ಗಜಲ್
ಅಮ್ಮ ಮಾಂಸದ ಮುದ್ದೆಗೆ ಜೀವ ಕೊಟ್ಟವರು ಗುರು ಇವರು
ಶಿಕ್ಷಕರು ಅಕ್ಷರ ಜ್ಞಾನದ ಬೆಳಕು ನೀಡುವರು ಗುರು ಇವರು
ಪ್ರತಿ ಮನದಲ್ಲೂ ಬೆಳಕು ಇರುತ್ತದೆ ಎಂದು ತೋರಿಸುವರು
ಮಕ್ಕಳ ಬದುಕಿನಲ್ಲಿ ಜಾಣ್ಮೆ ಕೊಟ್ಟು ಬಾಳುವರು ಗುರು ಇವರು
ಪ್ರಾಮಾಣಿಕ ಬೋಧನೆ ಬೋಧಿಸಿ ಉಜ್ವಲ ಭವಿಷ್ಯ ಮೂಡಿಸುವರು
ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಇರುವಂತೆ ಮಾಡುವರು ಗುರು ಇವರು
ಎಲ್ಲಾರ ಜೀವನ ಬೆಳಕಿನೆಡೆಗೆ ಎಡೆಬಿಡದೆ ಸಾಗುವುದು
ಅವರ ಏಳಿಗೆಯ ಕಂಡು ನಗುನಗುತಾ ನಡೆವರು ಗುರು ಇವರು
ನಿಸ್ವಾರ್ಥ ನಿಷ್ಕಲ್ಮಶ ಕರುಣೆಯ ವಿದ್ಯಾ ಮೂರುತಿಗಳು
ಸಾವಿತ್ರಿ ಬಾಯಿ ಫುಲೆ ಮಾಜಾಳ ಹೃದಯದಲ್ಲಿ ಮೆರೆವರು ಗುರು ಇವರು
- ಮಾಜಾನ್ ಮಸ್ಕಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ