ಜೀವನದಲ್ಲಿ ಏರಿಳಿತ ಬಂದಾಗ, ಸಿಹಿ -ಕಹಿ ಪ್ರಸಂಗಗಳು ಬಂದಾಗ ಜನರು ದುಃಖಿ ಗಳಾಗುತ್ತಾರೆ ಜೀವನದ ವಿಕಾಸಕ್ಕೆ ದುಃಖವು ಅವಶ್ಯವಾಗಿದೆ -ಜೀವನದಲ್ಲಿ ಸಾಧನೆಗೆ ದುಃಖವು ಅತೀ ಅವಶ್ಯಕವು, ಸುಖದಲ್ಲಿ ವಿವೇಕವು ನಿದ್ರಿಸುತ್ತದೆ ಮತ್ತು ದುಃಖದಲ್ಲಿ ವಿವೇಕ ಎಚ್ಚರವಾಗುತ್ತದೆ ಆದರೆ ದುಃಖದಲ್ಲಿ ಹೆದರುವದರಿಂದ ಮನುಷ್ಯ ದುರ್ಬಲನಾಗುತ್ತಾನೆ, ದುಃಖದ ಸದುಪಯೋಗ ಮಾಡಿಕೊಳ್ಳುವದರಿಂದ ಮನುಷ್ಯ ಬಲಶಾಲಿಯಾಗುತ್ತಾನೆ . ದುಃಖವನ್ನು ಸಹಿಸುವದು ಸಾಧ್ಯವಿಲ್ಲ... ದುಃಖವನ್ನು ದೂರಗೊಳಿಸುವದಕ್ಕಿಂತ ದುಃಖದ ಸದುಪಯೋಗ ಮಾಡಿಕೊಳ್ಳುವ ಕಲೆಯನ್ನು ತಿಳಿಸುವದೇ ಬದುಕಿನ ಸಂಘರ್ಷ ಇದು ತುಂಬಾ ಮಹತ್ವದ ವಿಷಯ.. ಒಂದು ಮಗು ನಡೆಯುತ್ತಾ ನಡೆಯುತ್ತಾ ಬಿದ್ದಿತು ಅದಕ್ಕೆ ಸ್ವಲ್ಪ ಪೆಟ್ಟಾಯಿತು ಅದನ್ನು ವಾತ್ಸಲ್ಯದಿಂದ ಎತ್ತಿ ಕೊಳ್ಳಲಾಯಿತು ಇಲ್ಲಿ ನಿಮ್ಮ ಮಮತೆ ಮತ್ತು ಪ್ರೀತಿಯಿಂದ ನಿಮ್ಮ ಮಗುವನ್ನು ದುಃಖದಿಂದ ಪಾರುಗೊಳಿಸಿದಿರಿ ಆದರೆ ಅದನ್ನು ದುರ್ಬಳಗೊಳಿಸಿದಿರಿ ನೀವು ಆ ಮಗುವನ್ನು ಸ್ವತ: ಏಳಲು ಬಿಡಲಿಲ್ಲ ಮಗು ಬೀಳುತ್ತಿದ್ದುದನ್ನು ಕಂಡು ಈ ರೀತಿ ಹೇಳಿದ್ದರೆ ಅರೆ ಏನು ಆಗಿಲ್ಲ ಎದ್ದು ನಿಲ್ಲು ಈ ರೀತಿಯ ಯುಕ್ತಿಯಿಂದ ಅದು ಪೆಟ್ಟನ್ನು ಮರೆಯುತ್ತದೆ ಮತ್ತು ತಾನಾಗಿಯೇ ಎದ್ದು ನಿಲ್ಲುತ್ತದೆ. ದುಃಖದ ಸದುಪಯೋಗದಿಂದ ಜೀವನದ ಶಕ್ತಿಯ ವಿಕಾಸವಾಗುತ್ತದೆ, ದುಃಖಕ್ಕೆ ಹೆದರುವದರಿಂದ ಜೀವನದಲ್ಲಿ ಆಶಕ್ತತೆ ಬರುತ್ತದೆ ಸುಖ ಮತ್ತು ದುಃಖ ಹತ್ತಿರ ಬರುವುದು ಸಹಜ-ಹುಟ್ಟಿದ ಪ್ರತಿಯೊಬ್ಬರು ಸಾಯಲೇಬೇಕು ಇದು ಕರ್ತೃವಿನ ನಿಯಮ.ಮನುಷ್ಯ ಸುಖ ದುಃಖಗಳ ಪೆಟ್ಟನ್ನು ತಿನ್ನುತ್ತಾ ಜೀವಿಸುತ್ತಿದ್ದಾನೆ. ಏಕೆ ಗಳಿಸುತ್ತಿರಿ? ತಿನ್ನುವ ಸಲುವಾಗಿ, ಏಕೆ ತಿನ್ನುತ್ತಿರಿ? ಜೀವಿಸುವ ಸಲುವಾಗಿ, ಏಕೆ ಜೀವಿಸುತ್ತಿರಿ ಏನೂ ಗೊತ್ತಿಲ್ಲ ಏಕೆ ಜೀವಿಸುತ್ತಿದ್ದೀರಿ ಎಂದು ಯಾರು ವಿಚಾರ ಮಾಡಿಯೇ ಇಲ್ಲ.. ಮುಕ್ತರಾಗಲು ಜೀವಿಸುತ್ತಿದ್ದೀರಿ ಬಂಧನವು ಯಾರಿಗೂ ಬೇಕಾಗಿಲ್ಲ ಪರಾದೀನತೆಯನ್ನು ಯಾರು ಇಚ್ಚಿಸುವದಿಲ್ಲ ದುಃಖವನ್ನು ಯಾರು ಆಶಿಸುವದಿಲ್ಲ. ಸಾವನ್ನು ಯಾರು ಬಯಸುವದಿಲ್ಲ ಮುಕ್ತಿಯಲ್ಲಿ ಬಂಧನವಿಲ್ಲ, ಮುಕ್ತಿಯಲ್ಲಿ ಪರಾಧಿನತೆ ಇಲ್ಲ, ಮುಕ್ತಿಯಲ್ಲಿ ಮರಣವಿಲ್ಲ. ಎಷ್ಟು ಅಸೆ ಪಡುತ್ತಾನೆ ಅಷ್ಟು ಹೊಡತ ತಿನ್ನುತ್ತಾನೆ. ಜಾತಸ್ಯ ದೃವಂ ಮೃತ್ಯು ಎನ್ನುವ ಗೀತಾ ವಾಕ್ಯದ ಪ್ರಕಾರ ಹುಟ್ಟಿದವನು ಮರನಣಿಸಲೇಬೇಕು ಆದರೆ ಸಾದಾರಣ ಮನುಷ್ಯರ ಮರಣ ಬೇರೆ, ಯೋಗಿಗಳ ಮರಣ ಬೇರೆಯಾಗಿದೆ. ಯೋಗಿಗಳ ಆತ್ಮ ಶಿವನೊಳಗೆ ಐಕ್ಯವಾಗುತ್ತದೆ. ಶಾಶ್ವತವಾಗಿ ಮರಣದಲ್ಲಿ ಎಲ್ಲರ ಕೊನೆ ಇದು ವಿಧಿಯಾಟ. ವಿಧಿ ದೊಡ್ಡದು -ಅಲ್ಲಿ ದೇವರು ಬಂದು ನಿಂತಾಗ ಮಾತ್ರ ವಿಧಿ ದೂರವಾಗುವದು. ತಾಯಿಯ ಮಗ್ಗುಲಲ್ಲಿ ಮಲಗಿದ್ದ ಮಗು ತಾನೇ ಎದ್ದು ಹೊರಗೆ ಹೋಗಿ ತಾಯಿಯನ್ನು ಹುಡುಕಿ ಅಳುತ್ತದೆ ಹಾಗೆಯೇ ಶಿವನು ನಮ್ಮ ಹೃದಯಕಮಲದಲ್ಲಿ ವಾಸಿಸುತ್ತಿರುವನು ಅವನಿಂದ ಹೊರಗೆ ಬಂದು ಆ ಮಗುವಿನಂತೆ ಬಹಿರಂಗದ ಲೋಕದಲ್ಲಿ ಶಿವನನ್ನು ಹುಡುಕಿ ಕಾಣದೆ ಶೋಕಿಸುತ್ತಿದ್ದಾರೆ ದೇವರು ನಮ್ಮಿಂದ ದೂರವಾಗಿಲ್ಲ ನಾವೇ ಶಿವನಿಂದ ದೂರ ಬಂದಿದ್ದೇವೆ ಆದ್ದರಿಂದ ಮಗುವಿನಂತೆ ಹುಡುಕಾಟ ಆಗಬಾರದು. ದೇವರನ್ನು ನೆನಪಿಸುವ ಸಲುವಾಗಿಯೇ ವಿಧಿ ಇದೆ ನೆನಪಿರಲಿ, ಸಾಯುವವರೆಗೂ ದುಃಖ ಜೊತೆಯಲ್ಲಿಯೇ ಇರುತ್ತದೆ ಸೌಂದರ್ಯಕ್ಕೆ ಮರುಳಾಗಿ ದೇವನನ್ನು ಮರೆತರೆ ವಿಧಿಯು ಸುಮ್ಮನೆ ಬಿಡುವದಿಲ್ಲ.. ಶಿವನಿಗೆ ಶರಣಾಗಿ ಬದುಕಿದರೆ ದುಃಖವು ಸ್ವಲ್ಪ ಮಟ್ಟಿಗಾದರೂ ದೂರವಾಗಿ ನೆಮ್ಮದಿಯ ಜೀವನ ನಡೆಸಬಹುದು.
- ಮಂಜುನಾಥ ಹಿರೇಮಠ ದಂಡಸೋಲಾಪುರ (ಚಾ ಮನಾಳ ) ತಾ /ಶಹಾಪುರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ