ಶನಿವಾರ, ಸೆಪ್ಟೆಂಬರ್ 11, 2021

ಮೋದಕಪ್ರಿಯ (ಕವಿತೆ) - ಪುರುಷೋತ್ತಮ ಪೆಮ್ನಳ್ಳಿ.

ಮೋದಕಪ್ರಿಯ

ಮೋದಕ ಪ್ರಿಯಕರ ಪಾರ್ವತಿ ಸುತನೇ
ಭಕ್ತಿಯ ನಮನ ನಿನಗೆ ವಿನಾಯಕನೇ
ಶಂಭೋಶಂಕರ ಶಿವನ ಕೋಪದ ತಾಪಕೆ
ಆನೆಯ ಮೊಗವು ಲಭಿಸಿತು ಬದಲಾದ ವದನಕೆ
ಸಕಲ ದೇವಗಣಕೂ ಆದಿ ಪೂಜಿಪನಾಗಿ ಸಾಗಿಹೆ
ಬೇಡುವೆನು ಶರಣು ಬೆನಕನೇ ಕಾಪಾಡು ವಿಘ್ನರಾಜನೇ.||

ಶಶಿಯು ಮದದಿ ಕೆಣಕಲು ನೀಡಿದೆ ಶಾಪವ 
ಆತ್ಮಲಿಂಗವ ಉಳಿಸಿದೆ ಬಳಸಿ ಬುದ್ದಿ ಬಲವ
ಗರಿಕೆ ನೀಡಲು ಅಭಯವ ನೀಡಿ ಸಲಹುವೆ
ಬ್ರಹ್ಮಾಂಡವ ತಂದೆತಾಯಿ ಪಾದದಿ ಬಳಿ ತೋರಿದೆ
ಜಗಕೆ ಮಾತೃಪಿತೃ ವಾತ್ಸಲ್ಯವ ತೋರಿಯೇ
ಬೇಡುವೆನು ಶರಣು ಬೆನಕನೇ ಕಾಪಾಡು ವಿಘ್ನರಾಜನೇ.||

ಮನದ ಮಂಟಪವ ‌ಸಿಂಗಾರವ ಮಾಡಿರುವೆ
ಬಂದು ನೆಲಸಿ ಕಾಪಾಡು ಮುದ್ದು ಬೆನಕ
ನಿನ್ನ ಮಹಿಮೆಯ ಹೊಗಳಲು ಪದಗಳೇ ಸಾಲದು
ನೀ ನೆಲಸದ  ಮನವದು ಬರಡಾದ ನೆಲವು
ಬುದ್ದಿಯ ಬಲದಲಿ ಜಗವನೇ ಕಾದು ಕುಳಿತಿಹೇ
ಬೇಡುವೆನು ಶರಣು ಬೆನಕನೇ ಕಾಪಾಡು ವಿಘ್ನರಾಜನೇ.||

ಇಲಿಯನು ಹೇರಿ ಸಹನೆಯ ತೋರುತ
ಸಲಹುತಲಿರುವೆ ಸಕಲ ಗಣಗಳ ಮಂದಹಾಸವ ಬೀರುತ
ಹಬ್ಬದ ದಿನವದು ಮನದಲಿ ಹರುಷವೂ
ಅರ್ಪಿಸಿ ಬೇಡುವೆವು ತನುಮನ ಧನವೂ
ಸಕಲರ ಚಿತ್ತದಿ ನೀನೆ ನೆಲಸಿ ಹರಸಿಹೇ
ಬೇಡುವೆನು ಶರ‌ಣು ‌ಬೆನಕನೇ ಕಾಪಾಡು ವಿಘ್ನರಾಜನೇ.||
- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ
ದೂ.9632296809.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...