ಬುಧವಾರ, ಸೆಪ್ಟೆಂಬರ್ 8, 2021

ಶಿವಸ್ಮರಣೆ (ಕವಿತೆ) - ರಾಜೇಶ್ವರಿ ಶ್ರೀಧರ್, ಚಿತ್ರದುರ್ಗ.

 ಶಿವಸ್ಮರಣೆ

ನಿರಾಕಾರ ರೂಪಿ ಶಿವನು
ನಿರಾಭರಣ ಚೆಲುವ ಸುಂದರನು
 ನಿತ್ಯ ಭಕ್ತಿಗಿಲ್ಲಿ ಒಲಿಯುವನು
ನಿತ್ಯ ನಿರ್ಮಲನು ಇವನು

ನಂಜು ಉಂಡು ನಂಜುಂಡನಾದೆ
ಹೆಣಗಳ ಸುಡುತ್ತ ಸ್ಮಶಾನವಾಸಿಯಾದೆ
ನೃತ್ಯವನ್ನು ಮಾಡುತ್ತಾ  ನಟರಾಜನಾದೆ
ಪಾರ್ವತಿಯ ಧರಿಸಿ ಅರ್ಧನಾರೀಶ್ವರನಾದೆ

ಆಡಂಬರದ ಪೂಜೆ ಬಯಸದವ
ಬಿಲ್ವಪತ್ರೆ ಎಂದರೆ ಪ್ರಿಯನೆಂದವ
ತುಂಬೆ ಸಿಕ್ಕರೆ ತಬ್ಬಿ ಮುದ್ದಿಸುವ
ಬೇಡಿದ ವರಗಳ ಇಲ್ಲವೆನ್ನದೆ ನೀಡುವ
- ರಾಜೇಶ್ವರಿ ಶ್ರೀಧರ್, ಚಿತ್ರದುರ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...