ಬುಧವಾರ, ಸೆಪ್ಟೆಂಬರ್ 8, 2021

ಎಷ್ಟು ಮಾಡಿದರೇನು (ಕವಿತೆ) - ಶ್ರೀ ಜಿ ಟಿ ಆರ್ ದುರ್ಗಾ, ಬಂಗಾರಪೇಟೆ.

ಎಷ್ಟು ಮಾಡಿದರೇನು

ಮತ್ಯಾವ ಜನ್ಮದಲ್ಲಿ ಬರದು ಈ ಜನ್ಮ
ಎಲ್ಲೆ ಹೋಗುವೆ ನೀ ಜಗದ ಕಡೆಯ ಜನ್ಮ
ಮರೆಯ ಬೇಡ ಎಂದು ಸುಂದರ ಸಮಯ
ಮುನ್ನಡೆಸು ಸುಖದ ಸಂಸಾರ ಪಯಣ
ನೋಡು ನೋಡು ಈ ಜೀವನದ ನಟನೆ

ಮರೆಯಾಗದ ಆ ನೋಟ ಹುಡುಕುತ್ತಾ ನಿಂತು
ಮುನ್ನಡೆದು ನೋಡಿದರೆ ಕಾಣುವುದು ಒಳಿತು
ಅಡ್ಡ ದಿನ್ನೆಗಳೆಲ್ಲ ದಾಟಿದರೆ ಒಳಿತು
ಹೊಳೆಯಂಗೆ ಸುಳಿಗಳು ಇರುವುದು ಮರೆತು
ಸುಳಿಯಲ್ಲಿ ಸಿಲುಕುವೆ ಬಾಳಲ್ಲಿ ಎಚ್ಚರ

ಸಾಗಲೆಬೇಕು ಬಹುದೂರ ನಮ್ಮ ಪಯಣ 
ಮತ್ತೆಂದು ಬಾರದು ಸುಖವಾದ ಈ ಜನ್ಮ
ಕಣ್ಣಿಗೆ ಕಾಣದು ಗುಟ್ಟಾದ ಮರ್ಮ
ಭೂಮಿಲಿ ವಿಚಲಿತ ಸುತ್ತುವುದು ಕರ್ಮ
ತೊಳಿಯಬೇಕು ಕಲ್ಮಶ ಕಟ್ಟಿದ ಧರ್ಮ

ಎಲ್ಲೆಲ್ಲಿ ಹೋಗುವೆ ನೀ ಮತ್ತೆಂದು ಬರುವೆ
ಕಟ್ಟಿದ ನಿನ್ನ ಮನೆ ಬಿರುಕು ಬಿಟ್ಟಿತಲ್ಲವೆ
ಕೂಡಿಟ್ಟ ಸಿರಿತನವು ಬಾರದು ನಿನ್ನಿಂದೆ
ಎಷ್ಟು ಮಾಡಿದರು ಫಲ ಸಿಗದು ಕೊನೆಗೆ
ಕೊನೆಗೋಗುವುದು ಖಾಲಿ ಆರುಮೂರಡಿಗೆ
- ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...