ಭಾನುವಾರ, ನವೆಂಬರ್ 7, 2021

ಕರುನಾಡ ಕುಡಿಗಳೆಲ್ಲ ಒಂದಾಗಿ ಬನ್ನಿ. (ಕವಿತೆ) - ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ.

ಕರುನಾಡ ಕುಡಿಗಳೆಲ್ಲ, ಒಂದಾಗಿ ಬನ್ನಿ. 
ತಾಯಿ ಭುವನೇಶ್ವರಿಯ,ನಮಿಸುವ ಬನ್ನಿ. 
ಕನ್ನಡದ ಬಾವುಟವ, ಹಾರಿಸುವ ಬನ್ನಿ. 
ಕನ್ನಡಾಂಬೆಯ, ಕೀರ್ತಿ ಜಗವ, ತುಂಬುವ ಬನ್ನಿ. 

ಅಂಧಕಾರ, ಅಹಂಕಾರ, ಅಳುಸುವ ಬನ್ನಿ. 
ಅನ್ಯಾಯ, ಅಧರ್ಮ, ಮರ್ದಿಸುವ ಬನ್ನಿ. 
ಕಾಮ -ಕ್ರೋದ, ಮದ -ಮತ್ಸರ, ಸಂಹರಿಸುವ ಬನ್ನಿ. 
ಧೀನರ, ಬಾಳಲ್ಲಿ ಬೆಳಕಾಗುವ ಬನ್ನಿ. 

ಸಂತ-ಶರಣ, ಪಕೀರರ ಕನಸು, ನನಸಾಗಿಸುವ ಬನ್ನಿ. 
ಜ್ಞಾನಿ - ವಿಜ್ಞಾನಿಗಳ, ಆಶಯ ವೃದ್ಧಿಸುವ, ಬನ್ನಿ. 
ಆದಿ, ನವ್ಯ, ಕವಿ -ಪುಂಗವರ, ಪಥದಲ್ಲಿ ಸಾಗುವ,ಬನ್ನಿ. 
ಜಾತಿ, ಮತ, ಭೇದವನ್ನು ಹೊಡೆದಾಕುವ, ಬನ್ನಿ.

 ಅನ್ಯ ಭಾಷ, ಮೋಹಿಗಳ ಏಳೆದು, ತರುವ ಬನ್ನಿ. 
ಅನುದಿನವು ಕನ್ನಡವ, ಬೆಳೆಸುವ ಬನ್ನಿ. 
ಅನುಕ್ಷಣವು ಕನ್ನಡವ, ಕಲಿಸುವ ಬನ್ನಿ.
ಅನುಗಾಲವು ಕನ್ನಡವ, ಸ್ಥಿರ ಗೊಳಿಸುವ ಬನ್ನಿ.
- ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ. 
ಮೋ :9740499814.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...