ಶುಕ್ರವಾರ, ಸೆಪ್ಟೆಂಬರ್ 3, 2021

ಎಲ್ಲಿರುವೆ ದೇವ ? (ಕವಿತೆ) - ಪುರುಷೋತ್ತಮ ಪೆಮ್ನಳ್ಳಿಪಾವಗಡ ತಾ ತುಮಕೂರು ಜಿ.

ಎಲ್ಲಿರುವೆ ದೇವ ?

ಬೆನ್ನೆಲುಬಾಗಿ ನಿಲ್ಲುವೆ ದೇವ ಎಂದು ನಾ ನಂಬಿದೆ
ಮನದಿಂದ ಭಕ್ತಿಯ ನೀ ದೂರ ಸರಿಸಿದೆ
ನಿನ್ನೂಲುಮ್ಮೆಯ ಬಯಸಿ ಪೂಜಿಸಿದ ಫಲಕೆ
ಬೇಸರದ ಉಡುಗೊರೆಯ ಕಾಣಿಕೆಯಾಗಿ ನೀಡಿದೆ...

ಎಲ್ಲಿಹುದು ಧರ್ಮ ಕಾಣುವ ಹಂಬಲವು ಕಣ್ಮರೆ
ಕೋಪದ ತವಕದಲಿ ಮಂಕಾದ ಮನವು ಕೈಸೆರೆ
ನೀನಿರುವ ಸತ್ಯವ ತಿಳಿದೆನು ನಾ ಅಂದು 
ಅನ್ಯಾಯದ ವಿಜಯದಿ ನಿನ್ನ ಶಕ್ತಿ ಕುಸಿಯಿತಿಂದು...

ಮೌನವ ಅಸಹಾಯಕತೆ ಎಂದು ತಿಳಿದ ಜನಕೆ
ನೀಡು ನೀ ಪಾಪದ ಉಡುಗೊರೆಯ ಪಾಪಿ ಸುಖಕೆ
ಪಾಪಿಗಳ ಲೋಕದ ಭೂ ಮಾತೆಯ ಮಡಿಲಲಿ
ನಿನ್ನ ಮಹಿಮೆಯ ತೃಣವಾಗುವ ಕಾಲ ಬಂದಿತು...

ತೋರು ನಿನೀರುವುದ ಅಸಹಾಯಕತೆಯ ಬಲದಲಿ
ಕೋಪದ ಕೆಂಪಾದ ಕೆಂಗಣ್ಣ ನೋಟದಲಿ
ಶಾಂತಿಯ ಚಿತ್ತದೆಡೆಗೆ ಮನವನು ಸಾಗಿಸು
ಬೇಸರದ ಬದುಕಲಿ ಭರವಸೆಯ ಮೂಡಿಸು...

ನಿನ್ನಾನುಗ್ರಹವ ನಂಬಿದ ಜೀವಕೆ‌ ಉಸಿರಾಗಿ 
ಮುಗಿವ ಕರದ ತೋಳುಗಳಲಿ ಬಲವಾಗಿ
ಕಂಬನಿ ತೋಡಿ ಮುದುಡಿದ ಮೊಗದಿ ನಗುವಾಗಿ
ನನೀನೊಮ್ಮೆ ಬಂದು ದರುಶನವ ನೀಡಯ್ಯ ದೇವ..
- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಮಗಾಗಿ ದುಡಿದ ನಾಯಕ ನಮ್ಮ ಜನಕ...

ನಮಗಾಗಿ ದುಡಿದ ನಾಯಕ ನಮ್ಮ ಜನಕ. ಅಪ್ಪ ಎಂದರೆ ಬೆಳಕು. ಅಪ್ಪನಿಂದಲೇ ಈ ಬದುಕು. ಅಪ್ಪನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅಪ್ಪ ಅಮ್ಮನ ಪ್ರೀತಿ ಅತ್ಯಮೂಲ್ಯವ...