ಕೋರನಾ ಕಲಿಸಿದ ಪಾಠ.
ಜಗತ್ತಿನ ಗತ ಇತಿಹಾಸ ನೋಡಿಕೊಂಡಾಗ
ಈಜಿಪ್ಟ್ ನಾಗರಿಕತೆ ,ಮೆಸೊಪೊಟೇಮಿಯಾ ನಾಗರಿಕತೆ ಸಿಂಧೂ ಬಯಲಿನ ನಾಗರಿಕತೆ ಎಲ್ಲವೂ ಕಾಲಗರ್ಭಕ್ಕೆ ನಿಸರ್ಗ ತನ್ನ ಭೂ ಮಡಿಲಲ್ಲಿ ಸೇರಿಸಿಕೊಂಡಿತ್ತು.
ನಿಸರ್ಗ ತನ್ನ ಸಮತೋಲನಕ್ಕಾಗಿ ಕಾಲಕಾಲಕ್ಕೆ ಭೂಕಂಪ , ನೆರೆ ಹಾವಳಿ ಅತಿವೃಷ್ಟಿ-ಅನಾವೃಷ್ಟಿ, ಜ್ವಾಲಾಮುಖಿ, ಚಂಡಮಾರುತ ಹೊರಚೆಲ್ಲುತ್ತದೆ. ಇದರಿಂದಾಗಿ ಅನೇಕ ಜೀವ ಸಂಕುಲ ನಶಿಸಿ ಹೋಗುತ್ತದೆ. ಇಂದು ಮಾನವ ತನ್ನ ಸ್ವಾರ್ಥ ಸಾಧನೆಗಾಗಿ ನಿಸರ್ಗವನ್ನು ಮನಬಂದಂತೆ ಬಳಸುತ್ತಾ ಬರುತ್ತಿದ್ದಾನೆ. ನಿಸರ್ಗ ತಕ್ಕ ಪಾಠ ಕಲಿಸೇ ಕಲಿಸುತ್ತದೆ ವೆನ್ನುವುದಕ್ಕೆ ಇಂದಿನ ಕೋರನ ಕಣ್ಣಿಗೆ ಕಾಣದ ಜೀವಿ ವಿಜ್ಞಾನ ಲೋಕಕ್ಕೆ ಬೆಚ್ಚಿಬೀಳಿಸಿದೆ. ವೈದ್ಯಲೋಕಕ್ಕೆ ಒಂದು ಸವಾಲಾಗಿದೆ. ಇನ್ನಾದರೂ ಪರಿಸರವನ್ನು ಸಂರಕ್ಷಿಸುವ ಕೆಲಸ ಮನುಷ್ಯ ಮಾಡದಿದ್ದರೆ ಸಂಪೂರ್ಣವಾಗಿ ಸರ್ವನಾಶವಾಗುತ್ತಾನೆ ಎಂದು ಎಚ್ಚರಿಸಲು ಕಾಣದ ಜೀವಿ ಕಂಗಾಲಾಗಿಸಿದೆ ಜಗತ್ತನ್ನು.
ಈಗಿನ ಸ್ಥಿತಿಯನ್ನು ಅವಲೋಕಿಸಿದಾಗ ಪರಿಸರ ಯಾವ ಹಂತಕ್ಕೆ ಬಂದು ತಲುಪಿದೆ. ಅದರಿಂದ ಆಗುವ ಅನಾಹುತ ದುಷ್ಪರಿಣಾಮಗಳು ಊಹಿಸಲಾಗದ ಘಟನೆಗಳು ಮುಂದಿನ ದಿನಗಳಲ್ಲಿ ಸಂಭವಿಸುತ್ತವೆ. ದೊಡ್ಡ ದೊಡ್ಡ ಕಾರ್ಖಾನೆಗಳಿಂದ ಹೊರಸೂಸುವ ಕಾರ್ಬನ್ ಡೈಆಕ್ಸೈಡ್ ಹಾಗೂ ಮಲಿನವಾಗಿರುವ ನೀರನ್ನು ನದಿ ಸರೋವರಕ್ಕೆ ಬಿಡುವುದು ಇದರಿಂದಾಗಿ ವಾಯುಮಾಲಿನ್ಯ ಹಾಗೂ ಜಲ ಮಾಲಿನ್ಯ ಒಟ್ಟಿಗೆ ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಜಲಚರ ಪ್ರಾಣಿಗಳು ಹಾಗೂ ಪ್ರಾಣಿ-ಪಕ್ಷಿಗಳು ಇದಕ್ಕೆ ಬಲಿಯಾಗಿ ಜೀವಸಂಕುಲಕ್ಕೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಂಭವ ಜಾಸ್ತಿಯಾಗಿದೆ. ನಗರಗಳಲ್ಲಿ ಬಹುಮಡಿ ಕಟ್ಟಡ ನಿರ್ಮಾಣಕ್ಕಾಗಿ ಕಾಂಕ್ರೀಟಿಕರಣ ಜಾಸ್ತಿಯಾಗುತ್ತಿದೆ ಡಾಂಬರಿಕರಣ ವಿಸ್ತಾರಗೊಳ್ಳುತ್ತಿದೆ. ಜಗತ್ತು ಬೆಳೆಯುತ್ತಿದ್ದಂತೆ ಸ್ವಾರ್ಥದ ಮನುಷ್ಯ ತಾನು ಯಶಸ್ಸು ಪಡೆದುಕೊಂಡಿದ್ದೇನೆ ಎಂದು ಮುಂದೆ ಸಾಗುತ್ತಿದ್ದಾನೆ. ನಿಜವಾಗಿ ಮುಂದೆ ಸಾಗುತ್ತಿಲ್ಲ ಹಿಂದೆ ಬಿಳುತ್ತಿದ್ದಾನೆ. ಸಂಪತ್ಭರಿತವಾದ ನೈಸರ್ಗಿಕ ಕಾಡು ಅರಣ್ಯ, ಪ್ರಾಣಿ ಪಕ್ಷಿ ಜೀವಸಂಕುಲವನ್ನು ವಿಪರೀತ ಪರಿಣಾಮದಲ್ಲಿ ಮನಬಂದಂತೆ ಬಳಕೆ ಮಾಡಿಕೊಳ್ಳುತ್ತಿದ್ದಾನೆ. ನದಿ ತಿರುವನ್ನು ಬದಲಿಸಿ ಅಣೆಕಟ್ಟುಗಳ ನಿರ್ಮಾಣ ವಿವಿಧ ಯೋಜನೆಯನ್ನು ತರುತ್ತಿದ್ದಾನೆ.
ಕೋರನ ಬಂದಾಗಿನಿಂದ ಜಾಗತಿಕ ತಾಪಮಾನ ಕಡಿಮೆಯಾಗಿದೆ. ಶಬ್ದ ಮಾಲಿನ್ಯ ಜಲಮಾಲಿನ್ಯ ವಾಯುಮಾಲಿನ್ಯ ಪ್ಲಾಸ್ಟಿಕ್ ಮಾಲಿನ್ಯ ಪರಿಸರ ಸಂಬಂಧಪಟ್ಟ ಮಾಲಿನ್ಯವನ್ನು ತಡೆಗಟ್ಟಿದೆ. ಸಂಬಂಧಗಳಿಗೆ ಬೆಲೆ ಕೊಡದೆ ಸ್ವಾರ್ಥ ಜೀವನದಲ್ಲಿ ಹಣಕ್ಕಾಗಿ ಆಸ್ತಿಗಾಗಿ ಬಡಿದಾಡುವ ಮನುಷ್ಯನಿಗೆ
ನೈತಿಕ ಹಾಗೂ ಮಾನವೀಯ ಮೌಲ್ಯ ಬೋಧಿಸಿದೆ ಬೋಧಿಸುತ್ತಿದೆ. ಅಹಂಕಾರ, ಸ್ತ್ರೀ ಶೋಷಣೆ ,ಅತ್ಯಾಚಾರ ಅನ್ಯಾಯ, ಅನೀತಿ ಅಧರ್ಮ ಇವೆಲ್ಲಕ್ಕೂ ಒಂದು ಇತಿಶ್ರೀ ಹೇಳಲು ಬಂದಿದೆಯೆಂದು ಕೋರನ ನನಗೆ ಅನಿಸುತ್ತದೆ.
ಯಾರು ಮಾತು ಯಾರು ಕೇಳದ ಇಂದಿನ ಸ್ಥಿತಿಯಲ್ಲಿ ಕೋರನ ಸಂಬಂಧಿಗಳಿಗೆ, ಪ್ರೀತಿಗೆ ಸ್ನೇಹಕ್ಕೆ ಸ್ಥಾನ ಇದೆ ಎನ್ನುವುದು ತಿಳಿಸಿಕೊಟ್ಟಿದೆ.
ಅಹಂಕಾರ ತಾನೇ ಶ್ರೇಷ್ಠ ಎಂದು ನಡೆದುಕೊಂಡಿರುವ ಮನುಷ್ಯ ನಿಸರ್ಗದ ಮುಂದೆ ಏನೂ ಮಾಡಲಿಕ್ಕೆ ಆಗುವುದಿಲ್ಲ ಅನ್ನೋದು ಸಾಬೀತು ಮಾಡಿದೆ.
ಇನ್ನಾದರೂ ಸಂಬಂಧಗಳಿಗೆ ಬೆಲೆಕೊಟ್ಟು ಮಾನವೀಯ ಮೌಲ್ಯಗಳು ಬೆಳೆಸಿಕೊಂಡು ನಿಸರ್ಗ ಸಂಪತ್ತನ್ನು ಉಳಿಸಿಕೊಂಡು ಬರುವುದಾದರೆ ಉತ್ತಮ ದೇಶ ಕಟ್ಟಲು ಸಾಧ್ಯ. ಉತ್ತಮ ಬದುಕು ಸಾಗಿಸಲು ಸಾಧ್ಯ ಮುಂದಿನ ಪೀಳಿಗೆಗಳಿಗೆ ಉತ್ತಮ ಸಮಾಜ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
- ನಾಗೇಶ್ ಸ್ವಾಮಿ ಮಸ್ಕಲ್
ಕಾರ್ಯದರ್ಶಿಗಳು
ಅಖಿಲ ಭಾರತ ಸಾಹಿತ್ಯ ಪರಿಷತ್ ಬೀದರ್.
ದೂರವಾಣಿ ಸಂಖ್ಯೆ.7259525145.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ