ಭಾನುವಾರ, ಸೆಪ್ಟೆಂಬರ್ 19, 2021

ನಕ್ಕಳಾ ಸುಂದರಿ? (ಕವಿತೆ) - ಶ್ರೀಧರ ಗಸ್ತಿ ಧಾರವಾಡ.

ನಕ್ಕಳಾ ಸುಂದರಿ?

ನಕ್ಕಳಾ ಸುಂದರಿ ನಗು ಮೊಗದ ಲಲನೆಯಲಿ
ತನ್ನೊಡೆಯ ಬರುವನೆಂದು,ಹೂವರಳಿದವು
ಮಲ್ಲಿಗೆಯಂತ ಮುಖದಿ ಕಚಗುಳಿಯನಿಕ್ಕುತ
ಬೊಗಸೆಗಣ್ಣಿನಬಯಕೆಹೊತ್ತ ಚೆಲುವೆಯಂಗಳದಲಿ

ಗಡಿಯಾಚೆಗೆ ನಿಂತು ಕುಡಿಮೀಸೆಯನರಳಿಸಿ
ಶತ್ರುಗುಂಡಿಗೆಯ ರಕ್ತಬಸಿದವ ತಾಯಿನೆಲಕಿವ ತನ್ನಾಸೆಗೋಪುರವ ಒಡಲಲ್ಲಿ ಹೊಸಕಾಕಿದವ ಸಲಗಕುದುರೇಯನೇರಿ ಬರುವವನ ನಡೆ ನೋಡಿ
ನಕ್ಕಳಾ ಸುಂದರಿ ಸೆರಗ ಮರೆಯಲಿ ಸ್ವಾಗತ ಕೋರಿ

ಸೆರಗಿನ ಮರೆಯಲಿ ಸ್ವಗತದ ಪನ್ನಿರು
ಜಾರಿಹೋಗುವ ಮುನ್ನ ತಡವರಿಸದೇ
ಅಪ್ಪಿಕೊಳ್ಳುವ ಮುನ್ನ ಒಪ್ಪಿಗೆಯ ಮಾತೊಂದ
ಅಕ್ಕರೆಯಿಂದಲಿ ಕೇಳಿ ಒಪ್ಪಿಗೆ ಕೊಟ್ಟವನ ನೋಡಿ
ನಕ್ಕಳಾ ಸುಂದರಿ ಸೆರಗ ಮರೆಯಲಿ ಸ್ವಾಗತ ಕೋರಿ

ಅನುದಿನವು ಬಿಕ್ಕಳಿಕೆ ಮುಕ್ಕಳಿಸಿ ಬಂದಾವ
ನೆನಪಿನ ಸುಳಿಯಾಗಿ ಸುಳಿಸುಳಿದು ಹೋಗ್ಯಾವ
ನಿನ್ನೆಸರ ಹೇಳುದಕ ಪ್ರೀತಿಯ ಹೂ ಅರಳ್ಯಾವ
ತಡವಿನ್ನು ತರವಲ್ಲ  ಬಂದು ಸೇರೆನ್ನ ಎನ್ನುತ್ತಲೇ
ನಕ್ಕಳಾ ಸುಂದರಿ ಸೆರಗ ಮರೆಯಲಿ ಸ್ವಾಗತ ಕೋರಿ
✍  ಶ್ರೀಧರ ಗಸ್ತಿ ಧಾರವಾಡ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...