ಮಾನವನ ಜೀವನ ಕ್ರಮದಲ್ಲಿ ಕಾಲ ಕಾಲಕ್ಕೂ ಬದಲಾಗುತ್ತದೆ. ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಮತ್ತು ರಾಜಕೀಯ ಸ್ಥಾನಮಾನವನ್ನು ಪಡೆದುಕೊಳ್ಳುವ ಆತುರದಲ್ಲಿಒತ್ತಡ ರಹಿತ ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಹಿಂದೆ ಒಂದು ಕಾಲ ಇತ್ತು ನಮ್ಮ ಜೀವನಕ್ಕೆ ಬೇಕಾಗುವ ವಸ್ತುಗಳನ್ನು ಮಾತ್ರ ಪಡೆದುಕೊಂಡಿದ್ದರೆ ಅದು ಸರಳ ಜೀವನ ವಾಗುತ್ತಿತ್ತು ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾನು ಬದುಕಿ ತನ್ನ ಕುಟುಂಬವನ್ನು ನಿರ್ವಹಣೆ ಮಾಡಲು ಇವತ್ತಿನ ಆಧುನಿಕ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಳ್ಳಲು. ಜೀವನದ ಮೇಲೆ ಆಗುತ್ತಿರುವ ಒತ್ತಡಗಳನ್ನು ಮರೆತು ಕಾರ್ಯವನ್ನು ಮಾಡುತ್ತಿರುವುದರಿಂದ ದೇಹದ ಮೇಲೆ ಮತ್ತು ಮಾನಸಿಕ ಸ್ಥಿತಿಯ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತದೆ.ಮಾನಸಿಕ ಒತ್ತಡಗಳು ಹೆಚ್ಚಾದಂತೆ ದೈಹಿಕ ತೊಂದರೆಗಳು ಸಹಜವಾಗಿ ಕಾಣಿಸಿಕೊಳ್ಳುತ್ತವೆ. ಅದು ಒತ್ತಡಗಳ ಪ್ರಮಾಣ ಹೆಚ್ಚಾದಂತೆ ಮೆದುಳಿನ ರಕ್ತ ಸಂಚಲನ ಕಡಿಮೆಯಾಗಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಲಕ್ವ ಅಥವಾ ಪಾರ್ಟಿ ಆಗುವ ಸಂಭವ ಹೆಚ್ಚು ಪ್ರಮಾಣದಲ್ಲಿ ಆಗುತ್ತದೆ ಇದಕ್ಕೆ ಮಾನಸಿಕ ಒತ್ತಡ ಧೂಮಪಾನ ಮದ್ಯಪಾನ ಮತ್ತು ಇಂತಹ ಕಾರಣಗಳಿಂದ ದೇಹವನ್ನು ಆವರಿಸುತ್ತದೆ. ಮೊದಮೊದಲು ಇದು
ಮೆದುಳಿನ ಸೂಕ್ಷ್ಮ ಧಮನಿಗಳಲ್ಲಿ ಹೆಪ್ಪುಗಟ್ಟಿದ ರಕ್ತ ಮುದ್ದೆ ( ಎಂಬೊಲೈ) ಸಿಕ್ಕಿ ಹಾಕಿಕೊಂಡು ಕೂಡ್ಗರಣಿಕೆ ( ತ್ರಾಂಬಸ್ ) ಆಗುವದು ರಕ್ತಸ್ರಾವವಾಗಿ ಮೆದುಳಿಗೆ ರಕ್ತ ಪೂರೈಕೆ ತಕ್ಷಣ ಕಡಿಮೆಯಾಗುವದು ಇದರಿಂದ ಲಕ್ವಾ ( ಸ್ಟ್ರೋಕ್ ) ಹೊಡೆಯುವದು
ಲಕ್ವಾಕ್ಕೆ ಕಾರಣಗಳು
# ಅಧಿಕ ಒತ್ತಡ ಪರಿಸ್ಥಿತಿ- ಕುಟುಂಬ ಬಂದಮೇಲೆ ಹಲವಾರು ಸಮಸ್ಯೆಗಳು ಇರುವುದು ಸಹಜ ಆದರೆ ಆ ಸಮಸ್ಯೆಗಳಲ್ಲಿ ಸಹಜವಾಗಿ ಒಬ್ಬರ ಮೇಲೆ ಇನ್ನೊಬ್ಬರು ಅಸೂಯೆ ಪಡುವುದು ಹೆಚ್ಚಾಗುತ್ತಾ ಹೋದಂತೆ ಅದು ತಂದೆ ಮಗನ ನಡುವೆ ಅಣ್ಣ-ತಮ್ಮಂದಿರ ನಡುವೆ ಅತ್ತೆ-ಸೊಸೆಯ ನಡುವೆ ಮುಂತಾದ ಕುಟುಂಬದ ಸದಸ್ಯರಿಗೆ ನಿಂದನೆಗಳು ಹೆಚ್ಚಾದಂತೆ ಸಹಜವಾಗಿ ಕಾರ್ಯನಿರ್ವಹಿಸುವಂತೆ ವಕ್ತಿಯ ಮೇಲೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ, ಇದರಿಂದ ಮನೆಗೆ ಮತ್ತೆ ಮತ್ತೆ ಅವಮಾನ,ಪದೇ- ಪದೇ ಬೆಸರ,ಕುಟುಂಬ ವಿಘಟನೆ ಇಂದ ಆರ್ಥಿಕ ಸ್ಥಿತಿ ಹದಗೆಡುತ್ತದೆ ಆರ್ಥಿಕ ಸ್ಥಿತಿಯನ್ನು ನಿರ್ವಹಣೆ ಮಾಡಿಕೊಳ್ಳಲು ಅವನು ಮತ್ತೆ ಅಧಿಕಾರಕ್ಕೆ ಒಳಗಾಗಬೇಕಾಗುತ್ತದೆ.
# ದುಶ್ಚಟಗಳು- ದುಶ್ಚಟಗಳು ಜೀವನದ ಒಂದು ಭಾಗವಾಗಿದೆ ಅದು ಧೂಮಪಾನ ಒಂದು ರೀತಿಯ ಆನಂದವನ್ನು ಪಡೆಯುವುದರ ಮೂಲಕವಾಗಿ ಶಟದ ಒಂದು ಭಾಗವಾಗಿ ಬಿಡುತ್ತಾನೆ ಅದರಲ್ಲಿ ಬಿಡಿ.ಸಿಗರೇಟ್, ತಂಬಾಕು ಸೇವನೆ ಚಟ ಹೇಗೆಂದರೆ ಮನುಷ್ಯನ ಚಟ್ಟ ಕಟ್ಟು ವರೆಗೂ ಚಟವೂ ಮನುಷ್ಯನ ಮಾನಸಿಕ ಸ್ಥಿತಿಯಲ್ಲಿ ತನ್ನ ಪ್ರಭಾವ ಬೀರುತ್ತಿರುತ್ತದೆ. ಮಾನಸಿಕ ಸ್ಥಿತಿ ಸಮತೋಲನ ತರಲು ಸಮಾಧಾನ ಮಾಡಲು ಮದ್ಯಪಾನಕ್ಕೆ ಒಳಗಾಗುತ್ತಾನೆ ಅದು ಹೆಚ್ಚಾದಂತೆ ಸಹಜವಾಗಿ ದೇಹದ ಬೆಳವಣಿಗೆಯ ಮೇಲೆ ಮತ್ತು ದೇಹದ ಒಳಗೆ ಪರಿಣಾಮವನ್ನು ಬೀರಿ ಪಾರ್ಶ್ವವಾಯುಗೆ ಕಾರಣವಾಗುತ್ತದೆ ,
ಪಾರ್ಶ್ವವಾಯು ಲಕ್ಷಣಗಳು
* ನಿಶ್ಯಕ್ತಿ ಮತ್ತು ನಿಶ್ಚೇತನ- ಮುಖ.ಬಾಯಿ.ಕೈ- ಕಾಲುಗಳು ಒಂದೇ ಕಡೆ ಸ್ವಾದಿನಕಳೆದು ಕೊಳ್ಳುವದು
* ತಕ್ಷಣ ಮಾತು ನಿಲ್ಲುವಿಕೆ ಅಥವಾ ತೊದಲುವಿಕೆ
* ಸಮತೋಲನ ಕಳೆದುಕೊಳ್ಳುವಿಕೆ ಅಥವಾ ಗೊಂದಲದ ಮನಸ್ಸು
ಪರೀಕ್ಷಾ ವಿಧಾನಗಳು.
# ಮೆದುಳಿನ ಎಮ್ ಆರ್.ಐ ( ಮ್ಯಾಗ್ನೆಟಿಕ್ ರೆಸೊನೆನ್ಸ ಇಮೇಜಿಂಗ್)
# ಸಿ ಟಿ ಸ್ಯ್ಕಾನ್
# ಏಂಜಿಯೋಗ್ರಫಿ
ಚಿಕಿತ್ಸಾ ವಿಧಾನಗಳು
# ಕೌಮಾಡಿನ ( coumadin)
# ಆಸ್ಪಿರಿನ್ (
# ಟೆಕ್ಲೊಡಿಪಿನ್ ( tielopidin)
# ರೇವಿ ಪಾರಿಸ್ ( reviparine)
ಇಷ್ಟೆಲ್ಲಾ ವಿಧಾನಗಳಿದ್ದರೂ ಕೂಡ ಪಾಸು ಒಳಗಾಗಿ ಇರುವಂತ ವ್ಯಕ್ತಿ ಮಾನಸಿಕ ಸ್ಥಿತಿ ಮತ್ತು ಕುಟುಂಬದ ಹಾರೈಕೆ ಕಾರಣದಿಂದ ಅವನು ಗುಣಮುಖವಾಗಲು ಸಾಧ್ಯ ಪಾಶ್ವವಾಯು ಒಳಗಾಗಿರುವ ವ್ಯಕ್ತಿಯ ಒಳಗಡೆ ತಾನೇನಾದರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಮೊದಲಿನಂತೆ ಕಾರ್ಯವನ್ನು ನಿರ್ವಹಿಸಬೇಕೆಂಬ ವಿಶ್ವಾಸ ಅವನಲ್ಲಿ ಮಾಡಿದರೆ ರೋಗ ಬೇಗನೆ ಗುಣಮುಖವಾಗುತ್ತದೆ.
ಪಾರ್ಶ್ವವಾಯು ನಿವಾರಣಾ ಕ್ರಮಗಳು
# ಕಾಲ- ಕಾಲಕ್ಕೆ ವೈದ್ಯರ ಸಲಹೆ ಪಡೆಯುವದು
# ಮದ್ಯಪಾನ, ಧೂಮಪಾನ ನಿಷೇಧ
# ವ್ಯಾಯ್ಯಾಮ,ಯೋಗ, ಧ್ಯಾನ ಮಾಡುವದು
# ಒತ್ತಡ ಕಡಿಮೆ ಮಾಡಿಕೊಳ್ಳುವದು
# ವಿಶ್ರಾಂತಿ, ನಿದ್ದೆ ಸರಿಯಾಗಿ ಮಾಡುವದು
# ಉತ್ತಮ ಆರೈಕೆ
# ಕುಟುಂಬದ ಬೆಂಬಲ
# ಎಣ್ಣೆಯಿಂದ ಮಸಾಜ್ ಮಾಡುವದು
# ಸರಿಯಾದ ಸಮಯಕ್ಕೆ ಜೌಷದಿಗಳನ್ನು ತೆಗೆದುಕೊಳ್ಳುವದು..
ಸಮಯಕ್ಕೆ ಸರಿಯಾದ ಔಷಧ ಕೊಡಿಸಬೇಕು ತಪ್ಪಿದರೆ ಅವರ ಜೀವನದ ಕ್ರಮವೇ ಬದಲಾಗುತ್ತದೆ ವಿಶೇಷವಾಗಿ ಆಯುರ್ವೇದ ಔಷಧಿ ಮತ್ತು ಅಲೋಪತಿ ಔಷಧಿ ಎರಡೂ ಅವಶ್ಯವಾಗಿದೆ ಯಾವ ಪ್ರಮಾಣದಲ್ಲಿ ಪಾರ್ಶ್ವವಾಯು ಹೊಡೆದು ಯಾವ ಹಾನಿಯನ್ನು ಮೆದುಳಿನಲ್ಲಿ ಮಾಡಿದೆ ಅನ್ನೊದರ ಮೇಲೆ ನಿರ್ದಾರವಾಗುತ್ತದೆ ಚಿಕಿತ್ಸ.
ಕೊಪ್ಪಳದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಪಾರ್ಶ್ವವಾಯುಗೆ ವಿಶೇಷವಾದ ಸಂಧಿ, ನರರೋಗ ಚಿಕಿತ್ಸಾ ವಿಧಾನಗಳು ಪಂಚಕರ್ಮದ ಮೂಲಕ ಮಸಾಜ,ಅಬ್ಬೆಂಗ್ ಮತ್ತು ಸ್ವಾದನ್, ಶೀರೋ ಧಾರ, ಶೀರೋ ಭಸ್ತಿ, ಮೇರು ಭಸ್ತಿ,ಶಸ್ತಿಕಾಶಲಿ ಪಿಂಡಸ್ವಾದ,ಜಾನು ಭಸ್ತಿ ಎಣ್ಣೆ ಮಸಾಜ,ಮುಂತಾದವುಗಳ ಮೂಲಕ ರೋಗವನ್ನು ಗುಣಮುಖ ಮಾಡಲಾಗುತ್ತದೆ.ಇದರ ಜೊತೆ ಪೀಜಿಯೋ ಥೇರಫಿ.ಯೋಗ ಚಿಕಿತ್ಸೆ ಮತ್ತು ಸ್ವಾಸ್ಥ್ಯ ರಕ್ಷಣೆಗೆ ಸಲಹೆಗಳನ್ನು ಕೊಡುವದರ ಮೂಲಕ ರೋಗ ನಿವಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಇದಲ್ಲದೆ ಕಾರವಾರ ಹತ್ತಿರದ ಪಾರ್ಶ್ವವಾಯುವಿಗೆ ಸೆಂಟ್ ಮೇರಿಸ್ ಡಿಸೇಬಲ್ಡ್ ಮತ್ತು ಪ್ಯಾರಾಲೆಟಿಕ್ ಸೆಂಟರನಲ್ಲು ಚಿಕಿತ್ಸೆ ಮಾಡಲಾಗುತ್ತದೆ ಮತ್ತು ಹಲಗಾ ,ಕಿರುವತ್ತಿ, ಹುಬ್ಬಳಿ,ಹೊಸಪೇಟೆ, ದಾವಣಗೆರಾ,ಶಿವಮೊಗ್ಗ ಜಿಲ್ಲೆಯ ಪಾರ್ಶ್ವವಾಯು ಚಿಕಿತ್ಸಾ ಕೇಂದ್ರ ಮುಂತಾವುಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಈ ಎಲ್ಲಾ ಚಿಕಿತ್ಸೆ ಜೊತೆ ರೋಗಿಯ ಮಾನಸಿಕ ಸ್ಥಿತಿ,ಗುಣಮುಖವಾಗುವ ಪ್ರಮಾಣದ ಮೇಲೆ ಹಾಗೂ ರೋಗಿಯನ್ನು ಮನೆಯವರು ನೊಡಿಕೊಳ್ಳುವದರ ಮೇಲೆ ಪಾರ್ಶ್ವವಾಯು ನಿವಾರಣೆಯಾಗುವದು
ಈ ಸಮಯದಲ್ಲಿ ಕಾಲ ಬೇಕಾಗುವ ಮೂವರು ಸಂಗಾತಿಗಳು
* ಕೇಳಿದರೆ ಸಹಾಯ ಮಾಡುವ " ಮನುಷ್ಯ"
* ಕೇಳದೆ ಸಹಾಯ ಮಾಡುವ " ಸ್ನೇಹಿತ "
* ತಾವೇ ಸಹಾಯ ಬೇಕೆ ಎಂದು ಕೇಳಿ ಸಹಾಯ ಮಾಡುವ " ಆತ್ಮೀಯ"
ಈ ಮೂವರು ಯಾರಾದರು ಆಗಿರಬಹುದು ಹೆಂಡತಿಯಾಗಿರಬಹುದು, ಮಕ್ಕಳಾಗಿರಬಹುದು,ಕುಟುಂಬದ ಸದಸ್ಯರಾಗಿರಬಹುದು, ಸ್ನೇಹಿತರಾಗಿರಬಹು, ಸಮಾಜವಾಗಿರಬಹುದು ಯಾರಾದರು ಸಹಾಯಕ್ಕೆ ಬರಬೇಕು.
" ಅಭಿನಂದರ ಶೀಲಸ್ಯ
ಸದಾ ವೃದ್ದಾಪ್ಯ ಸೇವಿನಃ!!
ಚತ್ವಾರಿತಸ್ಯ ವರ್ದಂತೇ
ಆರ್ಯು ವಿಧ್ಯಾಯಶೋ ಬಲಂ!! "
ಯಾವಾಗಲೂ ವೃದ್ದರ ಸೇವೆಯು ಅಪರೂಪ ಹಾಗೂ ಅಮೂಲ್ಯ ವಯೋವೃದ್ದರ ಸೇವೆಯಿಂದ ಆಯಸ್ಸು, ವಿಧ್ಯೇ, ಯಶಸ್ಸು ಹಾಗೂ ಚೈತನ್ಯ ವೃದ್ದಿಯಾಗುವದು.ಆದುಕತೆಯ ಬರಾಟೆಯಲ್ಲಿ ಮಾನವಿನತೆಯನ್ನು ಮರೆತು ತಂದೆ ತಾಯಿಗಳನ್ನು ದೂರ ಮಾಡಿ ತಮ್ಮ ಮಕ್ಕಳಿಗೂ ಅಜ್ಜ-ಅಜ್ಜಿಯ ಪ್ರೀತಿಯನ್ನು ತೊರಿಸದೆ ವೈಭವದ ಜೀವನಕ್ಕೆ ಜೊತುಬಿದ್ದು ಜೀವನ ನಡೆಸುತ್ತಿರುವ ಈ ಕಾಲದಲ್ಲಿ ತಂದೆ-ತಾಯಿಗಳ ಜೊತೆ ತಮ್ಮ ಸಂಸಾರವನ್ನು ಸರಿದೂಗಿಸಿಕೊಂಡು ಹೊಗುವವರೆ ಸಂಖ್ಯೆಕಡಿಮೆಯಾಗಿದೆ ಅದರಲ್ಲಂದು ವೃದ್ಧಾಪ್ಯದ ಸಮಯದಲ್ಲಿ ಯಾವುದಾದರೂ ರೋಗಕ್ಕೆ ತುತ್ತಾದರೇ ಸಾಕು ಅದು ಪಾರ್ಶ್ವವಾಯು ರೋಗವಂತು ಇನ್ನೊಬ್ಬರ ಸಹಾಯವಿಲ್ಲದೇ ಏನು ಮಾಡಲು ಸಾದ್ಯವಿದರ ಕಠಿಣ ಪರಿಸ್ಥಿತಿಯಲ್ಲಿ ಹಿರಿಯ ಜೀವಗಳು ಕಾಲಕಳೆಯಬೇಕಾಗುತ್ತದೆ..
ಒಂದು ಕುಟುಂಬದಲ್ಲಿ ತಂದೆ- ತಾಯಿಗಳು ಸ್ವಶ್ಚತೆಯಿಂದ ಇರುವದಿಲ್ಲ ,ಯಾವಾಗಲು ಅನಾರೋಗ್ಯಕ್ಕೆ ಒಳಗಾಗುತ್ತಾರೆ , ಬಹಾಳ ಮಾತನಾಡುತ್ತಾರೆ ಎಂದು ದಂಪತಿಗಳು ಅವರನ್ನು ಮನೆಯ ಹೊರಗೆ ( ಜಗಲಿ ಕಟ್ಟಯಲ್ಲಿ) ಇರುವಂತೆ ಹಾಗೂ ಅವರಿಗೆ ಆಹಾರವನ್ನು ಅವರಿಗೆ ಬೇರೆಯದೆ ಪ್ಲೆಟಿನಲ್ಲಿ ಊಟ ಹಾಕುತ್ತಾರೆ.ಮನೆಯಲ್ಲಿ ಪುಟ್ಟ ಮಗು ಇದನ್ನು ಪ್ರತಿದಿನ ಗಮನಿಸುತ್ತದೆ, ಒಂದು ದಿನ ಅನಾರೋಗ್ಯದ ಕಾರಣದಿಂದಾಗಿ ವೃದ್ದರು ಸಾವನ್ನಪ್ಪುತ್ತಾರೆ ಆಗ ದಂಪತಿಗಳು ನಿಟ್ಟುಸಿರು ಬಿಡುತ್ತಾರೆ, ಮನೆಯಲ್ಲಿ ವೃದ್ದರು ಉಪಯೋಗಿಸಿದ,ಹಾಸಿಗೆ, ಊಟದ ತಟ್ಟೆ ಇತರ ವಸ್ತುಗಳನ್ನು ಮಗು ಸಂಗ್ರಹಿಸಿ ಮನೆಯೊಳಗೆ ತರುತ್ತದೆ.ಇದನ್ನ ಕಂಡ ದಂಪತಿಗಳಿಗೆ ಆಶ್ಚರ್ಯಕರವಾಗಿ ಮಗುವನ್ನು ಕೇಳುತ್ತಾರೆ ಇವುಗಳನ್ನು ಏಕೆ ಮನೆಯೊಳಗೆ ತಂದೆ ಹೊರಗಡೆ ಒಗೆಯಬೇಕು ಎನ್ನುತ್ತಾರೆ ಅದಕ್ಕೆ ಮಗು ಹೇಳುತ್ತದೆ ಇಲ್ಲಾ ಅಪ್ಪ- ಅಮ್ಮಾ ನಿವು ವೃದ್ದರಾದ ಮೇಲೆ ನಿಮಗೆ ಬೆಕಲ್ವಾ ಅದಕ್ಕೆ ತೆಗೆದಿಡುತ್ತಿದ್ದೆನೆ ಎನ್ನುತ್ತದೆ . ಈ ಮಾತಿನಿಂದ ದಂಪತಿಗಳಿಗೆ ತಮ್ಮ ತಪ್ಪಿನ ಅರಿವಾಗುತ್ತದೆ ಆದರೆ ತಂದೆ- ತಾಯಿಗಳು ಇರುವದಿಲ್ಲಾ.ಮುಪ್ಪು ಎಲ್ಲರಿಗೂ ಅನಿವಾರ್ಯ ಎಂದು ಅರಿತು ವೃದ್ದರನ್ನು ಚನ್ನಾಗಿ ನೊಡಿಕೊಳ್ಳಬೇಕು ಎಂಬುದು ತಿಳಿಯುತ್ತದೆ..
- ಶಿವನಗೌಡ ಪೊಲೀಸ್ ಪಾಟೀಲ
ಉಪನ್ಯಾಸಕರು.
ಹವ್ಯಾಸಿ ಬರಹಗಾರರು ಕೊಪ್ಪಳ.
9845646370.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ