"ನುಂಗಲು ಬರಲಾರದು "
ನೀರಿನಲ್ಲಿಯಾಗಲಿ, ಪ್ರಸಾದದಲ್ಲಿಯಾಗಲಿ ಒಂದು ಸಣ್ಣ ಕಡ್ಡಿಯೋ, ಕಸವೋ ಇದ್ದರೆ ಅದನ್ನು ನುಂಗಲು ಬರಲಾರದು. ಅದರಂತೆ ಪರಧನ, ಪರಸತಿ ಪಾಪಕಾರ್ಯಗಳಾಗಿವೆ. ಕಸವಾಗಲಿ , ಕಡ್ಡಿಯನ್ನಾಗಲಿ ಸಣ್ಣ ಪ್ರಮಾಣದಲ್ಲಿಯೂ ಹೇಗೆ ನುಂಗಲು ಬರಲಾರದೋ ಅದರಂತೆ ಪರಧನ, ಪರಸತಿಯಲ್ಲಿ ತಪ್ಪಿದ ಕಾರ್ಯಗಳು ಸಣ್ಣ ಪ್ರಮಾಣದಲ್ಲಿ ನಡೆದರೂ ಹೆಚ್ಚಿನ ಹಾನಿ ಮಾಡುತ್ತವೆ. ಕಣ್ಣಿನಲ್ಲಿ ಒಂದು ಸಣ್ಣ ಹರಳೋ, ಅಥವಾ ಧೂಳೋ ಬಿದ್ದರೆ ಹೆಚ್ಚಿನ ಭಾದೆಯಾಗುವದು. ಇದನ್ನು ಹಾಗೇ ಅಲಕ್ಷೆ ಮಾಡಿದರೆ ಕಣ್ಣೇ ಹೋಗುವ ಸಂದರ್ಭ ಬರುತ್ತದೆ. ಅದರಂತೆ ಪರಧನ ಮತ್ತು ಪರಸತಿ ಎಂಬ ಸಣ್ಣ ಧೂಳಾಗಲಿ, ಉಸುಕಾಗಲಿ ಮನದಲ್ಲಿ ಬಿದ್ದಾಗ ಅರವಿನ ಕಣ್ಣಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಈ ಪಾಪಕಾರ್ಯಗಳಿಗೆ ಅಲಕ್ಷ ಮಾಡಿದರೆ ಅರುವಿನ ಕಣ್ಣು ಹೋಗಿ ಕುರುಡಾಗುವದು. ಬಹಿರಂಗದಲ್ಲಿ ಕಣ್ಣು ಇರುವಾಗ ಎಲ್ಲಾ ವಸ್ತುಗಳನ್ನು ನೋಡಲು ಬರುತ್ತದೆ ಅದರಂತೆ ಅರುವಿನ ಕಣ್ಣು ಇರುವಾಗ ಸತ್ಯ, ಧರ್ಮ, ದೇವರು ನೋಡಲು ಸಾಧ್ಯವಾಗುತ್ತದೆ ಮತ್ತು ಧರ್ಮದ ಕಾರ್ಯಗಳನ್ನು ತಿಳಿಯಲು ಸಹಕಾರಿಯಾಗುವದು ಆದರೆ ಅರುವೆ ಇಲ್ಲದಿರುವಾಗ ಇವುಗಳನ್ನು ನೋಡಲು ಸಾಧ್ಯವಿಲ್ಲ. ಕುರುಡರಿಗೆ ಯಾವ ವಸ್ತುಗಳು ಹೇಗೆ ಕಾಣಲಾರವೋ ಹಾಗೇ ಅರುವನ್ನು ಕಳೆದುಕೊಂಡಾಗ ಪಾಪ, ಪುಣ್ಣ್ಯ, ಸತ್ಯ ಇವುಗಳನ್ನು ತಿಳಿಯಲು ಸಾಧ್ಯವಿಲ್ಲ. ಬಹಿರಂಗದ ಆಚಾರಗಳೂ ತಳಿಯುವದಿಲ್ಲ ಅಷ್ಟೆ ಏಕೆ ಅಂತರಂಗದ ವಿಚಾಗಳೂ ತಿಳಿಯಲಾರವು. ಈಗ ಸರ್ವರಿಗೂ ಧರ್ಮದ ಬೆಳಕು -ಸತ್ಯದ ಬೆಳಕಿನ ಅವಶ್ಯಕತೆ ಇದೆ. ಪ್ರಸ್ತುತ ಜಗತ್ತಿನಲ್ಲಿ ಪಾಪಗಳೇ ತುಂಬಿಹೋಗಿವೆ ಅದಕ್ಕಾಗಿ ಈಗಲಾದರೂ ಇದನ್ನು ಸುಧಾರಿಸಿಕೊಂಡು ನಡೆದರೆ ಧರ್ಮದ ಹಾದಿ ಸುಗಮವಾಗುವದು. ಶಿವನನ್ನು ನಂಬಿದವರು ತಮ್ಮ ಸಂಸಾರದಾಟವನ್ನು ಮುಗಿಸುವರು, ಪರಮಾತ್ಮನಡಿಗೆ ಧಾವಿಸಿ ಬಂದು ಬಹುದಿನದ ಆಟದಿಂದ ಮಲಿನವಾದ ತನು, ಮನ ಭಾಗಗಳ ಮೈಲಿಗೆಯನ್ನು ತೊಳೆದುಕೊಂಡು ಶುದ್ಧರಾಗುವರು. ಗುರುಸೇವೆಯಲ್ಲಿ ತನುಸವೆದು, ಲಿಂಗಪೂಜೆಯಲ್ಲಿ ಮನಸವೆದು ಇಂತೀ ಸಂಪತ್ತು ನೆಲಗೊಂಡಾತನೆ ಸದ್ಭಕ್ತ ಕಾಣ ಎಂದಿರುವರು ಶರಣರು ಬರಿ ಮಾತಿನಿಂದ ಭಕ್ತನಾಗುವಂನೆಂದರೆ ಅದು ಫಲಕಾರಿಯಾಗುವದಿಲ್ಲ. ಶರಣರ ವಿಚಾರಗಳು "ಕಲ್ಪವೃಕ್ಷದಂತೆ" ನಿಂತಿರುವದು. ಕಲ್ಪವೃಕ್ಷದ ಬಳಿ ಹೋದರೆ ಕಲ್ಪಿಸಿದ್ದನ್ನು ಹೇಗೆ ಕೊಡುವದೋ ಹಾಗೇ ಶರಣ ಸಂದೇಶಗಳು ಶಿವನ ಸಮೀಪ್ಯ ಕೊಡುವದು. ಧರ್ಮವೆಂಬ ಸಂದೇಶ ಮುತ್ತು- ಮಾಣಿಕ್ಯದಂತೆ ಇದೆ. ಮಾಣಿಕ್ಯ ಬೇಕಾದವರು ಸತ್ಯ ಮಾರ್ಗದಲ್ಲಿ ನಡೆದು ಶಿವನ ಕೃಪೆಯಾದಾಗ ದೊರೆಯುತ್ತದೆ. ಪಾಪಕಾರ್ಯಗಳು ಸಹಜವಾಗಿಯೇ ಯಾವುದಾದರು ಒಂದು ರೂಪದಲ್ಲಿ ಹಾನಿ ಉಂಟುಮಾಡುತ್ತದೆ. ಹನಿಗೊಳಗಾಗದೆ ಧರ್ಮದ ಹಾದಿಯಲ್ಲಿ ನಡೆದು ಶಿವನ ಕೃಪೆಗೆ ಪಾತ್ರವಾದರೆ ಧರ್ಮದ ಬೆಳಕು ಮೂಡುತ್ತದೆ.
- ಮಂಜುನಾಥ ಹಿರೇಮಠ ದಂಡ ಸೋಲಾಪುರ (ಚಾಮನಾಳ) ಯುವ ಸಾಹಿತಿಗಳು ಮತ್ತು ಶಿಕ್ಷಕರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ