ಸೋಮವಾರ, ಸೆಪ್ಟೆಂಬರ್ 13, 2021

ಒಂದು ಕಿರು ಕಥೆ - ಸವಿತಾ ಆರ್ ಅಂಗಡಿ ಮುಧೋಳ.

ಒಂದು ಕಿರು ಕಥೆ.

 ಒಂದು ಹಳ್ಳಿಯಲ್ಲಿ ಒಬ್ಬ ಸಿರಿವಂತನಿದ್ದನು. ಅವನು ಬಹಳ ಜಿಪುನನಾಗಿದ್ದ. ಯಾರಿಗೂ ಏನನ್ನು ಕೊಡುತ್ತಿರಲಿಲ್ಲ. ಯಾವತ್ತು ಮನೆಗೆ ಕರೆದವನಲ್ಲ. ಉಣಿಸಿದವನು ಅಲ್ಲಾ. ತಿನಿಸಿದವನೂ ಅಲ್ಲಾ. ಒಂದು ತಂಬಿಗೆ ನೀರನ್ನು ಸಹ ಕೊಟ್ಟವನಲ್ಲ. ಊರಿನಲ್ಲಿ ನೀರಿನ ಅಭಾವ ಬಹಳ ಇತ್ತು. ಹೀಗಾಗಿ ನೀರಿನ ಸಮಸ್ಯೆ ಇತ್ತು. ಯಾರಾದರೂ ಕರೆದು ನೀರು ಕೊಟ್ಟರೆ ಅವರನ್ನು ದೇವರೆಂದು ಭಾವಿಸುತ್ತಿದ್ದರು. ಈ ಜಿಪುಣ ಎಂದೂ ಯಾರಿಗೂ ಏನೂ ಕೊಟ್ಟವನಲ್ಲ. ಹೀಗಾಗಿ ಆ ಊರಲ್ಲಿ ಮಕ್ಕಳನ್ನು ಹಿಡಿದು ಯಾರು ಅವನನ್ನು ಸೇರುತ್ತಿರಲಿಲ್ಲ. ಬೇರೆಯವರಿಗೆ ಕೊಡುತ್ತಿದ್ದರೂ ಸಹ ತಾನಾದರೂ ಒಂದು ಒಳ್ಳೆಯ ಬಟ್ಟೆ ಹಾಕಿಕೊಂಡು ಸುಖವಾಗಿ ಇರಬಹುದಿತ್ತು ಅವನ್ನು ಕೂಡ ಆ ಶ್ರೀಮಂತ ಮಾಡಲಿಲ್ಲ. ವಯಸ್ಸಾದಂತೆ ಹಣ್ಣು ಹಣ್ಣಾಗಿ ಒಂದು ದಿನ ಪ್ರಾಣ ತೊರೆದನು. ಆನಂತರ ಊರ ಮಂದಿಯೆಲ್ಲ ಅವನ ಮನೆಗೆ  ಅಂತ್ಯ ಕ್ರಿಯೆಗೆ ಹೋದರು. ಅಲ್ಲಿ ಅವರಿಗೆ ಸಿರಿವಂತನು ಬರೆದಿದ್ದ ಒಂದು ಪತ್ರ ಸಿಕ್ಕಿತು. ಅವನು ಮೃತ್ಯು ಪತ್ರದಲ್ಲಿ ತನ್ನ ಆಸ್ತಿ ಯನ್ನೆಲ್ಲ ಸಮಾಜ ಕ್ಕೆ ಅರ್ಪಿಸಿದ್ದ. ಕಾಲುವೆಯ ಮೂಲಕ ಆ ಊರಿಗೆ ನದಿಯ ನೀರನ್ನು ತರುವುದಕ್ಕೆ ಆಸ್ತಿ ಯನ್ನೆಲ್ಲ ಬಳಿಸಿರಿ ಎಂದು ಬರೆದಿಟ್ಟಿದ್ದ. ಇದರಿಂದ ಆ ಊರಿಗೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ವಾಗಿ ಪರಿಹಾರ ಸಿಕ್ಕಿತು. ಇದರಿಂದ ಅವನು ಸಮಾಜದ ಮೇಲಿಟ್ಟಿರುವ ಅಭಿಮಾನ. ನನ್ನ ದೇಶ ನನ್ನ ಊರು ಎನ್ನುವ ದೇಶ ಭಕ್ತಿ. ದೈವ ಭಕ್ತಿ ಎದ್ದು ತೋರುವದು. ಸಮಾಜ ಕ್ಕಾಗಿ ತ್ಯಾಗ, ಪ್ರಾಣರ್ಪಣೆ ಮಾಡಿದ್ದು ಕಾಣುತ್ತೇವೆ.
 
✍️ ಸವಿತಾ ಆರ್ ಅಂಗಡಿ  ಮುಧೋಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...