ಆಕಾಶ
ನೀಲ ಆಕಾಶದಲ್ಲಿ ಹಾರುತ್ತಾ
ರೆಕ್ಕೆ ಬೀಸುತ್ತ
ಕಾಮನಬಿಲ್ಲ ಲಿ ಬಣ್ಣವ ತೊಡೋಣ ಬಾನಡಿಯಲಿ
ನಭದಲಿ ತೇಲಿಬಂತು ಮುತ್ತಿನ ಮೋಡ ರಾಶಿ
ಎದೆಯಲ್ಲಿ ಮೂಡಿತು ದಿವಾಕರ ಜ್ಯೋತಿ॥
ಪೂರ್ಣ ಚಂದಿರನ ಮುಖದಲಿ
ಮೂಡಿತು ನಿನ್ನ ದೀಪ್ತಿ
ಆಕಾಶದ ತೊಟ್ಟಿಲಲಿ ಮಿನುಗುವ ನಕ್ಷತ್ರ ಮಕ್ಕಳು
ಹಸಿರ ಚಿಗುರ ಕೊಕ್ಕೆಯಲಿ
ಸಂಭ್ರಮದ ಸೊಗಡು॥
ಕಣ್ಣು ಕಿವಿ ಮೂಗು ಮೂಡಿ ಅಮ್ಮ ಕೈಬೀಸಿದಂತೆ
ರೆಕ್ಕೆ ಬಿಚ್ಚಿ ಮೋಡಕ್ಕೆ ಡಿಕ್ಕಿ ಹೊಡೆದಂತೆ
ತೇಲುತ್ತ ಮುಳುಗುತ ಏರುತ
ಬಾನಾಗಲಕೆ
ಚುಕ್ಕಿಗಳ ತೋರಣ ಕಟ್ಟುವೆ॥
ಓ ಬಂಧುಗಳೇ ಬನ್ನಿರಿ ಆಕಾಶಕೆ
ಹಕ್ಕಿಗಳಂತೆ ರೆಕ್ಕೆ ಬೀಸುತ್ತಾ
ತೇಲುತ್ತ ಕುಣಿಯುತ
ಜೀವನವಿದು ಸಂಭ್ರಮಿಸೋಣ॥
ದೌರ್ಬಲ್ಯಗಳ ಕಿತ್ತೊಗೆದು
ಆಕಾಶದೆತ್ತರಕೆ ನಿಲ್ಲೋಣ
ಹೂವಿನ ಮುಖ ತೋರೋಣ
ದೃಷ್ಟಿ ಸೃಷ್ಟಿ ಸುಖ ದುಃಖ ಮೆಟ್ಟಿ ನಿಲ್ಲೋಣ॥
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್(ರಿ)
ವಿಜಯ ನಗರ ಜಿಲ್ಲಾ ಘಟಕ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ