ಶನಿವಾರ, ಅಕ್ಟೋಬರ್ 16, 2021

ದಸರಾ ದಿನ ಜಗಕ್ಕಾಗಲಿ ಸುದಿನ (ಕವಿತೆ) - ಸ್ಫೂರ್ತಿ ಎಸ್ ಕನಸಾವಿ.

ದಸರಾ ದಿನ ಜಗಕ್ಕಾಗಲಿ ಸುದಿನ.....

ದಶದಿಕ್ಕುಗಳ ವಿಜಯ ದಶಹರ ದಿನ..
ಕರುನಾಡ ಹಬ್ಬ ದಸರಾ ಉತ್ಸವದ ಸುದಿನ..

ನವರಾತ್ರಿ ನವಶಕ್ತಿ ವೈಭವಗಳ ದಿನ..
ನವದುರ್ಗೆಯರ ಆರಾಧಿಸುವ ಸುದಿನ..

ಶಸ್ತ್ರಾಸ್ತ್ರಗಳ ಪೂಜಿಸುವ ದಿನ..
ಶಸ್ತ್ರಾಸ್ತ್ರಗಳ ಶಕ್ತಿ ಹೆಚ್ಚಿಸುವ ಸುದಿನ..

ಸ್ತ್ರೀಯರು ಶಮಿಯ ಸುತ್ತುವ ದಿನ..
ಪರಸ್ಪರರು ಶಮಿ ವಿನಿಯೋಗಿಸುವ ಸುದಿನ..

ಪ್ರೀತಿ ವಿಶ್ವಾಸದಿ ಬೆರೆಯುವ ದಿನ..
ಸಂಬಂಭದ ಬಾಂಧ್ಯವ್ಯ ಬೆಳೆಸುವ ಸುದಿನ..

ಪೌರಾಣಿಕ ಹಿನ್ನೆಲೆ ಸಾರುವ ದಿನ..
ಗೊಂಬೆಗಳ ಕುರಿಸುವ ಸುದಿನ..

ಕಾಳಿ ದುಷ್ಟರ ಶಿಕ್ಷಿಸಿದ ದಿನ..
ಕರುಣಿ ಶಿಷ್ಟರ ರಕ್ಷಿಸಿದ ಸುದಿನ..

ರಾಮ ದಶವತಾರ ಸಂಹರಿಸಿದ ದಿನ..
ಸೀತೆ ಬಂಧನದಿ ಮುಕ್ತಗೊಳಿಸಿದ ಸುದಿನ..

ಪಾಂಡವರು ಕೌರವರೊಡನೆ ಜಯ ಸಾಧಿಸಿದ ದಿನ..
ಅಧರ್ಮ ಅಳಿಸಿ ಸುಧರ್ಮವ ಸ್ಥಾಪಿಸಿದ ಸುದಿನ..

ದಿವ್ಯವಾದ ದೀಪಾಲಂಕಾರದ ದಿನ..
ಭವ್ಯವಾದ ಮೈಸೂರು ದಸರಾದ ಸುದಿನ..

ನಾಡ ದೇವತೆ ಮೆರೆಸುವ ದಿನ..
ಜಂಬೂ ಸವಾರಿಯ ಸುದಿನ..

ದೇಶ ವಿದೇಶಿಗರ ಕಣ್ಮನ ಸೆಳೆಯುವ ದಿನ..
ಕರುನಾಡಿಗರು ಉತ್ಸಾಹದಿ ಸಂಭ್ರಮಿಸುವ ಸುದಿನ..

ಜನಪದಕಲೆ ನೃತ್ಯಸ್ವರಸಂಗೀತ ಮೇಳದ ದಿನ..
ಸರ್ವರ ಮನ ತಣಿಸುವ ಸುದಿನ..

ನವ ಹರುಷ ಹರಸಲೆಂದು ಬೇಡುವೆ ಈ ದಿನ..
ಅನ್ನದಾತರ ಅನುಗ್ರಹಿಸೆಂದು ಕೇಳುವೆ ಈ ಸುದಿನ..

ಸಮಸ್ಯೆಗಳು ಎದುರಿಸಲು ಶಕ್ತಿ ನೀಡೆಂದು ಬೇಡುವೆ ಈ ದಿನ..
ಸಂಕಷ್ಟಗಳ ಪರಿಹರಿಸೆಂದು ಕೇಳುವೆ ಈ ಸುದಿನ..

ಕಾಮುಕರ ದ್ವಂಸವಾಗಲೆಂದು ಬೇಡುವೆ ಈ ದಿನ..
ಸ್ತ್ರೀಕುಲವ ಸಂರಕ್ಷಿಸೆಂದು ಕೇಳುವೆ ಈ ಸುದಿನ..

ಭ್ರಷ್ಟಾಚಾರವ ಕೊನೆಗಾಣಲೆಂದು ಬೇಡುವೆ ಈ ದಿನ..
ಭಯೋತ್ಪಾದಕರು ಶರಣಾಗಳೆಂದು ಕೇಳುವೆ ಈ ಸುದಿನ..

ಸಕಲ ಜೀವರಾಶಿಗಳ ಸುರಕ್ಷಿತವಾಗಿರಲೆಂದು ಕೇಳುವೆ ಈ ದಿನ..
ಸಕಲರಿಗೂ ಶುಭವಾಗಲೆಂದು ಬಯಸುವೆ ಈ ಸುದಿನ....

- ಸ್ಫೂರ್ತಿ ಎಸ್ ಕನಸಾವಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...