ಹೆಣ್ಣು ಸಂಸಾರದ ಕಣ್ಣು.
ಹುಟ್ಟಿದ ಮನೆಗೆ ನಂದಾದೀಪವಾಗಿ..
ಗುರುಹಿರಿಯರಿಗೆ ವಿಧೇಯಳಾಗುವ ಹೆಣ್ಣು..
ಉತ್ತಮ ಗೃಹಿಣಿಯಾಗಿ..
ಸಮಾಜಕ್ಕೆ ಮಾದರಿಯಾಗುವಳು ಹೆಣ್ಣು..
ಗಂಡನ ಮನೆ ಬೆಳಗುವ ಜ್ಯೋತಿಯಾಗಿ...
ಈ ಜಗದ ಕಣ್ಣಾಗುವಳು ಹೆಣ್ಣು..
ಮುನಿದರೆ ಮಹಾ ಮಾರಿಯಾಗಿ..
ಒಲಿದರೆ ಮಹಾ ಮಾತೆಯಾಗುವಳು ಹೆಣ್ಣು..
ಸಂಸಾರ ಸಂಸ್ಕೃತಿಯ ಉಸಿರಾಗಿ..
ದೇವರ ಪೂಜಿಸುವ ದೇವತೆ ಹೆಣ್ಣು..
ಪ್ರಾಥಕಾಲದೊಳೆದ್ದು ಶುಚಿಯಾಗಿ..
ತುಳಸಿ ಮಾತೆಗೆ ನೀರೆರೆದು ಆರಾಧಿಸುವಳು ಹೆಣ್ಣು..
ಮನೆಯವರ ಕಾಳಜಿಯ ಜೊತಯಾಗಿ..
ಗಿಡಮರಗಳನ್ನೂ ಪೋಷಿಸುವಳು ಹೆಣ್ಣು..
ಸಂಸಾರ, ಸಂಸ್ಕಾರ ಉಳಿಸುವ ಸಲುವಾಗಿ..
ತನ್ನ ಜೀವನವನ್ನೇ ಮುಡಿಪಾಗಿಡುವಳು ಹೆಣ್ಣು..
- ಶರಣ್ಯ ತಂತ್ರಿ, ನಂದಳಿಕೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ