ಗುರುವಾರ, ಸೆಪ್ಟೆಂಬರ್ 16, 2021

ಹೆಣ್ಣು (ಕವಿತೆ) - ಧ್ಯಾಮ್ ರಾಜ್. ವಾಯ್ಹ್. ಸಿಂದೋಗಿ.

ಹೆಣ್ಣು

ನೋಡಿ ಬೆರಗಾದೆ ಹೆಣ್ಣಿನ ಉತ್ಸುಕತೆ
ಕುಟುಂಬದ ಭಾವ ಬಂಧಿಸುವ ವಿನಯತೆ
ತಿಳಿಸಿತು ಅವಳ ನಡೆ ನುಡಿಯ ಶ್ರೇಷ್ಠತೆ
ಕೈ ಮುಗಿವೆ ಹೆಣ್ಣು ಮನ ಮನೆಯ ದೇವತೆ//

ಕೌಟುಂಬಿಕ ಕಲಹಗಳ ಅರಿತು
ಎಲ್ಲರೋಳಗೆ ಒಂದಾಗಿ ಬೆರೆತು
ನಗುವಳು ಕಷ್ಟ ನಷ್ಟ ಮರೆತು
ಹೆಣ್ಣು ಮಾನದ ಸ್ಥಾನಕೆ ಸೋತು//

ಹೆಣ್ಣು ಬಂಧು ಬಳಗದ ಸ್ನೇಹಿತೆ
ಪಾಲಿಸು ಗಂಡು ಹೆಣ್ಣು ಸಮಾನತೆ
ಮೆರೆಸಲು ನಮ್ಮ ನಾಡಿನ ಭಾವಕ್ಯತೆ
ಕಣ್ಣಾಗಿ ಹಣ್ಣಾಗಿ ಮಣ್ಣಾಗುವಳು ಮಾತೆ//

ಹೆಣ್ಣಿನ ಅಂಗಾಂಗ ನೋಡುವ ರೀತಿ
ತಾಯಿಗೂ ಮಗನ ಮೇಲೆ ತಂತು ಭೀತಿ
ಅಳಿಬಾರದು ಹೆಣ್ಣು ಗೌರವಿಸೋ ನೀತಿ
ಆಗಬಾರದು ಯಾವದು ಅತಿ ಎಲ್ಲದಕೂ ಇದೆ ಮಿತಿ//
- ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ. ಸಾ! ಭೈರಾಪೂರ, ತಾ! ಜಿ!!ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...