ಮಂಗಳವಾರ, ಸೆಪ್ಟೆಂಬರ್ 14, 2021

ಗಜಲ್ - ಮಾಜಾನ್ ಮಸ್ಕಿ.

ಗಜಲ್ 

ಸಂತೋಷ ನಾನಾಗಿರುವೆ ರಕ್ಷಿಸಿಕೋ ಹೃದಯದ ಕಪ್ಪೆ ಚಿಪ್ಪು 
ಭಾವನೆಗಳ ಆಗರವಾಗಿರುವೆ ಬಚ್ಚಿಟ್ಟಿಕೋ ಹೃದಯದ ಕಪ್ಪೆ ಚಿಪ್ಪು 

ಪ್ರಪಂಚದಲ್ಲಿ ಪ್ರೇಮದ ಮುಖವಾಡದ ಮುಳ್ಳುಗಳಿವೆ 
ಖಯಾಮನ ಪ್ರೇಮದ ಹೂ ಮುಡಿದುಕೋ ಹೃದಯದ ಕಪ್ಪೆ ಚಿಪ್ಪು 

ದುಡ್ಡಿನ ಹಿಂದೆ ಬಿದ್ದಿರುವರೇ ಹೆಚ್ಚು ಚಿಂತೆ ಬಿಡು
ಪ್ರೀತಿಯ ಖನಿಯನ್ನು ಅಪ್ಪಿಕೋ ಹೃದಯದ ಕಪ್ಪೆ ಚಿಪ್ಪು 

ತೆಗೆದಂತೆ ಒರತಿಯ ನೀರು ತಿಳಿಯಾಗಿಯೇ ಬರುತ್ತದೆ 
ಪ್ರೀತಿಸಿದಷ್ಟು ಪ್ರೀತಿ ಹೆಚ್ಚುತ್ತೆ ಹಿಡಿದಿಟ್ಟಿಕೋ ಹೃದಯದ ಕಪ್ಪೆ ಚಿಪ್ಪು 

ಆಡಂಬರ ಜೀವನಕ್ಕೆ ಮೊರೆ ಹೋದವರೆ ಬಹಳ ಜನ ಇರುವರು 
ಅಹಂಕಾರಿ ಎನಬೇಡ ಮಾಜಾಳ ಒಪ್ಪಿಕೋ ಹೃದಯದ ಕಪ್ಪೆ ಚಿಪ್ಪು 
- ಮಾಜಾನ್ ಮಸ್ಕಿ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...