ಮಂಗಳವಾರ, ಸೆಪ್ಟೆಂಬರ್ 14, 2021

ದೂರ ಹೋಗು ನೆನಪೆ (ಕವಿತೆ) - ಶ್ರೀ ಸೋಮಶೇಖರ್ ಹ ರಾಂಪೂರ ಸಹ ಶಿಕ್ಷಕರು ವಿಜಯಪೂರ ಜಿಲ್ಲೆ.

ದೂರ ಹೋಗು ನೆನಪೆ

ಕಾಡುತಿವೇ ಬರೀ ನಿನ್ನ ನೆನಪೆ
ಮರೆಯಾಗುತ್ತಿಲ್ಲ ನಿನ್ನ ಛಾಯೇ
ಕರೆಕೊಡುತಿದೆ ನಿನ್ನ ದ್ವನಿ ಸುರಳೆ
ಮತ್ತೇ ಕೂಡಿ ನಲಿದಾಡುವಾಸೇ!

ದೂರು ಸರಿಯುತ್ತಿಲ್ಲ ನಿನ್ನ ನೆನಪೆ
ಕನಸಲ್ಲಿ ಕಾಡುತ್ತಿವೇ ನಿನ್ನ ನುಡಿಯೇ
ಮನವು ತಣಿಯುತ್ತಿಲ್ಲ ಒಲವೇ
ಕರುಳ ಮರುಳಾಗುತ್ತಿವೇ ಚೆಲುವೇ!

ಕೈ ಚಾಚಿ ಕರೆಯುತಿದೆ ಹೂ ಬನವ
ಮಲ್ಲಿಗೆಯು ಅರಳಿ ಬೆರಳು ಸೂಚಿಸಿವೇ
ಮುಡಿಯಲು ನೀನಿಲ್ಲವೇ ಮನದೊಲವೇ
ಮನಕ್ಕೆ ಶಾಂತಿ ಇಲ್ಲವೇ ಮನದರಸಿಯೇ!

ಮೆಲ್ಲ ನಲ್ಲ ಸ್ಪರ್ಶ ಗಲ್ಲಗಳಿಲ್ಲ ನೆನಪೆ
ಕಿರುಬೆರಳು ಒಂಟಿಯಾಗಿದೆ ಅರಗಿಣಿಯೇ
ನಿನ್ನ ನೆನಪೆ ಜಗಮಗಿಸುತಿವೇ ರತಿಯೇ
ದೂರ ಹೋದೆಯಾ ಎನ್ನ ಹೃದಯವೇ!

- ಶ್ರೀ ಸೋಮಶೇಖರ್ ಹ ರಾಂಪೂರ ಸಹ ಶಿಕ್ಷಕರು ವಿಜಯಪೂರ ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...