ಶನಿವಾರ, ಸೆಪ್ಟೆಂಬರ್ 11, 2021

ವಿನಾಯಕ (ಕವಿತೆ) - ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ.

ವಿನಾಯಕ

ವಿಘ್ನಗಳ ದೂರ ಮಾಡೋ ವಿನಾಯಕ
ಗಣಗಳ ಕಾಯೋ ಗಣಪನೆ ನಮ್ಮ ನಾಯಕ
ಕೈ ಮುಗಿದು ಬೇಡುವೆ ನಾ ನಿನ್ನ ಸೇವಕ
ನನದು ನಿನದು ಧರ್ಮ ಕಾಪಾಡುವದೇ ಕಾಯಕ//

ಜಗವ ಸುತ್ತಲು ಹೋರಟ ಸೋಹದರ ಷಣ್ಮುಖನು
ತಂದೆ ತಾಯಿಯೆ ನನ್ನ ಪ್ರಪಂಚ ಅಂದ ಗಣಪನು
ವರ್ಷಕ್ಕೊಮ್ಮೇ ಭುವಿಗೆ ಬರುವನು
ಎಲ್ಲರಿಗೂ ಹರ್ಷವನು ತರುವನು//

ಸ್ವಾತಂತ್ರ್ಯ ಪೂರ್ವದಲ್ಲೇ ಮಹಾನಾಯಕರು
ಗಣಪನ ಆಚರಣೆ ಮಾಡಿದರು
ಒಗ್ಗಟ್ಟಿಗೆ ಭಕ್ತಿ ಶಕ್ತಿ ಬೇಕೆಂದರು ಹಿರಿಯರು
ಉತ್ಸವ ಮಾಡಿ ನೋವ ಮರೆತರು//

ವಿಘ್ನೇಶನಿಗೆ ಮರು ಜೀವ ತಂತು ತಾಯಿ ಕರುಣೆ
ಮೂರೋತ್ತು ಮಾಡಿದ ಮಾತ ಪಿತೃ ಸ್ಮರಣೆ
ಧರೆಯಲಿ ಗಣಪತಿ ಬೋಪ್ಪ ಮೋರಯ ಘೋಷಣೆ
ಮಾಡುವುದು ಹಿಂದೂ ಧರ್ಮದ ಕಷ್ಟ ನಿವಾರಣೆ//

- ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ. ಸಾ!ಭೈರಾಪೂರ,ತಾ!ಜಿ!!ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...