿ ತೂಲಾಡುತ್ತಿದೆ
ಏಕೊ ಏನೊ ಜೀವನ ದಿನದಿನವೂ
ಭಾರವಾದಂತಾಗಿದೆ
ತಿನ್ನುವ ಆಹಾರ ಪದಾರ್ಥಗಳು
ಕೈಯಿಗೆ ಮುಳ್ಳುಮುಟ್ಟುವಂತಾಗಿದೆ
ಬೆಲೆ ಏರಿಕೆಯು ಜನರ ಜೀವ ಹಿಂಡುತ್ತಿದೆ
ಕೇಳುವವರಿಲ್ಲ ಜನರ ಸಂಕಟ
ಸಿಂಹದ ಗುಹೆಯಲ್ಲಿ ಸಿಲುಕಿದ
ಜಿಂಕೆಯಂತಾಗಿದೆ ಜೀವನ
ಬಹು ಕಷ್ಟ ವಿದ್ಯುತ್ ಹರಿದಂತೆ
ಮನಸ್ಸೆಲ್ಲ ಗ್ರೌಂಡ್ ಆದಂತಾಗಿದೆ
ಹಣವಿಲ್ಲದ ಬಾಳು ಗೋಳಿನಲ್ಲಿ ಬಿದ್ದಿದೆ
ಸುದ್ದಿ ಇಲ್ಲದೆ ಗಗನಕ್ಕೇರುತ್ತಿದೆ
ಕಣ್ಣುಮುಚ್ಚಿ ಹೇಳುವುದೊರಳಗೆ
ಸುಳಿವಿಲ್ಲದೆ ಮೇಲೆದ್ದ ತೈಲ ದಿನಿಸಿಗಳು
ಸಾಕಪ್ಪಾ ಸಾಕು ಎನಿಸಿದೆ ಜೀವನ
ಹೆಜ್ಜೆ ಹೆಜ್ಜೆಗೂ ಪೀಡಿಸುವ ಕರೋನ
ಪೀಡೆಯಂತೆ ಕಾಡುತ್ತಿದೆ ಜನರನ್ನು
ತೊಗಲಕ್ ರಾಜ್ಯಬಾರದಂತಾಗಿದೆ ದೇಶ
ಜನರ ಜೀವನವನ್ನು ದಬ್ಬಾಳಿಕೆಯ
ಹಿಡಿ ಮುಷ್ಟಿಯಲ್ಲಿಟ್ಟು ಹಿಂಡುತ್ತಿದ್ದಾರೆ
ಅಲೆಮಾರಿಯ ಜೀವನ ಮತ್ತೆ ಬರುವುದೇನೊ
ಬೆಂಕಿಯಲ್ಲಿ ಸಾಗುವಂತಾಗಿದೆ ಜನರ ಜೀವನ
ಸಾಕುಮಾಡಿ ಬೆಲೆ ಏರಿಕೆ ಜ್ವಾಲೆಯ
- ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ