ನಿಲ್ಲಬೇಡ ನೀನು
ಹೋರಾಟದ ಬದುಕಿನಲ್ಲಿ ಗೆಲ್ಲಬೇಕು ನೀನು
ಹೊಯ್ದಾಡದೆ ಅತ್ತ ಇತ್ತ ನಡೆಯಬೇಕು ನೀನು
ನಿಲಕದಷ್ಟು ಎತ್ತರಕ್ಕೆ ಬೆಳೆಯಬೇಕು ನೀನು
ಆಗದೆಂಬುದಿಲ್ಲವೆಂದು ತಿಳಿಸ ಬೇಕು ನೀನು
ನೋವಿಗೆಲ್ಲ ಹೆಗಲ ಕೊಡುತ ಹೆಜ್ಜೆ ಇಡು ನೀನು
ವಿಶ್ವ ಮಾನವನಾಗು ನಿಲ್ಲ ಬೇಡ ನೀನು
ವಿದ್ಯೆಗಿಂತ ಮಿಗಿಲು ಇಲ್ಲ ಅರಿತು ಬಾಳು ನೀನು
ಜಗದ ಮಹಾ ಜ್ಞಾನಿಯೆಂಬ ಹೆಸರು ಪಡೆಯೊ ನೀನು
ಸಂಕುಚಿತ, ಸ್ವಾರ್ಥಗಳ ತೊರೆಯ ಬೇಕು ನೀನು
ಜಗದ ಸೇವೆ ಈಶ ಸೇವೆ ಮರೆಯ ಬೇಡ ನೀನು
ಮೆಟ್ಟಿನಿಂತು ಗೆಲ್ಲ ಬೇಕು ಬಡತನವ ನೀನು
ನಮಗಿಲ್ಲವೆ ಇಂತ ಮಗು ಎನ್ನುವಂತೆ ನೀನು
ಹೆತ್ತ ಎದೆಗೆ ಮುಂಗಾರಿನ ಮಳೆಯಾಗು ನೀನು
ಹಸನಾಗಲಿ ನಿನ ಬದುಕು ಹಾರೈಸುವೆ ನಾನು
- ಶ್ರೀ ತುಳಸಿದಾಸ ಬಿ ಎಸ್
ಶಿಕ್ಷಕರು ಗೊರೇಬಾಳಕ್ಯಾಂಪ್,
ರಾಯಚೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ